ಸಿಗಂದೂರು ಸೇತುವೆ, ಡ್ರೋಣ್‌ ವಿಡಿಯೋ ರಿಲೀಸ್‌, ನೋಡಲು ಇಲ್ಲಿ ಕ್ಲಿಕ್‌ ಮಾಡಿ

Sigandur-Bridge-work-photo

SHIVAMOGGA LIVE NEWS, 24 DECEMBER 2024 ಶಿವಮೊಗ್ಗ : ಸಿಗಂದೂರು ಸೇತುವೆ (Bridge) ನಿರ್ಮಾಣ ಕಾರ್ಯ ಬಿರುಸಾಗಿದೆ. ಕಳೆದ ವಾರ ಸಂಸದ ಬಿ.ವೈ.ರಾಘವೇಂದ್ರ, ಸೇತುವೆ ಕಾಮಗಾರಿಯ ಡ್ರೋಣ್‌ ಫೋಟೊ ಹಂಚಿಕೊಂಡಿದ್ದರು. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಸಂಸದ ರಾಘವೇಂದ್ರ ಸೇತುವೆ ಕಾಮಗಾರಿಯ ಡ್ರೋಣ್‌ ವಿಡಿಯೋ ಷೇರ್‌ ಮಾಡಿದ್ದಾರೆ. ಮುಕ್ತಾಯ ಹಂತಕ್ಕೆ ತಲುಪಿದ ಐತಿಹಾಸಿಕ ಸಿಗಂದೂರು ಸೇತುವೆಯ ಮನಮೋಹಕ ದೃಶ್ಯ ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಇಲ್ಲಿದೆ ವಿಡಿಯೋ. ಇದನ್ನೂ ಓದಿ » ನಟ ಶಿವರಾಜ್‌ ಕುಮಾರ್‌ಗಾಗಿ ವಿಶೇಷ … Read more

ಸಾಗರದಲ್ಲಿ ಹೆದ್ದಾರಿಗೆ ಅಡ್ಡಲಾಗಿ ಕುಳಿತು ವಿದ್ಯಾರ್ಥಿಗಳು, ಗ್ರಾಮಸ್ಥರ ಆಕ್ರೋಶ, ಕಾರಣವೇನು?

protest-for-ksrtc-bus-at-kanle-in-sagara.

SHIVAMOGGA LIVE NEWS, 19 DECEMBER 2024 ಸಾಗರ : ಕೆಎಸ್ಆರ್‌ಟಿಸಿ ಬಸ್ (Bus) ನಿಲುಗಡೆ ಮಾಡದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಸಾಗರ ತಾಲೂಕು ತಾಲ್ಲೂಕಿನ ಕಾನ್ಲೆ ಮಾರ್ಗದಲ್ಲಿ ಸಾಗರಕ್ಕೆ ಸಂಚರಿಸುವ ಬಸ್‌ಗಳು ನಿಲುಗಡೆ ನೀಡದಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಕಾನ್ಲೆ ಮಾರ್ಗವಾಗಿ ಸಾಗರಕ್ಕೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್‌ಗಳನ್ನು ಎಲ್ಲಾ ಕಡೆ ನಿಲುಗಡೆ ಮಾಡಬೇಕು. ಈ ಬಸ್‌ನಲ್ಲಿ ವಿದ್ಯಾರ್ಥಿಗಳು ಸಿರಿವಂತೆ, ಸಾಗರದ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. … Read more

ಸಿಗಂದೂರು ಸೇತುವೆ ಬಹುತೇಕ ಪೂರ್ಣ, ಡ್ರೋಣ್‌ ಫೋಟೊ ವೈರಲ್‌

Sigandur-Bridge-Drone-Photo-goes-viral

SHIVAMOGGA LIVE NEWS, 18 DECEMBER 2024 ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿಯ ಫೋಟೊವೊಂದನ್ನು ಸಂಸದ ಬಿ.ವೈ.ರಾಘವೇಂದ್ರ ತಮ್ಮ ಫೇಸ್‌ಬುಕ್‌ನಲ್ಲಿ ಷೇರ್‌ ಮಾಡಿಕೊಂಡಿದ್ದಾರೆ. ಈ ಫೋಟೊ ವೈರಲ್‌ ಆಗಿದೆ. ಸಿಗಂದೂರು ಸೇತುವೆ ಕಾಮಗಾರಿ ಬಹತೇಕ ಪೂರ್ಣಗೊಂಡಿದೆ. ಸೇತುವೆ ಸಂಪೂರ್ಣ ಉದ್ದದ ಡ್ರೋಣ್‌ ಫೋಟೊವೊಂದನ್ನು ಸಂಸದ ಬಿ.ವೈ.ರಾಘವೇಂದ್ರ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2025ರ ಏಪ್ರಿಲ್‌ನಲ್ಲಿ ಉದ್ಘಾಟನೆ ಈಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಕುಟುಂಬ ಸಹಿತ … Read more

ಆನಂದಪುರದಲ್ಲಿ ಎಲ್‌ಇಡಿ ಟಿವಿ, ಹೋಂ ಥಿಯೇಟರ್‌ ಕಳ್ಳತನ, ಹೇಗಾಯ್ತು ಘಟನೆ?

281123-Anandapura-Police-Station-Board.webp

SHIVAMOGGA LIVE NEWS, 18 DECEMBER 2024 ಆನಂದಪುರ : ಅಂಗಡಿಯೊಂದರ ಶಟರ್‌ ಮುರಿದು ಎಲ್‌ಇಡಿ ಟಿವಿ (Led Tv), ಹೋಂ ಥಿಯೇಟರ್‌, ನಗದು ಕಳ್ಳತನ ಮಾಡಲಾಗಿದೆ. ಆನಂದಪುರದ ಜಿ.ಪಿ.ಎಲೆಕ್ಟ್ರಾನಿಕ್ಸ್‌ ಅಂಗಡಿಯಲ್ಲಿ ಕಳ್ಳತನವಾಗಿದೆ. ಡಿ.14ರಂದು ಬೆಳಗ್ಗೆ ಅಂಗಡಿಗೆ ಬಾಗಿಲು ತೆಗೆಯಲು ಬಂದಾಗ ಶಟರ್‌ ಮಧ್ಯ ಭಾಗದಲ್ಲಿ ಬೆಂಡ್‌ ಆಗಿರುವಂತೆ ಕಾಣಿಸಿತ್ತು. ಪರಿಶೀಲಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಅಂಗಡಿಯಲ್ಲಿದ್ದ ಸ್ಯಾಮ್‌ಸಂಗ್‌ ಹೋಂ ಥಿಯೇಟರ್‌, 32 ಇಂಚಿನ ಎರಡು ಎಲ್‌ಇಡಿ ಟಿವಿ, 43 ಇಂಚಿನ ಸ್ಯಾಮ್‌ ಸಂಗ್‌ ಟಿವಿ, 7500 … Read more

ಮೂರು ತಿಂಗಳು ಜೋಗ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ, ಕಾರಣವೇನು?

JOG FALLS GENERAL IMAGE

SHIVAMOGGA LIVE NEWS, 16 DECEMBER 2024 ಶಿವಮೊಗ್ಗ : ಜೋಗ ಜಲಪಾತದಲ್ಲಿ (Jog Falls) ವಿವಿಧ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಮೂರು ತಿಂಗಳು ಜಲಪಾತಕ್ಕೆ ಪ್ರವಾಸಿಗರ ಭೇಟಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಮತ್ತು ಜೋಗ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದೇಶಿಸಿದ್ದಾರೆ. ಸಾಗರ ತಾಲ್ಲೂಕಿನ ಜೋಗ ಜಲಪಾತದ ಮುಖ್ಯದ್ವಾರ ಮತ್ತು ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಜನವರಿ 1 ರಿಂದ ಮಾರ್ಚ್ 15ರ ವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶ ನಿರ್ಭಂದಿಸಲಾಗಿದೆ. … Read more

ಬಸ್‌ ಪಲ್ಟಿ, ಸಾಗರದಲ್ಲಿ ಯಾರೆಲ್ಲ ಹೇಗೆಲ್ಲ ನೆರವಾದರು? ಇಲ್ಲಿದೆ ಡಿಟೇಲ್ಸ್‌

161224 Muppane bus incident

SHIVAMOGGA LIVE NEWS, 16 DECEMBER 2024 ಸಾಗರ : ಜೋಗ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‌ (Bus) ಪಲ್ಟಿಯಾಗಿ ಮಂಗಳೂರಿನ ಪ್ರವಾಸಿಗರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಪ್ಪಾನೆ ತಿರುವಿನಲ್ಲಿ ಭಾನುವಾರ ಘಟನೆ ನಡೆದಿದೆ. ಅಪಘಾತದ ನಂತರ ಏನೇನಾಯ್ತು? ಇಲ್ಲಿದೆ ಪಾಯಿಂಟ್ಸ್‌ ದೇವರ ದರ್ಶನಕ್ಕೆ ಹೊರಟಿದ್ದರು ಮಂಗಳೂರಿನ ಬಿ.ಸಿ. ರಸ್ತೆ ಸುತ್ತಮುತ್ತಲ 49 ಪ್ರವಾಸಿಗರು ಜೋಗ ಪ್ರವಾಸ ಕೈಗೊಂಡಿದ್ದರು. ಅಲ್ಲಿಂದ ವಡನಬೈಲು ಪದ್ಮಾವತಿ ದೇಗುಲ, ಸಿಗಂದೂರು ದೇವಸ್ಥಾನಕ್ಕೆ ತೆರಳುವವರಿದ್ದರು. ಮುಪ್ಪಾನೆ ಬಳಿ … Read more

ಸಾಗರದಲ್ಲಿ ಬೆಳಗ್ಗೆ ಅಂಗಡಿಗೆ ಬಂದ ಮಾಲೀಕನಿಗೆ ಕಾದಿತ್ತು ಶಾಕ್

Sagara Police Station Building

SHIVAMOGGA LIVE NEWS, 15 DECEMBER 2024 ಸಾಗರ : ಅಂಗಡಿಯ (Shop) ಶಟರ್‌ ಮುರಿದು ಹಣ ಮತ್ತು ಸಿಸಿಟಿವಿಯ ಡಿವಿಆರ್‌ ಕಳ್ಳತನ ಮಾಡಲಾಗಿದೆ. ಸಾಗರದ ಜೋಗ ರಸ್ತೆಯಲ್ಲಿರುವ ಮಗಿ ಏಜೆನ್ಸಿಯಲ್ಲಿ ಕಳ್ಳತನವಾಗಿದೆ. ಮಾಲೀಕ ಅಶೋಕ್‌ ಅವರು ಡಿ.13ರಂದು ರಾತ್ರಿ ಅಂಗಡಿ ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಅಂಗಡಿ ಬಳಿ ಬಂದಾಗ ಶಟರ್‌ ತೆರೆದಿತ್ತು. ಪರಿಶೀಲಿಸಿದಾಗ ಕ್ಯಾಶ್‌ ಡ್ರಾದಲ್ಲಿರುವ 15 ರಿಂದ 20 ಸಾವಿರ ರೂ. ಹಣ ಕಳುವಾಗಿತ್ತು. ಇನ್ನು, ಸಿಸಿಟಿವಿ ಡಿವಿಆರ್‌ ಅನ್ನು … Read more

BREAKING NEWS – ಖಾಸಗಿ ಬಸ್‌ ಪಲ್ಟಿ, ಮಂಗಳೂರಿನಿಂದ ಬಂದಿದ್ದವರಿಗೆ ಗಂಭೀರ ಗಾಯ

Private-Bus-incident-at-Muppane-near-Kargal.

SHIVAMOGGA LIVE NEWS, 15 DECEMBER 2024 ಸಾಗರ : ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‌ (Private Bus) ಅಪಘಾತಕ್ಕೀಡಾಗಿ ಹಲವರಿಗೆ ಗಂಭೀರ ಗಾಯವಾಗಿದೆ. ಸಾಗರ ತಾಲೂಕು ಅರಳಗೋಡಿನ ಮುಪ್ಪಾನೆ ಸಮೀಪ ಘಟನೆ ಸಂಭವಿಸಿದೆ. ಮಂಗಳೂರಿನಿಂದ ಜೋಗಕ್ಕೆ ಪ್ರವಾಸ ಬಂದಾಗ ಅಪಘಾತ ಸಂಭವಿಸಿದೆ. ಮುಪ್ಪಾನೆ ಸಮೀಪದ ಭಟ್ಕಳ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್‌, ಪಲ್ಟಿಯಾಗಿದೆ. ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರ್ಗಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೆ … Read more

ಹೆದ್ದಾರಿಯಲ್ಲೇ ಮಂಗಗಳ ಕಾಳಗ, ವಾಹನ ಸಂಚಾರ ಸ್ಥಗಿತ

Monkeys-groupism-led-to-road-block-near-sagara.

SHIVAMOGGA LIVE NEWS, 10 DECEMBER 2024 ಸಾಗರ : ಮಂಗಗಳ (Monkeys) ಎರಡು ಗುಂಪುಗಳ ನಡುವಿನ ಕಾಳಗದಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಾಗರ ತಾಲೂಕು ಜೋಗ ಸಮೀಪ ಸೋಮವಾರ ಘಟನೆ ನಡೆದಿದೆ. ಕಾಡಿನಲ್ಲಿ ಎರಡು ಮಂಗಗಳ ಗುಂಪುಗಳ ಮಧ್ಯೆ ಆರಂಭವಾದ ಗಲಾಟೆ ಕೊನೆಗೆ ಹೆದ್ದಾರಿಗೆ ವಿಸ್ತರಣೆಯಾಗಿತ್ತು. ಹೆದ್ದಾರಿಗೆ ನುಗ್ಗಿದ ಮಂಗಳು ಪರಸ್ಪರ ಬಡಿದಾಡಿಕೊಂಡು, ಕೂಗಾಟ ಆರಂಭಸಿದವು. ಸುಮಾರು ನೂರು ಮಂಗಗಳು ರಸ್ತೆಯಲ್ಲೇ ಕೈ ಕೈ ಮಿಲಾಯಿಸಿದವು. ಒಂದು ಗುಂಪಿನ ಮಂಗಗಳನ್ನು ಮತ್ತೊಂದು ಗುಂಪಿನ ಮಂಗಗಳು … Read more

ಸಾಗರದಿಂದ ಮಂಗಳೂರಿಗೆ ಹೊಸ ರಾಜಹಂಸ ಬಸ್‌, ಟೈಮಿಂಗ್‌ ಏನು?

Sagara-Mangalore-Rajahamsa-bus-launch-Beluru-Gopalakrishna

SHIVAMOGGA LIVE NEWS, 5 DECEMBER 2024 ಸಾಗರ : ಸಾಗರದಿಂದ ಮಂಗಳೂರಿಗೆ ನೂತನವಾಗಿ ಆರಂಭಗೊಂಡಿರುವ ಕೆಎಸ್ಆರ್‌ಟಿಸಿ ರಾಜಹಂಸ ಬಸ್ (Rajahamsa Bus) ಸಂಚಾರಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸಿದರು. ಬಸ್ಸಿನ ಟೈಮಿಂಗ್‌ ಏನು? ನೂತನ ರಾಜಹಂಸ ಬಸ್‌ ಸಾಗರದಿಂದ ರಾತ್ರಿ 10.10ಕ್ಕೆ ಹೊರಡಲಿದೆ. ಬೆಳಗಿನ ಜಾವ 4ಕ್ಕೆ ಮಂಗಳೂರು, 4.45ಕ್ಕೆ ಯನಪೋಯ ಆಸ್ಪತ್ರೆ ತಲುಪುತ್ತದೆ. ಮಂಗಳೂರಿನಿಂದ ರಾತ್ರಿ 10.10ಕ್ಕೆ ಹೊರಡುವ ಬಸ್ ಬೆಳಗಿನ ಜಾವ 4.30ಕ್ಕೆ ಸಾಗರ … Read more