ಚಂದ್ರಗುತ್ತಿಯಲ್ಲಿ ಮುಜರಾಯಿ ಇಲಾಖೆ ಆಡಳಿತ ಕಟ್ಟಡ ಉದ್ಘಾಟನೆ, ಸುಸಜ್ಜಿತ ಪ್ರವಾಸಿ ತಾಣವಾಗಿ ರೂಪಿಸಲು ಪ್ಲಾನ್

ಶಿವಮೊಗ್ಗ ಲೈವ್.ಕಾಂ | 15 ಡಿಸೆಂಬರ್ 2018 ಚಂದ್ರಗುತ್ತಿಯಲ್ಲಿನಿರ್ಮಿಸಿರುವ ಮುಜರಾಯಿ ಇಲಾಖೆಯ ಆಡಳಿತ ಕಟ್ಟಡವನ್ನು ಶಾಸಕ ಕುಮಾರ್ ಬಂಗಾರಪ್ಪ ಇವತ್ತು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಚಂದ್ರಗುತ್ತಿಗೆ ಸೌಕರ್ಯ ಒದಗಿಸುವ ಮೂಲಕ ಸುಸಜ್ಜಿತ ಪ್ರವಾಸಿ ತಾಣವಾಗಿ ರೂಪಿಸುವುದಾಗಿಭರವಸೆ ನೀಡಿದರು.  ಹಬ್ಬ ಮತ್ತು ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಅವರಿಗೆಮೂಲ ಸೌಕರ್ಯದ ಅಗತ್ಯವಿದೆ. ಮೊದಲ ಹಂತದಲ್ಲಿ ಮುಜರಾಯಿತ ಇಲಾಖೆ ಯಾತ್ರಿ ನಿವಾಸ, ಆಡಳಿತ ಕಚೇರಿ, ಕಲ್ಯಾಣಮಂಟಪ, ಮಳಿಗೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ ಎಂದರು. ಶಿವಮೊಗ್ಗ … Read more

ಭದ್ರಾವತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಫುಲ್ ಗರಂ, ಕಾರಣವೇನು? ಬಿಇಓಗೆ ಚಳಿಬಿಡಿಸಿದ ಜಿ.ಪಂ ಸದಸ್ಯರು

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪ್ರಗತಿ ಪರಿಶೀಲನೆ ವೇಳೆ, ವಿಳಂಬ ಧೋರಣೆ ಅನುಸರಿಸಿದ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಗರಂ ಆದರು. ಇನ್ನು, ಶಾಲಾ ಮಕ್ಕಳ ಬಳಿ ಜಿಎಸ್’ಟಿ ಇದೆಯೇ? ಲೈಸೆನ್ಸ್ ಇದೆಯೇ? ಎಂದು ಬೆದರಿಸಿದ್ದ ಬಿಇಓ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ಶಾಸಕರಿಗೆ ಹೆದರಿ ಕೆಲಸ ಮಾಡಬೇಡಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಜ್ಯೋತಿ.ಎಸ್.ಕುಮಾರ್, ಪ್ರೋಟೊಕಾಲ್ … Read more

BRP ಪೊಲೀಸ್ ಉಪಠಾಣೆ ಎದುರಿಗೆ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ಧರಣಿ

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ಪೊಲೀಸರ ದೌರ್ಜನ್ಯ ಖಂಡಿಸಿ, BRP ಉಪಠಾಣೆ ಎದುರು, ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ, ಬೆಂಬಲಿಗರೊಂದಿಗೆ ಧರಣಿ ನಡೆಸಿದರು. ಹಾಗಾಗಿ ಪೊಲೀಸರು ಠಾಣೆಗೆ ಬೀಗ ಹಾಕಿ ಹೊರಗೆ ನಿಲ್ಲುವಂತಾಯಿತು. BRPಯ ಪ್ರವಾಸಿ ಖಾಸಗಿ ಬಸ್ ಮಾಲೀಕರೊಬ್ಬರು, ತಮ್ಮ ಟಾಟಾ ಏಸ್ ವಾಹನದಲ್ಲಿ ಭದ್ರಾವತಿಯಿಂದ ಕ್ಯಾನ್’ಗಳಲ್ಲಿ ಡೀಸೆಲ್ ತರುತ್ತಿದ್ದರು. BRPಯಲ್ಲಿ ವಾಹನ ತಪಾಸಣೆ ನಡೆಸಿದ ಪೊಲೀಸರು, ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. BRPಯ ಪೆಟ್ರೋಲ್ ಬಂಕ್’ನಲ್ಲಿ ಮೋಸವಾಗುತ್ತಿದೆ ಎಂದು ಬೇರೆಡೆಯಿಂದ … Read more

ಹಣ ದುರುಪಯೋಗ, ಪಿಡಿಓ ಸಸ್ಪೆಂಡ್, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಓ ಆದೇಶ

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ಹಣ ದುರುಪಯೋಗ ಮಾಡಿರುವ ಆರೋಪದ ಹಿನ್ನೆಲೆ ಪಿಡಿಓ ಒಬ್ಬರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಓ ಶಿವರಾಮೇಗೌಡ ಆದೇಶ ಹೊರಡಿಸಿದ್ದಾರೆ. ಕೋಣಂದೂರು ಗ್ರಾಮ ಪಂಚಾಯಿತಿಯ ಪಿಡಿಓ ಕೆ.ಎಸ್.ಕುಮಾರ್ ಅಮಾನತುಗೊಂಡವರು. ಮುಖ್ಯ ಲೆಕ್ಕಾಧಿಕಾರಿ ನೀಡಿದ ವರದಿ ಅನುಸಾರ ಕೆ.ಸಿ.ಎಸ್ (ಸಿಸಿಎ) ನಿಯಮ 10ರ ಅಡಿಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಪಿಡಿಓ ಅಮಾನತಿಗೆ ಕಾರಣಗಳೇನು? ಪಿಡಿಓ ಕೆ.ಎಸ್.ಕುಮಾರ್, ಹಿಂದಿನ ಪಿಡಿಓ ಸಹಿ ಫೋರ್ಜರಿ ಮಾಡಿ, … Read more

ಸಾವಿರ ಸಾವಿರ ಜನರ ಮುಂದೆ ಸನ್ಯಾಸ ದೀಕ್ಷೆ ಪಡೆದರು ಭದ್ರಾವತಿಯ ಇಂಜಿನಿಯರಿಂಗ್ ಪದವೀಧರ

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018 ಇಂಜಿನಿಯರಿಂಗ್ ಪದವೀಧರೊಬ್ಬರು ಭದ್ರಾವತಿಯಲ್ಲಿ ಜೈನ ದೀಕ್ಷೆ ಪಡೆದು, ಸನ್ಯಾಸಿಯಾಗಿದ್ದಾರೆ. ಮೂರು ದಿನ ನಡೆದ ಕಾರ್ಯಕ್ರಮದ ಕೊನೆಯ ದಿನ, ದೀಕ್ಷೆ ಸ್ವೀಕರಿಸಿದ್ದಾರೆ. ಭದ್ರಾವತಿಯ ಭೂತನಗುಡಿಯ ದಿನೇಶ್ ಜೈನ್, ರಾಜುಲ್ ದೇವಿ ದಂಪತಿಯ ಮಗ ಜಿನೇಶ್ ಕುಮಾರ್ ಜೈನ್ ಜೈನ ಸನ್ಯಾಸಿಯಾಗಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿದ್ದ ಜಿನೇಶ್ ಕುಮಾರ್ ಅವರು, ದೀಕ್ಷೆ ಪಡೆದು ಖೀಮಾ ವಿಜಯ್ ಜೀ ಮಹಾರಾಜ್ ಸಾಹೇಬ್ ಆಗಿದ್ದಾರೆ. ಜಿನೇಶ್ ಕುಮಾರ್ ಜೈನ್ ಆವರೊಂದಿಗೆ ಆಂಧ್ರದ ಭರತ್ ಕುಮಾರ್, … Read more

ಮತ್ತೊಂದು ಸುತ್ತಿನ ಪಾದಯಾತ್ರೆಗೆ ಕಿಮ್ಮನೆ ರತ್ನಾಕರ್ ಸಜ್ಜು, ಎಲ್ಲಿಂದೆಲ್ಲಿಗೆ ಪಾದಯಾತ್ರೆ? ಕಾರಣವೇನು?

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018 ಶಾಸಕ ಆರಗ ಜ್ಞಾನೇಂದ್ರ ಅವರ ಹಗರಣಗ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ಇದಕ್ಕೂ ಮೊದಲು ತೀರ್ಥಹಳ್ಳಿಯಲ್ಲಿ ಎರಡು ಪಾದಯಾತ್ರೆಗಳನ್ನು ನಡೆಸುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ. ಏನೆಲ್ಲ ಹಗರಣಗಳಾಗಿವೆ? ಪಟ್ಟಿ ಬಿಡುಗಡೆ ಯಾವಾಗ? ಆರಗ ಜ್ಞಾನೇಂದ್ರ ಕ್ಷೇತ್ರದ ಶಾಸಕರಾಗುವ ಬದಲು ಬಿಜೆಪಿ ಶಾಸಕರಾಗಿದ್ದಾರೆ. ಅವರು ಶಾಸಕರಾದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶಾಸಕರ ಬೆಂಬಲಿಗರೇ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಬಿಜೆಪಿ ತಾ.ಪಂ ಸದಸ್ಯರೊಬ್ಬರು ಪ್ರತೀ … Read more

ಸಾಲ, ಬಡ್ಡಿ, ಬ್ಲಾಂಕ್ ಚೆಕ್ಕುಗಳಿಗೆ ಹೆದರಿ ವಿಷ ಕುಡಿದ ಹೊಸನಗರದ ಯುವಕ

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018 ಸಾಲ ಕೊಟ್ಟವರು ಮನೆಗೆ ಬಾಗಿಲಿಗೆ ಬಂದು ಬೆದರಿಸಿ, ಕೋರ್ಟ್’ನಲ್ಲಿ ಪ್ರಕರಣ ದಾಖಲಿಸಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಕುಡಿದಿದ್ದ ಯುವಕನನ್ನು ಆತನ ಸ್ನೇಹಿತರೇ ಆಸ್ಪತ್ರೆಗೆ  ದಾಖಲಿಸಿದ್ದಾರೆ. ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಹೊಸನಗರ ತಾಲೂಕಿನ ಕಲ್ಲುಕೊಪ್ಪ ಗ್ರಾಮದ ನಾಗರಾಜ್ (20) ಆತ್ಮಹತ್ಯೆಗೆ ಯತ್ನಿಸಿದಾತ. ವಿಷಯ ಕುಡಿಯುವ ಮೊದಲು ನಾಗರಾಜ್ ಡೆತ್ ನೋಟ್ ಬರೆದಿದ್ದಾನೆ. ಏನಿದು ಘಟನೆ? ಗಲಾಟೆ ಮಾಡಿದ್ಯಾರು? ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ್, ಸಾಗರದ … Read more

ನೂರು ಕ್ವಿಂಟಾಲ್ ಜೋಳ ಧಗಧಗ, ಶಾರ್ಟ್ ಸರ್ಕಿಟ್’ಗೆ ಎರಡೂವರೆ ಎಕರೆ ಕಬ್ಬು ಭಸ್ಮ

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ಪ್ರತ್ಯೇಕ ಪ್ರಕರಣದಲ್ಲಿ ಕಬ್ಬು ಮತ್ತು ನೂರು ಕ್ವಿಂಟಾಲ್ ಜೋಳ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತರಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ನೂರು ಕ್ವಿಂಟಾಲ್ ಜೋಳಕ್ಕೆ ಬೆಂಕಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ನೂರು ಕ್ವಿಂಟಾಲ್’ನಷ್ಟು, ಕಟಾವು ಮಾಡಿದ್ದ ಮೆಕ್ಕೆ ಜೋಳ ಸುಟ್ಟು ಹೋಗಿದೆ. ತಾಲೂಕಿನ ಹೆಗ್ಗೋಡು ಗ್ರಾಮದ ಮಲ್ಲಿಕಾರ್ಜುನಗೌಡ ಎಂಬುವವರಿಗೆ ಸೇರಿದ ಮೆಕ್ಕೆ ಜೋಳಕ್ಕೆ ಬೆಂಕಿ ತುಗಿಲಿದೆ. ನಾಲ್ಕು ಎಕರೆಯಲ್ಲಿ ಬೆಳೆದ ಮೆಕ್ಕೆ ಜೋಳವನ್ನು ಕಟಾವು ಮಾಡಿ, ರಾಶಿ … Read more

ತೀರ್ಥಹಳ್ಳಿಯಲ್ಲಿ ಇಸ್ಪೀಟ್, ಗಾಂಜಾ, ಅಕ್ರಮ ಮದ್ಯಕ್ಕೆ ಬೀಳುತ್ತಾ ತಡೆ?

Thirthahalli V

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ವಿದ್ಯಾರ್ಥಿಯೊಬ್ಬನ ಕೊಲೆ ಹಿನ್ನೆಲೆ ತೀರ್ಥಹಳ್ಳಿಯಲ್ಲಿ ಶಾಲಾ, ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಮುಖ್ಯ ಶಿಕ್ಷಕರು, ಪೊಲೀಸರ ಸಮಾಲೋಚನಾ ಸಭೆ ನಡೆಯಿತು. ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ತಾಲೂಕಿನಲ್ಲಿ ಕಾನೂನು ಬಿಗಿಗೊಳಿಸಬೇಕು. ಇಲ್ಲವಾದಲ್ಲಿ ಪೊಲೀಸ್ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು. ಏನೇನು ಚರ್ಚೆಯಾಯ್ತು? ತಾಲೂಕಿನ ಘನತೆಗೆ ಧಕ್ಕೆ ತರುವಂತಹ ಘಟನೆಗಳು ಈಚೆಗೆ ನಡೆದಿವೆ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. … Read more

ಸಾಗರದಲ್ಲಿ ಎರಡು ದಿನ ಬೆಳಗಿಂದ ಸಂಜೆವರೆಗೂ ಕರೆಂಟ್ ಇರಲ್ಲ, ಎಲ್ಲೆಲ್ಲಿ ಪವರ್ ಕಟ್ ಆಗುತ್ತೆ?

power cut graphics

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ಸಾಗರ ನಗರ ವ್ಯಾಪ್ತಿಯಲ್ಲಿ ಡಿ.5 ಮತ್ತು 7ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಕರೆಂಟ್ ಇರೋದಿಲ್ಲ. ಘಟಕ – 1 ಮತ್ತು ಘಟಕ – 2 ರಲ್ಲಿ ಎಚ್.ಟಿ.ಎ.ಬಿ ಕೇಬಲ್ ಅಳವಡಿಸುವ ಕಾಮಗಾರಿ ಇರುವುದರಿಂದ ಈ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಎಲ್.ಬಿ.ಕಾಲೇಜು, ಪ್ರಗತಿನಗರ, ಲೋಹಿಯಾ ನಗರ, ಮಂಕಳಲೆ, ಅಂಬಾಪುರ, ಕುಗ್ವೆ, ವಿನೋಬನಗರ, ನೆಹರು ನಗರ, ಹಾನಂಬಿ ರಸ್ತೆ, ಎಸ್.ಎನ್.ನಗರ, ಚಿಪ್ಪಳಿ, ವರದಾ ಕಾಲನಿ, ಆದಿಶಕ್ತಿನಗರ, ವಿಜಯನಗರ, … Read more