BREAKING NEWS – ಜೋರು ಮಳೆ, ಇವತ್ತು ಎರಡು ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

BREAKING-NEWS-GENERAL-IMAGE

ಸಾಗರ: ಭಾರಿ ಗಾಳಿ, ಮಳೆ ಹಿನ್ನೆಲೆ ಸಾಗರ ಮತ್ತು ಹೊಸನಗರ ತಾಲೂಕುಗಳ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜೂನ್‌ 16ರಂದು ರಜೆ (Holiday) ಘೋಷಿಸಿ ಆಯಾ ತಹಶೀಲ್ದರ್‌ ಅವರು ಆದೇಶಿಸಿದ್ದಾರೆ. ಅಂಗನವಾಡಿಗಳು, ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಇಂದು ಒಂದು ದಿನದ ರಜೆ ಘೋಷಿಸಲಾಗಿದೆ. ಇದನ್ನೂ ಓದಿ » ಗಾಂಧಿ ಬಜಾರ್‌ಗೆ ನಡೆದು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾದ ವ್ಯಕ್ತಿ, ಹೇಗಾಯ್ತು ಘಟನೆ?

ಸಿಗಂದೂರು ಸೇತುವೆ ಬಳಿ ಗೇಟ್‌ ಸಿಬ್ಬಂದಿಗೆ ಮಚ್ಚು ತೋರಿಸಿದ ಧಾರವಾಡದ ಪ್ರವಾಸಿಗ

Siganduru-Bridge-in-sagara-taluk

ಸಾಗರ: ಸಿಗಂದೂರು ಸೇತುವೆಯ (Bridge) ಅಂಬಾರಗೋಡ್ಲು ಭಾಗದಲ್ಲಿ ಗೇಟ್‌ ಸಿಬ್ಬಂದಿಗೆ ಈಚೆಗೆ ಪ್ರವಾಸಿಗರೊಬ್ಬರು ಮಚ್ಚು ತೋರಿಸಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕೂಡಲೆ ಪ್ರವಾಸಿಗನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಧಾರವಾಡ ಮೂಲದ ಪ್ರವಾಸಿಗನೊಬ್ಬ ಕುಟುಂಬ ಸಹಿತ ಕಾರಿನಲ್ಲಿ ಸಿಗಂದೂರಿಗೆ ಬಂದಿದ್ದರು. ಕಾರುಗಳನ್ನು ಸರದಿಯಲ್ಲಿ ಬಿಡುವ ವಿಚಾರದಲ್ಲಿ ಜಗಳವಾಗಿದೆ. ಈ ಸಂದರ್ಭ ಪ್ರವಾಸಿಗ ಮಚ್ಚು ತೋರಿಸಿ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಗೇಟ್‌ ಸಿಬ್ಬಂದಿ ದೂರು ನೀಡದ ಹಿನ್ನೆಲೆ, ಪ್ರವಾಸಿಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು, … Read more

ಮಳೆಗಾಲದಲ್ಲಿ ಕ್ವಾರಿ ನಿಲ್ಲಿಸಿ ಅಂದಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ, ರಸ್ತೆಯಲ್ಲಿ ಅಡ್ಡಗಟ್ಟಿ ಹೆಲ್ಮೆಟ್‌ನಿಂದ ಅಟ್ಯಾಕ್‌

281123-Anandapura-Police-Station-Board.webp

ಸಾಗರ: ಅರಣ್ಯ ಜಾಗದಲ್ಲಿ ನಡೆಸುತ್ತಿರುವ ಕ್ವಾರಿಯಿಂದ (quarry) ಓಡಾಡುವ ಲಾರಿಗಳಿಂದ ಮಳೆಗಾಲದಲ್ಲಿ ಜನರಿಗೆ ತೊಂದರೆ ಉಂಟಾಗಲಿದೆ ಎಂದು ತಿಳಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಮಳೆಗಾಲದಲ್ಲಿ ಕ್ವಾರಿ ನಿಲ್ಲಿಸಿ ಎಂದು ಸಿರುಗುಪ್ಪದ ಈಶ್ವರಪ್ಪಗೌಡ, ಸದಾನಂದಗೌಡ, ದೇವರಾಜ ಎಂಬುವವರು ಮನವಿ ಮಾಡಿದ್ದರು. ಹಾಗಾಗಿ ಈಶ್ವರಪ್ಪ ಗೌಡ ಅವರ ಮನೆಗೆ ನುಗ್ಗಿದ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು, ಪೊಲೀಸರು ಬರಲು ತಿಳಿಸಿದ್ದರಿಂದ ತೆರಳುತ್ತಿದ್ದ ದೇವರಾಜ ಅವರಿಗೆ ಐಗಿನಬೈಲು ಸಮೀಪ ಅಡ್ಡಗಟ್ಟಿ … Read more

ಜೈಲಿಂದ ಹೊರ ಬಂದು ತಿಂಗಳೊಳಗೆ ಸಚಿನ್‌ ಕಾಲಿಗೆ ಗುಂಡು, ಮತ್ತೆ ಅರೆಸ್ಟ್‌ ಆದ ಶ್ಯಾಡೋ, ಏನಿದು ಕೇಸ್‌?

Police-open-fire-on-Shadow-Sachin-at-Anandapura.

ಸಾಗರ: ದರೋಡೆ ಪ್ರಕರಣದ ಆರೋಪಿ ಶ್ಯಾಡೊ ಸಚಿನ್‌ (Shadow Sachin) ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆಯೇ ಶ್ಯಾಡೋ ಸಚಿನ್‌ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗೆ ಪಿಎಸ್‌ಐ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿದೆ. ಆನಂದಪುರ ಠಾಣೆ ಪೊಲೀಸರು ಶ್ಯಾಡೋ ಸಚಿನ್‌ನ ಬಂಧನಕ್ಕೆ ಮೆಣಸಿನಸರ ಸಮೀಪ ತೆರಳಿದ್ದಾಗ ಘಟನೆ ಸಂಭವಿಸಿದೆ. ಹೆಡ್‌ ಕಾನ್ಸ್‌ಟೇಬಲ್‌ ಅಶೋಕ್‌ ಮೇಲೆ ಶ್ಯಾಡೋ ಸಚಿನ್‌ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಈ ಸಂದರ್ಭ ಪಿಎಸ್‌ಐ ಯುವರಾಜ್‌ … Read more

ಸಾಗರದಲ್ಲಿ ಒಂದು ಕಿ.ಮೀ ಉದ್ದದ ತ್ರಿವರ್ಣ ಧ್ವಜ ಹೊತ್ತು ಸಾಗಿದ ಜನ, ಹೇಗಿತ್ತು ಮೆರವಣಿಗೆ?

Tiranaga-Yathre-at-sagara-BY-Raghavendra-and-Halappa - Indian Flag

ಸಾಗರ: ಆಪರೇಷನ್‌ ಸಿಂಧೂರ ಮತ್ತು ಭಾರತೀಯ ಯೋಧರಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಸಾಗರದಲ್ಲಿ ತಿರಂಗ ಯಾತ್ರೆ ನಡೆಯಿತು. ಒಂದು ಕಿ.ಮೀ ಉದ್ದದ ತ್ರಿವರ್ಣ ಧ್ವಜ (Flag) ಹೊತ್ತು ದೊಡ್ಡ ಸಂಖ್ಯೆಯ ಜನರು ಮೆರವಣಿಗೆ ನಡೆಸಿದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್? ಮಹಾಗಣಪತಿ ದೇವಸ್ಥಾನದಿಂದ ಆರಂಭವಾದ ತಿರಂಗಯಾತ್ರೆ ನಗರದ ಪ್ರಮುಖಬೀದಿಗಳಲ್ಲಿ ನಡೆಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿ ಹಲವರು ಧ್ವಜ ಹೊತ್ತು ಸಾಗಿದರು. ಮಾಜಿ … Read more

ಸಾಗರದಲ್ಲಿ ಒಂದು ಕಿ.ಮೀ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ, ಸಾರ್ವಜನಿಕ ಸಭೆ

Former-Minister-Haratalu-Halappa-BJP

ಸಾಗರ: ಭಾರತದ ಯೋಧರ ಆತ್ಮಸ್ಥೈರ್ಯ ಹೆಚ್ಚಿಸಲು ಸಾಗರದಲ್ಲಿ ವಿಜಯ ಸಿಂದೂರ ತಿರಂಗ ಯಾತ್ರೆ ನಡೆಸಲಾಗುತ್ತದೆ. ಮೇ 19ರಂದು ಸಂಜೆ 4ಗಂಟೆಯಿಂದ ಯಾತ್ರೆ ಆರಂಭವಾಗಲಿದೆ. ಒಂದು ಕಿ.ಮೀ ಉದ್ದದ ರಾಷ್ಟ್ರಧ್ವಜದ (Flag) ಮೆರವಣಿಗೆ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್? ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರತಾಳು ಹಾಲಪ್ಪ, ಮಹಾಗಣಪತಿ ದೇವಸ್ಥಾನದಿಂದ ತಿರಂಗ ಯಾತ್ರೆ ಹೊರಡಲಿದೆ. ಲಿಂಬೂ ಸರ್ಕಲ್‌, ಎಸ್‌.ಎನ್‌.ನಗರ ಸರ್ಕಲ್‌ … Read more

ಶರಾವತಿ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

SAGARA-NEWS-UPDATE

ಸಾಗರ: ತಾಲ್ಲೂಕಿನ ಹುಲಿದೇವರಬನ ಗ್ರಾಮದ ಸಮೀಪ, ಶರಾವತಿ ನದಿ (River) ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತನನ್ನು ಹುಲಿದೇವರಬನದ ಸಿದ್ದಯ್ಯ (65) ಎಂದು ಗುರುತಿಸಲಾಗಿದೆ. ಮೂರು ದಿನದ ಹಿಂದೆ ಮನೆಗೆ ಮರಳದ ಜಾನುವಾರು ಹುಡುಕಿಕೊಂಡು ಹೋದವರು ಮರಳಿ ಬಂದಿರಲಿಲ್ಲ. ಈ ಕುರಿತು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?

ಜೋಗ ಜಲಪಾತಕ್ಕೆ ಇವತ್ತು ಮಿನಿಸ್ಟರ್‌ ಭೇಟಿ, ಅಧಿಕಾರಿಗಳ ಜೊತೆಗೆ ಮಹತ್ವದ ಮೀಟಿಂಗ್‌

Minister-Madhu-Bangarappa-Press-meet-about-budget

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವತ್ತು ಜೋಗ ಜಲಪಾತಕ್ಕೆ (Jog Falls) ಭೇಟಿ ನೀಡುತ್ತಿದ್ದಾರೆ. ಕಾಮಗಾರಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಇವತ್ತು ಬೆಳಗ್ಗೆ 11 ಗಂಟೆಗೆ ಸಚಿವ ಮಧು ಬಂಗಾರಪ್ಪ ಸಾಗರಕ್ಕೆ ಭೇಟಿ ನೀಡಲಿದ್ದಾರೆ. ತಾಲೂಕು ಆಡಳಿತ ಸೌಧ ಕಟ್ಟಡದ ಮೂರನೇ ಮಹಡಿಯಲ್ಲಿ ಶೀಟ್‌ ಛಾವಣಿ, ಮೂಲ ಸೌಕರ್ಯಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಜೋಗ ಜಲಪಾತಕ್ಕೆ ಭೇಟಿ ನೀಡಲಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ … Read more

ಸಿಗಂದೂರು ಸೇತುವೆ ಮೇಲೆ ಕಾರಿನಲ್ಲಿ ಸಂಸದ ರಾಘವೇಂದ್ರ ಸಂಚಾರ, ಪರಿಶೀಲನೆ ಬಳಿಕ ಹೇಳಿದ್ದೇನು?

MP-BY-Raghavendra-visits-Siganduru-Bridge

ಸಾಗರ: ಸಿಗಂದೂರು ಸೇತುವೆ (Sigandur Bridge) ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇವತ್ತು ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಸೇತುವೆ ಮೇಲೆ ವಾಹನದಲ್ಲಿ ಸಂಚರಿಸಿದರು. ಇದೇ ವೇಳೆ ಸಂಸದ ರಾಘವೇಂದ್ರ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು. ಇಂಜಿನಿಯರ್‌ಗಳು, ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. ಜೂ.15ರ ಒಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು. (ಮತ್ತಷ್ಟು ಸುದ್ದಿ ಈ ಜಾಹೀರಾತುಗಳ ಕೆಳಗಿದೆ) ಹಾಗಾಗಿ ಗ್ರಾಮ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಯಿತು. ಸಾಗರ – ಮರಕುಟಿಕ ರಸ್ತೆಗೆ ಎನ್‌.ಹೆಚ್‌ 369 … Read more

ಬಸ್‌ ಇಳಿದು ರಸ್ತೆ ದಾಟುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ ಬೈಕ್‌ ಡಿಕ್ಕಿ

SAGARA-NEWS-UPDATE

ಸಾಗರ: ಬಸ್‌ ಇಳಿದು ರಸ್ತೆ ದಾಟುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ (Student) ಬೈಕ್‌ ಡಿಕ್ಕಿ ಹೊಡೆದಿದೆ. ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಘಟನೆ ಸಂಭವಿಸಿದೆ. ಸೊರಬ ರಸ್ತೆಯ ಸಾಮಿಲ್‌ ಸಮೀಪ ಬಸ್‌ ಇಳಿದು ರಸ್ತೆ ದಾಟುತ್ತಿದ್ದ ಮಿಂದುಶ್ರೀಗೆ ಸಾಗರ ಪಟ್ಟಣದ ಕಡೆಗೆ ತೆರಳುತ್ತಿದ್ದ ಸ್ಪ್ಲೆಂಡರ್‌ ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಿಂದುಶ್ರೀ ಕೆಳಗೆ ಬಿದ್ದಿದ್ದು ಮೈಕೈ ತರಚಿದೆ. ಕಾಲು ಮತ್ತು ಸೊಂಟದ ಭಾಗಕ್ಕೆ ಒಳಪೆಟ್ಟು ಬಿದ್ದಿದೆ. ಮಿಂದುಶ್ರೀಯನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾಗರ … Read more