ಆನಂದಪುರ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ, ಮೋರಿ ಕಟ್ಟೆಗೆ ಗುದ್ದಿದ ಕಾರು

ಶಿವಮೊಗ್ಗ ಲೈವ್.ಕಾಂ | 17 ಮಾರ್ಚ್ 2019 ನರಸೀಪುರದಲ್ಲಿ ಔಷಧಿ ಪಡೆಯಲು ಬರುತ್ತಿದ್ದವರ ಕಾರು ರಸ್ತೆ ಪಕ್ಕದ ಮೋರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಹಾರಾಷ್ಟ್ರ ಮೂಲದ ಒಬ್ಬರು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಬೈರಾಪುರದಲ್ಲಿ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಕಾರು, ಬೈರಾಪುರ ಬಳಿಯ ರಸ್ತೆ ಪಕ್ಕದಲ್ಲಿದ್ದ ಮೋರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಬಾಲ ಸಾಹೇಬ್ ಕೃಷ್ಣ ದೇಸಾಯಿ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಜು … Read more

ಶಾಸಕ ಹರತಾಳು ಹಾಲಪ್ಪ ಕಾರು ಅಪಘಾತ, ರಸ್ತೆ ಪಕ್ಕದ ಗುಂಡಿಗೆ ಬಿದ್ದ ಕಾರು

ಶಿವಮೊಗ್ಗ ಲೈವ್.ಕಾಂ | 16 ಮಾರ್ಚ್ 2019 ಶಾಸಕ ಹರತಾಳು ಹಾಲಪ್ಪ ಅವರ ಕಾರು ಅಪಘತಕ್ಕೀಡಾಗಿದೆ. ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಕಾರು ರಸ್ತೆ ಪಕ್ಕದ ಗುಂಡಿಗೆ ಬಿದ್ದಿದೆ. ಕಾರಿನಲ್ಲಿದ್ದ ಶಾಸಕ ಹಾಲಪ್ಪ ಅವರಿಗೆ ಯಾವುದೇ ಅಪಾಯವಾಗಿಲ್ಲ. ಶಾಸಕ ಹಾಲಪ್ಪ ಅವರು ಸಾಗರದಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದರು. ಈ ವೇಳೆ ಕಾಸ್ಪಾಡಿ ಬಳಿ, ಅಡ್ಡಬಂದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾರೆ. ಆದರೆ, ಚಾಲಕನ ನಿಯಂತ್ರಣ ತಪ್ಪಿದ ಕಾರು, ಗುಂಡಿಗೆ ಬಿದ್ದಿದೆ ಎಂದು ತಿಳಿದು … Read more

ಮಧು ಬಂಗಾರಪ್ಪ ಬದಲು ಶಿವಮೊಗ್ಗ ಲೋಕಸಭೆಗೆ ಕಾಗೋಡು ತಿಮ್ಮಪ್ಪಗೆ ಟಿಕೆಟ್ ನೀಡುವಂತೆ ಒತ್ತಾಯ

ಶಿವಮೊಗ್ಗ ಲೈವ್.ಕಾಂ | 10 ಮಾರ್ಚ್ 2019 ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಬೇಕು ಅನ್ನುವ ಒತ್ತಾಯ ಶುರುವಾಗಿದೆ. ಸಾಗರದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಕಾಗೋಡು ತಿಮ್ಮಪ್ಪ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಆ ಬಳಿಕ ಮಧು ಬಂಗಾರಪ್ಪ ಜಿಲ್ಲೆಯ ಜನರೊಂದಿಗೆ ಸಂಪರ್ಕದಲ್ಲಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನ ಜೆಡಿಎಸ್ … Read more

ಸಾಗರದಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ, ಅರಳಗೋಡಿನ ಮಹಿಳೆ ಮಣಿಪಾಲದಲ್ಲಿ ಸಾವು

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019 ಶಂಕಿತ ಮಂಗನ ಕಾಯಿಲೆ ಮತ್ತೊಬ್ಬ ಮಹಿಳೆಯನ್ನ ಬಲಿ ಪಡೆದಿದೆ. ಅರಳಗೋಡು ಗ್ರಾಮದ ಪೂರ್ಣಿಮಾ (36) ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತೀವ್ರ ಜ್ವರದಿಂದಾಗಿ ಪೂರ್ಣಿಮಾ ಅವರು ಫೆ.27ರಂದು ಮಣಿಪಾಲ್ ಅಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ಕೂಡಲೇ ಐಸಿಯುಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಪೂರ್ಣಿಮಾ ಕೊನೆಯುಸಿರೆಳೆದಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಕಾರ್ಗಲ್’ನ ಕಾಳಮಂಜಿ ಗ್ರಾಮದ ಪಾರ್ಶ್ವನಾಥ್ ಅವರು, ಶಂಕಿತ ಮಂಗನ ಕಾಯಿಲೆಗೆ ಮೃತಪಟ್ಟಿದ್ದರು. … Read more

ವಕೀಲನ ಮೇಲೆ ಸರ್ಕಲ್ ಇನ್ಸ್’ಪೆಕ್ಟರ್ ಹಲ್ಲೆ, ಸಾಗರದಲ್ಲಿ ಪೊಲೀಸ್ ವಿರುದ್ಧ ವಕೀಲರ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | 3 ಮಾರ್ಚ್ 2019 ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ವಕೀಲರ ಸಂಘ ಪ್ರತಿಭಟನೆ ನಡೆಸಿತು. ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು. ವಕೀಲ ಎಸ್.ಬಿ.ರಾಜೇಶ್ ಅವರ ಮೇಲೆ ಗ್ರಾಮಾಂತರ ಠಾಣೆ ಸಿಪಿಐ ಮಂಜುನಾಥ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಸಮೀಪದ ಕ್ಯಾಂಟೀನ್’ನಲ್ಲಿ ವಕೀಲ ರಾಜೇಶ್ ಊಟ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹೋಂ ಗಾರ್ಡ್ … Read more

ಕಾಲೇಜು ಬಳಿ ಗಾಂಜಾ ಮಾರುತ್ತಿದ್ದವನು ಅರೆಸ್ಟ್, ಒಂದು ಕೆಜಿಯಷ್ಟು ಗಾಂಜಾ ಸೀಜ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 1 ಮಾರ್ಚ್ 2019 ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ ಒಂದು ಕೆಜಿ ನೂರು ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಗಾಂಜಾ ತೂಕ ಮಾಡುವ ಯಂತ್ರ ಮತ್ತು ಬೈಕನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಸ್ತಾಕ್, ಬಂಧಿತ ವ್ಯಕ್ತಿ. ಇಕ್ಕೇರಿ ರಸ್ತೆಯ ಪಾಲಿಟೆಕ್ನಿಕ್ ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ, ದಾಳಿ ಮಾಡಿದ ಸಾಗರ ನಗರ ಠಾಣೆಯ ಪೊಲೀಸರು ಮುಸ್ತಾಕ್’ನನ್ನು ಬಂಧಿಸಿದ್ದಾರೆ. … Read more

‘ಸಿಗಂದೂರು ಸೇತುವೆ ನಿರ್ಮಾಣಕ್ಕಿದ್ದ ಅಡೆತಡೆಯಲ್ಲೆ ಕ್ಲಿಯರ್, ಟೆಂಡರ್ ಪ್ರಕ್ರಿಯೆ ಇನ್ನು ಸುಗಮ’

Sigandur Launch with people 1

ಶಿವಮೊಗ್ಗ ಲೈವ್.ಕಾಂ | 26 ಫೆಬ್ರವರಿ 2019 ಅಂಬರಗೋಡ್ಲು – ಕಳಸವಳ್ಳಿ ನಡುವಿನ ಸೇತುವೆಗೆ ಇದ್ದ ಅಡೆತಡೆಗಳೆಲ್ಲ ನಿವಾರಣೆಯಾಗಿದೆ. ಮೂರ್ನಾಲ್ಕು ದಿನದಲ್ಲಿ ಸಿಗಂದೂರು ಸೇತುವೆಗೆ ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಲಿದೆ ಅಂತಾ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ತುಮರಿಯಲ್ಲಿ ಡಿಜಿಟಲ್ ಗ್ರಾಮಕ್ಕೆ ಚಾಲನೆ ನೀಡಿದ ರಾಘವೇಂದ್ರ, ಕಳೆದ ವರ್ಷ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, 470 ಕೋಟಿಯ ಸಿಗಂದೂರು ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ವನ್ಯಜೀವಿ ಸಂರಕ್ಷಣಾ ಇಲಾಖೆ ಮತ್ತು ಕೆಪಿಸಿ ಅಡ್ಡಗಾಲು ಹಾಕಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. … Read more

ಮಂಗನಕಾಯಿಲೆ ಆತಂಕದಲ್ಲಿರುವ ಸಾಗರದ ಗ್ರಾಮಕ್ಕೆ ಮಿನಿಸ್ಟರ್ ಭೇಟಿ, ಆರೋಗ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಏನಂದ್ರು?

070119 Minister Visit Aralagodu village 1

ಶಿವಮೊಗ್ಗ ಲೈವ್.ಕಾಂ | 07 ಜನವರಿ 2019 ಮಂಗನಕಾಯಿಲೆಯಿಂದ ಆತಂಕಕ್ಕೀಡಾಗಿರುವ ಸಾಗರದ ಅರಳಗೋಡು ಗ್ರಾಮಕ್ಕೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಇದೇ ವೇಳೆ,  ಆರೋಗ್ಯ ಇಲಾಖೆಯ ನಿರ್ಲಕ್ಷದ ಕುರಿತು ತನಿಖೆ ನಡೆಸುವುದಾಗಿಯೂ ಭರವಸೆ ನೀಡಿದ್ದಾರೆ. ಎಲ್ಲೆಲ್ಲಿಗೆ ಭೇಟಿ ಕೊಟ್ಟರು ಮಿನಿಸ್ಟರ್? ಸಚಿವ ಶಿವಾನಂದ ಪಾಟೀಲ್ ಅವರು, ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಮಂಗನಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದವರ ಆರೋಗ್ಯ ವಿಚಾರಿಸಿದರು. ಬಳಿಕ, ಭಾರಂಗಿ ಹೋಬಳಿಯ ಅರಳಗೋಡು ಗ್ರಾಮಕ್ಕೆ ಭೇಟಿ … Read more

ಹೆದರಬೇಡಿ, ನಾವಿದ್ದೇವೆ ಅಂದರು ಡಿಸಿ, ಸಾಗರದ ಗ್ರಾಮದಲ್ಲಿ ಆರೋಗ್ಯ ಇಲಾಖೆ ವಿರುದ್ಧ ಜನರ ಮುನಿಸು

ಶಿವಮೊಗ್ಗ ಲೈವ್.ಕಾಂ | 5 ಜನವರಿ 2019    ಮಂಗನ ಕಾಯಿಲೆಯಿಂದ ತೀವ್ರ ಆತಂಕಕ್ಕೀಡಾಗಿರುವ ಗ್ರಾಮಕ್ಕೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ, ಎಚ್ಚರದಿಂದ ಇರುವಂತೆ ಸಲಹೆ ನೀಡಿದರು. ಸಾಗರ ತಾಲೂಕಿನ ಅರಳಗೋಡಿಗೆ ಜಿಲ್ಲಾಧಿಕಾರಿ ದಯಾನಂದ್ ಭೇಟಿ ನೀಡಿದರು. ಕೆಲಕಾಲ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ, ಆರೋಗ್ಯ ಇಲಾಖೆ ಸೂಕ್ತ ನಿಗಾ ವಹಿಸುತ್ತಿಲ್ಲ ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ನಿಗಾ ವಹಿಸುತ್ತಿಲ್ಲ ಆರೋಗ್ಯ ಇಲಾಖೆ ಆರೋಗ್ಯ ಇಲಾಖೆ ಸೂಕ್ತ ನಿಗಾ … Read more

ಸಾಗರದಲ್ಲಿ ಮುಂದುವರೆದ ಮಂಗನ ಕಾಯಿಲೆ ಆತಂಕ, ಮತ್ತೊಬ್ಬ ಶಂಕಿತ ಬಲಿ, ಮಂಗಗಳ ಮೃತದೇಹ ಪತ್ತೆ

030119 Mangana Kayale Monkey Death 1

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ಸಾಗರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಂಗಗಳ ಅಸಹಜ ಸಾವು ಮುಂದುವರೆದಿದ್ದು, ಮಂಗನ ಕಾಯಿಲೆ ಆತಂಕ ಇಮ್ಮಡಿಯಾಗಿದೆ. ಇನ್ನು, ಮಂಗನ ಕಾಯಿಲೆ ಶಂಕಿತರೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಂಚಿಕೈ ಮಂಜುನಾಥ (22) ಮೃತಪಟ್ಟಿದ್ದಾರೆ. ಮಂಜುನಾಥ ಅವರಿಗೆ ತೀವ್ರ ಜ್ವರ ಮತ್ತು ಜಾಂಡೀಸ್ ಇತ್ತು. ಮಂಗನ ಕಾಯಿಲೆ ಶಂಕೆಯಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಲ್ಯಾಬ್’ಗೆ ಕಳುಹಿಸಲಾಗಿದೆ. ಮುಂದುವರೆದ ಮಂಗಗಳ ಸಾವು ಭಾರಂಗಿ ಹೋಬಳಿಯ ಅರಳಗೋಡು … Read more