SAGARA | ಸಾಗರಕ್ಕೆ ಸಿಎಂ ಯಡಿಯೂರಪ್ಪ ಭೇಟಿ, ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನ, ಯುವಕರ ಬಂಧನ

ಶಿವಮೊಗ್ಗ ಲೈವ್.ಕಾಂ | SAGARA | 08 ಡಿಸೆಂಬರ್ 2019 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಪ್ಪು ಬಾವುಟ ತೋರಿಸಲು ಯತ್ನಿಸಿದ ಯುವಕರ ಗುಂಪನ್ನು ಸಾಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕಾಗಿ ಇವತ್ತು ಸಿಎಂ ಯಡಿಯೂರಪ್ಪ ಸಾಗರಕ್ಕೆ ಭೇಟಿ ನೀಡಿದ್ದಾರೆ. ಸಾಗರ ಪಟ್ಟಣದಲ್ಲಿ ಸಿಎಂ ಕಾರು ಅಡ್ಡಗಟ್ಟಿ ಕಪ್ಪು ಬಾವುಟ ತೋರಿಸಲು ಯುವಕರ ಗುಂಪು ಸಿದ್ಧವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲಿಸರು ಯುವಕರನ್ನು ಬಂಧಿಸಿದ್ದಾರೆ. ಕಪ್ಪು ಬಾವುಟ ಪ್ರದರ್ಶನಕ್ಕೆ ಕಾರಣವೇನು? ಬಂಧಿತ ಯುವಕರು ಟಿಪ್ಪು ಸಹಾರ ಕಮಿಟಿ ಸದಸ್ಯರಾಗಿದ್ದಾರೆ. ರಾಜ್ಯದಲ್ಲಿ … Read more

SAGARA | ‘ಸಾಗರದಲ್ಲಿ ಸಂಶೋಧನಾ ಕೇಂದ್ರ ಸೂಕ್ತ, ಜಾತ್ರೆ ಬಳಿಕ ಸೊರಬ ರಸ್ತೆ ಅಗಲೀಕರಣ’

ಶಿವಮೊಗ್ಗ ಲೈವ್.ಕಾಂ | SAGARA | 08 ಡಿಸೆಂಬರ್ 2019 ಮಂಗನ ಕಾಯಿಲೆ ಸಂಶೋಧನೆಗೆ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಸಂಶೋಧನ ಕೇಂದ್ರವನ್ನು ಸಾಗರದಲ್ಲೇ ಸ್ಥಾಪಿಸುವುದು ಸೂಕ್ತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಸಾಗರ ಶಾಸಕ ಹಾಲಪ್ಪ ಅವರ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಸಾಗರ ತಾಲೂಕಿನಲ್ಲಿ ಕೆಎಫ್’ಡಿಯಿಂದ ಜನರು ತತ್ತರಿಸಿದ್ದಾರೆ. ಹಾಗಾಗಿ ಇಲ್ಲಿಯೇ ಸಂಶೋಧನ ಕೇಂದ್ರ ತೆರೆಯುವುದು ಸೂಕ್ತ ಎಂದರು. ಜಾತ್ರೆ ಬಳಿಕ ರಸ್ತೆ ಅಗಲೀಕರಣ ಸೊರಬ … Read more

SAGARA | ಇನ್ನೂ ಆರಂಭವಾಗದ ಇಂದಿರಾ ಕ್ಯಾಂಟೀನ್, ಜೋಗ ರಸ್ತೆಯಲ್ಲಿ ಮಾಜಿ ಮಿನಿಸ್ಟರ್ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | SAGARA | 05 ಡಿಸೆಂಬರ್ 2019 ಬಿಜೆಪಿ ಸರ್ಕಾರ ಮತ್ತು ಶಾಸಕರ ನಿರ್ಲಕ್ಷ್ಯದಿಂದಾಗಿ ಈವರೆಗೂ ಸಾಗರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿಲ್ಲ ಎಂದು ಆರೋಪಿಸಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಜೋಗ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಇಂದಿರಾ … Read more

SAGARA | ಹಳೆ ಕಾಲದ ಚಿನ್ನ ಅಂತಾ ನಂಬಿಸ್ತಿದ್ದರು, ದುಡ್ಡು ಪಡೆದು ಪರಾರಿಯಾಗ್ತಿದ್ದರು, ತ್ಯಾಗರ್ತಿ ಬಳಿ ಸಿಕ್ಕಿಬಿದ್ದರು

prison hand cuff image

ಶಿವಮೊಗ್ಗ ಲೈವ್.ಕಾಂ | SAGARA | 05 ಡಿಸೆಂಬರ್ 2019 ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಂಧಿಸಿ 1 ಲಕ್ಷ ರೂ. ನಗದು ಹಾಗೂ 3 ಲಕ್ಷ ರೂ. ಬೆಲೆಯ ಟಾಟಾ ಏಸ್ ವಾಹನ ಮತ್ತು ನಕಲಿ ಬಂಗಾರ ವಶಕ್ಕೆ ಪಡೆದಿದ್ದಾರೆ. ಬಂಧಿತರು ಹಳೇ ಕಾಲದ ಬಂಗಾರದ ನಾಣ್ಯ ತಮಗೆ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ಹೊಸದುರ್ಗದ ಹುಣಸೇಕಟ್ಟೆಯ ಸತೀಶ್ ಮತ್ತು … Read more

ಜೋಗ ಕಾರ್ಗಲ್ ಪಟ್ಟಣ ಪಂಚಾಯತಿ ಎಲಕ್ಷನ್, ಅರಳಿದ ಕಮಲ, ಕೈಗೆ ಭಾರಿ ಮುಖಭಂಗ, ಯಾವ್ಯಾವ ವಾರ್ಡ್’ನಲ್ಲಿ ಯಾರೆಲ್ಲ ಗೆದ್ದಿದ್ದಾರೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 14 ನವೆಂಬರ್ 2019 ತೀವ್ರ ಕುತೂಹಲ ಕೆರಳಿಸಿದ್ದ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದೇ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕೇವಲ ಒಂದು ಸ್ಥಾನ ಗಳಿಸಿ ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸಿದೆ. ಕಾರ್ಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಒಟ್ಟು 11 ಸ್ಥಾನದ ಪೈಕಿ ಬಿಜೆಪಿ 9, ಕಾಂಗ್ರೆಸ್ 1 ಮತ್ತು ಪಕ್ಷೇತರ ಅಭ್ಯರ್ಥಿ 1 … Read more

ಇಂಟರ್’ಸಿಟಿ ರೈಲಿಗೆ ಸಿಲುಕಿ ಸಾಗರದ ಮೀನು ವ್ಯಾಪಾರಿ ಸಾವು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 7 ನವೆಂಬರ್ 2019 ಇಂಟರ್’ಸಿಟಿ ರೈಲಿಗೆ ಸಿಲುಕಿ ಮೀನು ವ್ಯಾಪಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಸಾಗರದ ಚಂದ್ರಮಾವಿನಕೊಪ್ಪಲು ರೈಲು ಹಳಿ ಬಳಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಗುಲಾಮುಹಿದ್ದಿನ್ ರಸ್ತೆಯ ಮೀನು ವ್ಯಾಪಾರಿ ಮುಕ್ತಿಯಾರ್ (38) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಬೆಳಗ್ಗೆ ಇಂಟರ್’ಸಿಟಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಮುಕ್ತಿಯಾರ್ ಅವರ ಪತ್ನಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. … Read more

ಸಾಲ ಕೊಟ್ಟ ಫೈನಾನ್ಸ್ ಸಂಸ್ಥೆಗಳಿಂದ ಮಾನಸಿಕ ಹಿಂಸೆ, ಸಾಗರದಲ್ಲಿ ತಿರುಗಿಬಿದ್ದ ಜನ

ಶಿವಮೊಗ್ಗ ಲೈವ್.ಕಾಂ | SAGARA | 7 ನವೆಂಬರ್ 2019 ವಿವಿಧ ಖಾಸಗಿ ಫೈನಾನ್ಸ್ ಸಂಸ್ಥೆಗಳು ನೀಡುತ್ತಿರುವ ಕಿರುಕುಳದ ವಿರುದ್ಧ ಕಾನೂನು ಕ್ರಮಜರುಗಿಸುವಂತೆ ಒತ್ತಾಯಿಸಿ ಸಾಗರದಲ್ಲಿ ನೊಂದ ಗ್ರಾಹಕರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಸಾಗರ ನಗರ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಸಾಲ ನೀಡುತ್ತಿರುವ ಖಾಸಗಿ ಫೈನಾನ್ಸ್’ಗಳು ಸಾಲ ಪಡೆಯುವ ನೆಪದಲ್ಲಿ ಗ್ರಾಹಕರಿಗೆ ಕಿರುಕುಳ ನೀಡುತ್ತಿವೆ. ಸಾಲ ವಸೂಲಿ ನೆಪದಲ್ಲಿ ಮನೆಗೆಬರುವ ಫೈನಾನ್ಸ್ ಕಂಪನಿಯವರು ಬಾಯಿಗೆ ಬಂದಂತೆ ಮಾತನಾಡುವ ಜತೆಗೆ ಹಣ ಕೊಡದೆ ಮನೆಯಿಂದ ಹೋಗುವುದಿಲ್ಲ. ಹಣ ಕಟ್ಟುವುದು ವಿಳಂಬವಾದರೆ … Read more

ಸಾಗರದ ವಿವಿಧೆಡೆ ರೈಲ್ವೆ ಮಾರ್ಗ ಪರಿಶೀಲನೆ, ನ.6ರವರೆಗೆ ರಸ್ತೆ ಸಂಚಾರ ಬದಲು, ಪರ್ಯಾಯ ಮಾರ್ಗಗಳು ಯಾವುದು ಗೊತ್ತಾ?

Sagara Train General Image

ಶಿವಮೊಗ್ಗ ಲೈವ್.ಕಾಂ | SAGARA | 31 ಅಕ್ಟೋಬರ್ 2019 ಸಾಗರ ತಾಲೂಕಿನ ವಿವಿಧೆಡೆ ಹಾದು ಹೋಗಿರುವ ರೈಲ್ವೆ ಮಾರ್ಗದಲ್ಲಿ ತಾಂತ್ರಿಕ ಪರಿಶೀಲನೆ ಕಾರ್ಯ ನಡೆಯಲಿದೆ. ವಿವಿಧ ಲೆವೆಲ್ ಕ್ರಾಸ್’ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿನ್ನೆಯಲ್ಲಿ ನ.6ರವರೆಗೆ ವಿವಿಧೆಡೆ ರಸ್ತೆ ಸಂಚಾರಕ್ಕೆ ತೊಡಕಾಗಲಿದೆ. ಹಾಗಾಗಿ ಪರ್ಯಾ ಮಾರ್ಗದಲ್ಲಿ ವಾಹನ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಎಲ್ಲೆಲ್ಲಿ? ಯಾವಾಗ ಪರಿಶೀಲನೆ ನಡೆಯುತ್ತೆ? ನ.1ರ ಬೆ.8 ರಿಂದ ಸಂಜೆ 6.30 :  ಬಾಳೆಗುಂಡಿ ರಸ್ತೆಯಲ್ಲಿ ಹಾದು ಹೋಗಿರುವ ಲೆವೆಲ್ ಕ್ರಾಸ್ … Read more

ಸಾಗರ ಮಾರಿಕಾಂಬ ಜಾತ್ರೆಗೆ ಸಿದ್ಧತೆ ಶುರು, ಸರ್ಕಾರದಿಂದ 6.80 ಕೋಟಿ ರಿಲೀಸ್

ಶಿವಮೊಗ್ಗ ಲೈವ್.ಕಾಂ | SAGARA | 31 ಅಕ್ಟೋಬರ್ 2019 ಮುಂದಿನ ವರ್ಷ ಫೆಬ್ರವರಿಯಲ್ಲಿ ರಾಜ್ಯದ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾಗಿರುವ ಶ್ರೀ ಮಾರಿಕಾಂಬಾ ಜಾತ್ರೆ ಅಂಗವಾಗಿ ರಾಜ್ಯ ಸರ್ಕಾರ ಶಾಸಕರ ನಿಧಿಗೆ 6.80 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನವನ್ನು ನಗರವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ವಿವಿಧ ಅಗತ್ಯ ಕಾಮಗಾರಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಶಾಸಕ ಹೆಚ್.ಹಾಲಪ್ಪ ಹೇಳಿದರು. ನಗರದ ವಿವಿಧ ಭಾಗಗಳಲ್ಲಿ ರಸ್ತೆ ನಿರ್ಮಾಣ, ಗಣಪತಿ ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಸಂಬಂಧ ಸ್ಥಳ … Read more

ಸಾಗರ ತಾಲೂಕಿನ ಎಲ್ಲ ಶಾಲೆಗಳಿಗೆ ನಾಳೆ ರಜೆ, ನಿರಂತರ ಸುರಿಯುತ್ತಿದೆ ಮಳೆ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 25 ಅಕ್ಟೋಬರ್ 2019 ಹೊಸನಗರ ಮತ್ತು ಸಾಗರ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಗರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಾಗರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಕ್ಟೋಬರ್ 26ರಂದು ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – 9964634494 ಈ ಮೇಲ್ ಐಡಿ | shivamoggalive@gmail.com