ತೀರ್ಥಹಳ್ಳಿಯ ಕೋಣಂದೂರು ಬಳಿ ಸೇತುವೆ ಪಕ್ಕದ ಮಣ್ಣು ಕುಸಿತ, ಅಧಿಕಾರಿಗಳು ದೌಡು

070820 Bridge Near Konanduru Problem Due To Rain 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 7 ಆಗಸ್ಟ್ 2020 ಭಾರಿ ಮಳೆಗೆ ತೀರ್ಥಹಳ್ಳಿ ತಾಲೂಕಿನ ಸೇತುವೆಯೊಂದರ ಪಕ್ಕದಲ್ಲಿ ಮಣ್ಣು ಕುಸಿದಿದೆ. ಭಾರಿ ವಾಹನ ಸಂಚಾರವನ್ನು ಇಲ್ಲಿ ನಿರ್ಬಂಧಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ದತ್ತರಾಜಪುರ – ಕುಕ್ಕೆ ಮಾರ್ಗದ ರಸ್ತೆಯಲ್ಲಿ ಈ ಸೇತುವೆ ಇದೆ. ಇದರ ಪಕ್ಕದಲ್ಲಿ ಮಣ್ಣು ಕುಸಿದಿದೆ. ವಿಚಾರ ತಿಳಿಯುತ್ತಿದ್ದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೇತುವೆ ದುರಸ್ಥಿ ಕಾರ್ಯ ಕುರಿತು ಅಧಿಕಾರಿಗಳು ಚರ್ಚೆ ನಡೆಸಿದರು. … Read more

ಭದ್ರಾ ಜಲಾಶಯಕ್ಕೆ ಒಂದೇ ದಿನ ಐದು ಅಡಿ ನೀರು, ಒಳಹರಿವು ಎಷ್ಟಿದೆ? ಈಗ ಎಷ್ಟು ಅಡಿ ನೀರಿದೆ?

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಆಗಸ್ಟ್ 2020 ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ದಾಖಲಾಗಿದೆ. ಭದ್ರಾ ಜಲಾಶಯಕ್ಕೆ ಇವತ್ತು 57,477 ಕ್ಯೂಸೆಕ್ ನೀರು ಒಳಹರಿವು ಇದೆ. ಇದರಿಂದ ಜಲಾಶಯದ ನೀರಿನ ಮಟ್ಟ 164.5 ಅಡಿಗೆ ಏರಿಕೆಯಾಗಿದೆ. ಗುರುವಾರ 159.5 ಅಡಿಯಷ್ಟು ನೀರಿನ ಸಂಗ್ರಹವಿತ್ತು. ಒಂದೆ ದಿನದಲ್ಲಿ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಐದು ಅಡಿಯಷ್ಟು ಏರಿಕೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಸಂಜೆ ವೇಳೆಗೆ … Read more

ಶರಾವತಿ ನದಿ ಮಧ್ಯೆ ಸಿಕ್ಕಿಬಿದ್ದ ಲಾಂಚ್, ಕೊನೆಗೆ ದಡ ಸೇರಿದ್ದು ಹೇಗೆ? ಚಾಲಕನ ಕಾರ್ಯಕ್ಷಮತೆ ಹೇಗಿತ್ತು?

070820 Hasirumakki Launch Reach KB Circle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಆಗಸ್ಟ್ 2020 ಶರಾವತಿ ನದಿ ನಡುವೆ ಲಾಂಚ್ ದಿಢೀರ್ ನಿಂತು ಆತಂಕ ಸೃಷ್ಟಿಸಿದ್ದ ಲಾಂಚ್, ಕೊನೆಗೂ ದಡ ಸೇರಿದೆ. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಲಾಂಚ್ ನಿಂತದ್ದು ಯಾಕೆ? ಶರಾವತಿ ಹಿನ್ನೀರು ಭಾಗದಲ್ಲಿ ಜೋರು ಗಾಳಿಯ ರಭಸಕ್ಕೆ ಲಾಂಚ್ ಚಾಲಕನ ನಿಯಂತ್ರಣ ತಪ್ಪಿದೆ. ನಿರ್ದಿಷ್ಟ ರೂಟ್ ಬಿಟ್ಟು, ಅತ್ತಿತ್ತ ಸರಿದಿದೆ. ಸೇತುವೆ ನಿರ್ಮಿಸಲು ಹಾಕಿದ್ದ ಪಿಲ್ಲರ್‍ಗೆ ಲಾಂಚ್ ಸಿಕ್ಕಿಬಿದ್ದು, ಮುಂದೆ ಸಾಗಲು ಸಾದ್ಯವಾಗಲಿಲ್ಲ. 25ಕ್ಕೂ ಹೆಚ್ಚು ಪ್ರಯಾಣಿಕರಿಗೆ … Read more

ತುಂಗಾ ಜಲಾಶಯದಿಂದ ಹೆಚ್ಚಾಯ್ತು ಹೊರ ಹರಿವು, ಹಳೆ ಶಿವಮೊಗ್ಗದಲ್ಲಿ ಭಯ, ಎಷ್ಟು ನೀರು ಹೊರ ಬಿಡಲಾಗ್ತಿದೆ?

050820 Tunga Dam 21 Crust Gate 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಆಗಸ್ಟ್ 2020 ತೀರ್ಥಹಳ್ಳಿ ಸೇರಿದಂತೆ ಜಲಾಶಯದ ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಳವಾದ ಹಿನ್ನೆಲೆಯಲ್ಲಿ, ತುಂಗಾ ಜಲಾಶಯದಿಂದ ಮತ್ತಷ್ಟು ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ. ಬೆಳಗ್ಗೆ 8 ಗಂಟೆಗೆಯ ವರದಿಯ ಪ್ರಕಾರ ತುಂಗಾ ಜಲಾಶಯದ ಎಲ್ಲಾ ಗೇಟುಗಳಿಂದ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದ ಒಳ ಹರಿವು 68,500 ಕ್ಯೂಸೆಕ್ ಇದೆ. ಹೊರ ಹರಿವು 71,000 ಕ್ಯೂಸೆಕ್ ಇದೆ. ಮೂರು ಗಂಟೆಯಿಂದ ಹೆಚ್ಚಾದ ಹರಿವು ರಾತ್ರಿ 3 … Read more

ತೀರ್ಥಹಳ್ಳಿಯ ರಾಮ ಮಂಟಪ ಮುಳುಗಡೆ, ಜನರ ನಿಯಂತ್ರಣಕ್ಕೆ ಪೊಲೀಸ್ ಬ್ಯಾರಿಕೇಡ್

060820 Thirthahalli Rama Mantapa Mulugade 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 6 ಆಗಸ್ಟ್ 2020 ಭಾರಿ ಮಳೆಯಿಂದಾಗಿ ತೀರ್ಥಹಳ್ಳಿಯಲ್ಲಿ ತುಂಗಾ ನದಿ ಮಧ್ಯೆ ಇರುವ ರಾಮ ಮಂಟಪ ಮುಳುಗಡೆಯಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಜನರು ಬರುತ್ತಿದ್ದಾರೆ. ತಂಡೋಪ ತಂಡವಾಗಿ ಬರ್ತಿದ್ದಾರೆ ಜನ ರಾಮ ಮಂಟಪ ಮುಳುಗಿರುವ ವಿಚಾರ ತಿಳಿಯುತ್ತಿದ್ದಂತೆ, ಜನರು ತಂಡೋಪ ತಂಡವಾಗಿ, ತುಂಗಾ ನದಿಯತ್ತ ಬರುತ್ತಿದ್ದಾರೆ. ನದಿ ಹರಿಯುವುದನ್ನು ಕಣ್ತುಂಬಿಕೊಳ್ಳಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಆಗಮಿಸುತ್ತಿದ್ದಾರೆ. ಪೊಲೀಸ್ ಬ್ಯಾರಿಕೇಡ್ ಈ ನಡುವೆ ತೀರ್ಥಹಳ್ಳಿ ಪೊಲೀಸರು ತುಂಗಾ ನದಿ ಕಮಾನು ಸೇತುವೆ ಸಮೀಪ … Read more

ಮಾಣಿ, ಚಕ್ರಾ, ಸಾವೇಹಕ್ಲು ಡ್ಯಾಂಗಳಿಗೂ ಒಳಹರಿವು ಹೆಚ್ಚಳ, ಚಕ್ರಾ ಸಾವೇಹಕ್ಲು ಡ್ಯಾಮ್ಗಳ ಹೊರ ಹರಿವೆಷ್ಟು?

Maani-Dam-Hosanagara

ಶಿವಮೊಗ್ಗ ಲೈವ್.ಕಾಂ | HOSANAGARA NEWS | 6 ಆಗಸ್ಟ್ 2020 ವರಾಹಿ ಜಲ ವಿದ್ಯುತ್ ಯೋಜನೆ ವ್ಯಾಪ್ತಿಯ ನಾಲ್ಕು ಅಣೆಕಟ್ಟೆ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಹಾಗಾಗಿ ನಾಲ್ಕು ಅಣೆಕಟ್ಟೆಗೂ ಒಳಹರಿವು ಹೆಚ್ಚಳವಾಗಿದೆ. ಮಾಣಿ ಡ್ಯಾಂ | ಜಲಾಶಯದ ಇವತ್ತಿನ ನೀರಿನ ಮಟ್ಟ 578.18 ಎಂಎಸ್‍ಎಲ್ ಇದೆ. 10,266 ಕ್ಯೂಸೆಕ್ ನೀರು ಒಳಹರಿವು ಇದೆ. ಮಾಣಿ ಪಿಕ್‍ಅಪ್ | ಡ್ಯಾಮ್ ಭರ್ತಿಯಾಗಿದ್ದು, 2508 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಡ್ಯಾಂನ ಮಟ್ಟ 563.57 ಎಂಎಸ್‍ಎಲ್ … Read more

ಮಳೆ ನಡುವೆಯು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಚುರುಕು, ರನ್ ವೇ ಕಾಮಗಾರಿ ಪರಿಶೀಲಿಸಿದ ಸಂಸದ ರಾಘವೇಂದ್ರ

060820 Raghavendra Visit To Shimoga Airport Spot 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಆಗಸ್ಟ್ 2020 ಮಳೆಯ ನಡುವೆಯು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಿರುಸಾಗಿ ನಡೆಯುತ್ತಿದೆ. ಸಂಸದ ಬಿ.ವೈ.ರಾಘವೇಂದ್ರ ಇವತ್ತು ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದರು. ಸೋಗಾನೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಏರ್‍ಬಸ್ ವಿಮಾನಗಳು ಲ್ಯಾಂಡಿಂಗ್ ಆಗಲು ಅನುವಾಗುವಂತೆ, ರನ್‍ವೇ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ರಾಘವೇಂದ್ರ ಸೂಚಿಸಿದರು. ವಿಮಾನ ನಿಲ್ದಾಣದ ಪ್ಲಾನ್ ಹಿಡಿದು ರನ್‍ ವೇಗೆ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ ಸಂಸದ ರಾಘವೇಂದ್ರ, ಅಧಿಕಾರಿಗಳಿಂದ … Read more

ಶರಾವತಿ ನದಿ ನಡುವೆಯೇ ನಿಂತ ಹಸಿರುಮಕ್ಕಿ ಲಾಂಚ್, ಪ್ರಯಾಣಿಕರಲ್ಲಿ ಆತಂಕ, ಹೇಗೆ ನಡೀತಿದೆ ಗೊತ್ತಾ ರಕ್ಷಣಾ ಕಾರ್ಯ?

060820 Hasirumakki Launch Struck in Middle 1

ಶಿವಮೊಗ್ಗ ಲೈವ್.ಕಾಂ | SAGARA NEWS | 6 ಆಗಸ್ಟ್ 2020 ಶರಾವತಿ ನದಿ ನಡುವೆಯೇ ಲಾಂಚ್ ನಿಂತಿದ್ದು, ಪ್ರಾಯಣಿಕರು ಆತಂಕಕ್ಕೀಡಾಗಿದ್ದಾರೆ. ಹಸಿರುಮಕ್ಕಿ ಲಾಂಚ್ ನಡುನೀರಲ್ಲೇ ನಿಂತಿದೆ. ಸಾಗರದ ಹುಲಿದೇವರ ಬನದಿಂದ ಹೊಸನಗರ ತಾಲೂಕು ಕೆ.ಬಿ.ಕ್ರಾಸ್ ಸಮೀಪಕ್ಕೆ ಹಿನ್ನೀರಿನಲ್ಲಿ ಸಂಪರ್ಕ ಕಲ್ಪಿಸಲಿದೆ ಈ ಲಾಂಚ್. ನಡು ನೀರಲ್ಲೇ ಲಾಂಚ್ ನಿಂತಿದೆ. ಅಡುಗೆ ಅನಿಲ ಸಿಲಿಂಡರ್ ತುಂಬಿರುವ ವಾಹನ, ಕಾರುಗಳು, ಬೈಕುಗಳು ಲಾಂಚ್‍ನಲ್ಲಿವೆ. ಹಲವು ಪ್ರಯಾಣಿಕರು ಇದ್ದು ಆತಂಕಕ್ಕೀಡಾಗಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿ ಲಾಂಚ್‍ ಅನ್ನು ಸುರಕ್ಷಿತವಾಗಿ ದಡಕ್ಕೆ … Read more

ನಗರ ಹೋಬಳಿಯಲ್ಲಿ ಧರೆ ಕುಸಿತ, ಯಡೂರು – ಮಾಗಲು ರಸ್ತೆ ಸಂಪರ್ಕ ಕಡಿತ

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 6 ಆಗಸ್ಟ್ 2020 ನಗರ ಹೋಬಳಿಯಲ್ಲಿ ಧರೆ ಕುಸಿದಿದ್ದು ಯಡೂರು – ಮಾಗಲು ಸಂಪರ್ಕ ಕಡಿತಗೊಂಡಿದೆ. ಮೆಕೇರಿ ಮಾರ್ಗವಾಗಿ ಮಾಗಲು ಗ್ರಾಮಕ್ಕೆ ಸಾಗುವ ಮಾರ್ಗದಲ್ಲಿ ಮಣ್ಣು ಕುಸಿದಿದೆ. ಇದರಿಂದ ಈ ಗ್ರಾಮದಲ್ಲಿರುವ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಮಾಗಲು ಗ್ರಾಮದಲ್ಲಿ ಎಂಟತ್ತು ಕುಟುಂಬಗಳಿವೆ. ಧರೆ ಕುಸಿತದಿಂದಾಗಿ ಈ ಭಾಗದ ಜನರಿಗೆ ಇದ್ದ ಏಕೈಕ ಸಂಪರ್ಕ ಮಾರ್ಗ ಇದಾಗಿತ್ತು. ಧರೆ ಕುಸಿತದಿಂದಾಗಿ ಮಣ್ಣು ಸಂಪೂರ್ಣವಾಗಿ ರಸ್ತೆಯನ್ನು ಆವರಿಸಿದೆ. ಹಾಗಾಗಿ ವಾಹನ ಸಂಚಾರ ಕಷ್ಟವಾಗಿದೆ. … Read more

ದಾಖಲೆ ಇಲ್ಲದೆ ಕಾರಿನಲ್ಲಿ 38 ಲಕ್ಷ ರುಪಾಯಿ ಸಾಗಣೆ, ಒಬ್ಬ ಅರೆಸ್ಟ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 6 ಆಗಸ್ಟ್ 2020 ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತನಿಂದ 38 ಲಕ್ಷ ರುಪಾಯಿ ಹಣ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ಸಯ್ಯದ್ ಆಸೀಫ್ (42) ಬಂಧಿತ ಆರೋಪಿ. ಸಾಗರದ ಇಂದಿರಾ ಗಾಂಧಿ ಕಾಲೇಜು ಬಳಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ, ತಪಾಸಣೆ ನಡೆಸಲಾಯಿತು. ಈ ವೇಳೆ ದಾಖಲೆ ಇಲ್ಲ ಎಂದು ಆರೋಪಿ ತಿಳಿಸಿದ್ದರಿಂದ, ಬಂಧಿಸಿ, ವಶಕ್ಕೆ ಪಡೆಯಲಾಗಿದೆ … Read more