ತಡರಾತ್ರಿ 2 ಗಂಟೆಗೆ ಕೇಳಿತು ಸ್ಪೋಟದ ಶಬ್ದ, ಮನೆಯಿಂದ ಹೊರ ಬಂದಾಗ ಕಾಣಿಸ್ತು ಬೆಚ್ಚಿಬೀಳುವ ದೃಶ್ಯ

Bhadravathi-Old-Town-Police-Station

ಭದ್ರಾವತಿ: ನೆಹರೂ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳಿಗೆ (three bikes) ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಫೆಬ್ರವರಿ 16ರ ತಡರಾತ್ರಿ ಈ ಕೃತ್ಯ ನಡೆದಿದೆ. ಸುಮಾರು ₹1.85 ಲಕ್ಷ ಮೌಲ್ಯದ ಬೈಕ್‌ಗಳು ಸುಟ್ಟು ಕರಕಲಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನೆಹರೂ ನಗರದ ನಿವಾಸಿ ಆದಿಲ್ ಎಂಬುವವರು ಫೆಬ್ರವರಿ 16ರ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ತಮಗೆ ಹಾಗೂ ತಮ್ಮ ಅಣ್ಣಂದಿರಿಗೆ ಸೇರಿದ ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೈಕ್‌ಗಳನ್ನು … Read more

KSRTC ಬಸ್‌ ಹತ್ತಿ ಪರ್ಸ್‌ನಲ್ಲಿದ್ದ ಆಧಾರ್‌ ಕಾರ್ಡ್‌ ತೆಗೆಯಲು ಮಂದಾದ ಮುಹಿಳೆಗೆ ಕಾದಿತ್ತು ಶಾಕ್

KSRTC bus at MRS Circle

ಭದ್ರಾವತಿ: ಕೆಎಸ್ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ಫೆಬ್ರವರಿ 12ರಂದು ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಕೈಚೀಲದಲ್ಲಿದ್ದ 28 ಗ್ರಾಂ ತೂಕದ ಬಂಗಾರದ ಸರ (gold chain) ಕಳ್ಳತನವಾಗಿದೆ. ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದ ಶಾಂತಮ್ಮ ಎಂಬುವವರು ತಮ್ಮ ₹3,00,000 ಮೌಲ್ಯದ ಸರ ಕಳುವಾಗಿದೆ ಎಂದು ದೂರು ನೀಡಿದ್ದಾರೆ. ಶಾಂತಮ್ಮ ಅವರು ಅಂತರಘಟ್ಟಮ್ಮ ದೇವಸ್ಥಾನದ ಹಬ್ಬದ ಪ್ರಯುಕ್ತ ಭದ್ರಾವತಿಯ ಭದ್ರಾ ಕಾಲೋನಿಯಲ್ಲಿರುವ ತಮ್ಮ ತಂಗಿಯ ಮಗನ ಮನೆಗೆ ಬಂದಿದ್ದರು. ಹಬ್ಬ ಮುಗಿಸಿ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಹೋಗುವ ಸರ್ಕಾರಿ ಬಸ್ … Read more

ಆನಂದಪುರದ ಮನೆಯಲ್ಲಿ ಯುವಕ ನೇಣಿಗೆ ಶರಣು

Anandapura-youth-Succumbed-at-his-house

ಸಾಗರ: ಆನಂದಪುರ ಗ್ರಾಮದ ಅಶೋಕ ರಸ್ತೆಯಲ್ಲಿ ಯುವಕನೊಬ್ಬ (areca trader) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಶೋಕ ರಸ್ತೆಯ ನಿವಾಸಿ ನವೀನ್ (27) ನೇಣಿಗೆ ಶರಣಾದ ಯುವಕ. ನವೀನ್ ಕಳೆದ ಕೆಲವು ವರ್ಷಗಳಿಂದ ಸಣ್ಣದಾಗಿ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದರು. ಇವತ್ತು ಮನೆಯ ಹಿಂಭಾಗದಲ್ಲಿ ಜಾತ್ರೆಗೆ ಸಂಬಂಧಿಸಿದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಮನೆಯವರು, ಕೊಠಡಿಯ ಒಳಗೆ ನೋಡಿದಾಗ ನವೀನ್ ಹಗ್ಗದಿಂದ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ನವೀನ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಅವರು … Read more

ದೇವಸ್ಥಾನಕ್ಕೆ ಪೂಜೆಗೆ ಬಂದ ಅರ್ಚಕರಿಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

BHADRAVATHI-NEWS-UPDATE

ಭದ್ರಾವತಿ: ತಾಷ್ಕೆಂಟ್ ನಗರದ ಹೊರವಲಯದಲ್ಲಿರುವ ಶ್ರೀ ಕೆರೆಏರಿ ಚೌಡೇಶ್ವರಿ ದೇವಸ್ಥಾನದಲ್ಲಿ (temple) ಕಳ್ಳತನ ನಡೆದಿದೆ. ಕಳ್ಳರು ದೇವಸ್ಥಾನದ ಬಾಗಿಲು ಮುರಿದು ಸುಮಾರು ₹89,000 ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ ಕಳವು ಮಾಡಿದ್ದಾರೆ. ಅರ್ಚಕ ಉಮೇಶ್ ಅವರು ಪೂಜೆ ಮುಗಿಸಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿಕೊಂಡು ತೆರಳಿದ್ದರು. ಮರುದಿನ ಬೆಳಗ್ಗೆ ಪೂಜೆಗೆ ಬಂದಾಗ ದೇವಸ್ಥಾನದ ಬಾಗಿಲನ್ನು ಆಯುಧದಿಂದ ಮೀಟಿ ಮುರಿದಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೇವಸ್ಥಾನದ ಒಳಗೆ ಪರಿಶೀಲಿಸಿದಾಗ ದೇವಿಯ ವಿಗ್ರಹದ ಮೇಲಿದ್ದ ₹16,000 ಮೌಲ್ಯದ … Read more

28 ವರ್ಷದ ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ₹1.30 ಲಕ್ಷ ದಂಡ, ಕಾರಣವೇನು?

Shivamogga-Court-Balaraja-Urs-Road

ಶಿವಮೊಗ್ಗ: ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ ನ್ಯಾಯಾಲಯವು, ಆರೋಪಿಗೆ (Thirthahalli youth) 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹1,30,000 ದಂಡ ವಿಧಿಸಿದೆ. ತೀರ್ಥಹಳ್ಳಿ ತಾಲೂಕಿನ 28 ವರ್ಷದ ಯುವಕ, 17 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಘಟನೆ ಕುರಿತು ಬಾಲಕಿಯ ತಾಯಿ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವಕನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. … Read more

ಭದ್ರಾವತಿಯಲ್ಲಿ ಹೊಸ ಸೇತುವೆ ಮರು ನಿರ್ಮಾಣ, ಸ್ಥಳಕ್ಕೆ ಎಂಎಲ್‌ಎ ಭೇಟಿ

MLA-BK-Sangameshwara-visit-Bhadravathi-New-Bridge-Site.

ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದ ಹೊಸ ಸೇತುವೆ (new bridge) ಮರು ನಿರ್ಮಾಣ ಸ್ಥಳಕ್ಕೆ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಭೇಟಿ ನೀಡಿದ್ದರು. ಈ ಸಂದರ್ಭ ಅಧಿಕಾರಿಗಳು ಸೇತುವೆಯ ರೂಪುರೇಷೆ ಕುರಿತು ವಿವರಿಸಿದರು. ಈಗಿರುವ ಹೊಸ ಸೇತುವೆ ಎತ್ತರ ಕಡಿಮೆ ಇದೆ. ಇದರಿಂದ ಪ್ರತಿವರ್ಷ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾಗಿ ಸಮಸ್ಯೆ ಉಂಟಾಗುತ್ತಿದೆ. ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭ ನದಿ ತೀರದ ಮನೆಗಳಿಗೆ ನೀರು ನುಗ್ಗುತ್ತಿದೆ. ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಸವಾಲಿನ … Read more

ಸಾಗರ ಮಾರಿಕಾಂಬ ಜಾತ್ರೆ ಮೆರವಣಿಗೆ ಮುಗಿದ ಮೇಲೆ ವೃದ್ಧನಿಗೆ ಕಾದಿತ್ತು ಶಾಕ್

Sagara Police Station Building

ಸಾಗರ: ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಮೆರವಣಿಗೆಯ ಸಂದರ್ಭ ಜನದಟ್ಟಣೆಯಲ್ಲಿ ಕಳ್ಳರು, ವೃದ್ಧರೊಬ್ಬರ ಕೊರಳಿನಲ್ಲಿದ್ದ ₹1.05 ಲಕ್ಷ ಮೌಲ್ಯದ ಚಿನ್ನದ ಸರ (gold chain) ದೋಚಿದ್ದಾರೆ. ಜೆ.ಸಿ. ರಸ್ತೆಯ ಕಾಳಿಕಾಂಬಾ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಸಂಗಮೇಶ್ವರ ರಸ್ತೆ ನಿವಾಸಿ ಶ್ರೀಕಾಂತ ವಜ್ರ ಶೇಠ್ ಅವರು ಚಿನ್ನದ ಸರ ಕಳೆದುಕೊಂಡವರು. ಫೆಬ್ರವರಿ 12ರ ಮಧ್ಯರಾತ್ರಿ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡುವ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಜೆ.ಸಿ. ರಸ್ತೆಯ ದೇವಸ್ಥಾನದ ಬಳಿ ನಿಂತಿದ್ದ … Read more

ಶಿವಮೊಗ್ಗದಲ್ಲಿ ಸಾಕು ನಾಯಿಗಳ ಜಗಳ, ಕೈ ಕೈ ಮಿಲಾಯಿಸಿದ ಮಾಲೀಕರು, ಆಗಿದ್ದೇನು?

301123-Shimoga-Rural-Police-Station.webp

ಶಿವಮೊಗ್ಗ: ಸಾಕು ನಾಯಿಗಳ (pet dog) ಜಗಳದ ವಿಚಾರವಾಗಿ ಅಕ್ಕಪಕ್ಕದ ಮನೆಯವರ ನಡುವೆ ಜಗಳವಾಗಿ, ವೃದ್ಧೆ ಹಾಗೂ ಅವರ ಸೊಸೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಶಿವಮೊಗ್ಗ ತಾಲೂಕಿನ ಹಸೂಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸುಮಾ ಎಂಬುವವರು ತಮ್ಮ ಸಾಕು ನಾಯಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದರು. ಆಗ ಪಕ್ಕದ ಮನೆಯವರು ಸಾಕಿದ್ದ ನಾಯಿ ಸುಮಾ ಅವರ ಸಾಕು ನಾಯಿಯನ್ನು ಕಡಿಯಲು ಬಂದಿದೆ. ಈ ವೇಳೆ ನಾಯಿಗಳ ಜಗಳ ನೋಡಿ ಸುಮಾ … Read more

ಅಡ್ಡಗಟ್ಟಿ ವ್ಯಕ್ತಿಯ ಹಲ್ಲು ಮುರಿದು ನಗದು, ಚಿನ್ನದ ಸರ ದೋಚಿದ ದುಷ್ಕರ್ಮಿಗಳು, ಎಲ್ಲಿ? ಏನಿದು ಕೇಸ್?

Crime-News-General-Image

ಭದ್ರಾವತಿ: ಹಳೇ ಬುಳ್ಳಾಪುರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ ಐವರು ದುಷ್ಕರ್ಮಿಗಳು, ಹಲ್ಲೆ ನಡೆಸಿ ಸುಮಾರು ₹71 ಸಾವಿರ ಮೌಲ್ಯದ ನಗದು ಮತ್ತು ಚಿನ್ನದ ಸರ ದೋಚಿರುವ (Robbed) ಘಟನೆ ನಡೆದಿದೆ. ಕವಲಗುಂಡಿ ಗ್ರಾಮದ ನಿವಾಸಿ ಚಂದ್ರಶೇಖರ್ ಹಲ್ಲೆಗೊಳಗಾದವರು. ಹಳೇ ಬುಳ್ಳಾಪುರದ ಅಂಜನಪ್ಪ ಎಂಬುವವರನ್ನು ಭೇಟಿ ಮಾಡಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. 2ನೇ ಕ್ರಾಸ್ ರಸ್ತೆಯಲ್ಲಿ ಎರಡು ಬೈಕ್‌ಗಳಲ್ಲಿ ಬಂದ ಐವರು ವ್ಯಕ್ತಿಗಳು ಚಂದ್ರಶೇಖರ್ ಅವರನ್ನು ತಡೆದು, ‘ಆಕಾಶ್ ಕರೆಯುತ್ತಿದ್ದಾನೆ ಬಾ’ ಎಂದು ಹೇಳಿ ವಾಗ್ವಾದ … Read more

ಬಿಳಕಿಯಲ್ಲಿ ಅಂಗನವಾಡಿ ಸಹಾಯಕಿ ಮೃತದೇಹ ಪತ್ತೆ

IPS-Nikhil-B-Visit-Shiralakoppa-Bilaki-house

ಶಿಕಾರಿಪುರ: ಶಿರಾಳಕೊಪ್ಪ ಸಮೀಪದ ಬಿಳಕಿ ಗ್ರಾಮದ ಮನೆಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರ (Anganwadi assistant) ಮೃತದೇಹ ಪತ್ತೆಯಾಗಿದೆ. ಬಿಳಕಿ ಗ್ರಾಮದ ಅಂಗನವಾಡಿ ಸಹಾಯಕಿ ಪ್ರೇಮಕ್ಕ (52) ಎಂಬುವವರೇ ಕೊಲೆಯಾದ ದುರ್ದೈವಿ. ಕಳೆದ ರಾತ್ರಿ ಘಟನೆ ನಡೆದಿರುವ ಶಂಕೆ ಇದೆ. ಪ್ರೇಮಕ್ಕ ಅವರ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಇವತ್ತು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಕೋ ತಂಡ ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿದ್ದವು. ಶಿರಾಳಕೊಪ್ಪ … Read more