ಸಿನಿಮಾ ನಟ, ರಂಗಭೂಮಿ ಕಲಾವಿದ ಯೇಸು ಪ್ರಕಾಶ್‌ ಇನ್ನಿಲ್ಲ, ಸಾಗರದಲ್ಲಿ ಅಂತಿಮ ದರ್ಶನ, ರಂಗ ನಮನ

Kannada-Actor-Yesuprakash-no-more

SHIVAMOGGA LIVE NEWS | 31 MARCH 2024 SAGARA : ಖ್ಯಾತ ರಂಗಭೂಮಿ ಕಲಾವಿದ, ಚಿತ್ರನಟ ಯೇಸು ಪ್ರಕಾಶ್ (58) ಶನಿವಾರ ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಯೇಸು ಪ್ರಕಾಶ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ರಂಗ ನಮನದ ಮೂಲಕ ಶ್ರದ್ಧಾಂಜಲಿ ಸಾಗರ ಸಮೀಪದ ಪುರಪ್ಪೆಮನೆಯ ಕಲ್ಲುಕೊಪ್ಪ ಗ್ರಾಮದವರಾದ ಯೇಸು ಪ್ರಕಾಶ್ ಚಲನಚಿತ್ರ ಮತ್ತು ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು. ನೀನಾಸಂ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದರು. ನಟನೆಯ ಜತೆಯಲ್ಲಿ ಸಾಮಾಜಿಕ ಹೋರಾಟಗಳಲ್ಲೂ … Read more

ಸಾಲ ಹಿಂತಿರುಗಿಸಿದ ಸ್ನೇಹಿತ, ಹಣ ಎಣಿಸುವಾಗ ಕಾದಿತ್ತು ಆಘಾತ, ಗೆಳೆಯನ ವಿರುದ್ಧವೇ ಕೇಸ್‌, ಕಾರಣವೇನು?

Sagara Police Station Building

SHIVAMOGGA LIVE NEWS | 30 MARCH 2024 SAGARA : ಸ್ನೇಹಿತ ನೀಡಿದ ಹಣವನ್ನು ಮನೆಗೆ ಕೊಂಡೊಯ್ದು ಎಣಿಸುವಾಗ ನಕಲಿ ನೋಟುಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸ್ನೇಹಿತನ ವಿರುದ್ಧ ವ್ಯಕ್ತಿಯೊಬ್ಬ ಸಾಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಮನೋಜ್‌ ಎಂಬುವವರು ತಮ್ಮ ಸ್ನೇಹಿತನೊಬ್ಬನಿಗೆ ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ 30 ಸಾವಿರ ರೂ. ಹಣ ನೀಡಿದ್ದರು. ಈಚೆಗೆ ಹಣ ಮರಳಿಸುವಂತೆ ಕೇಳಿದಾಗ ಸ್ನೇಹಿತ 500 ರೂ. ಮುಖಬೆಲೆಯ 60 ನೋಟುಗಳನ್ನು ಮರಳಿಸಿದ್ದ. ಮನೋಜ್‌ ಆ … Read more

ಬಾವಿಗೆ ಬಿದ್ದ ಮಹಿಳೆ ರಕ್ಷಣೆ | ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ, ಓರ್ವ ಸಾವು | ಟಿಪ್ಪರ್‌ ಡಿಕ್ಕಿಯಾಗಿ ಮಹಿಳೆ ಕೊನೆಯುಸಿರು

Crime-News-General-Image

SHIVAMOGGA LIVE NEWS | 28 MARCH 2024 ಬಾವಿಗೆ ಬಿದ್ದ ಮಹಿಳೆ ರಕ್ಷಣೆ HOSANGARA : ಮನೆ ಸಮೀಪದ ಬಾವಿಗೆ ಕಾಲು ಜಾರಿ ಬಿದ್ದಿದ್ದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ರಕ್ಷಣೆ ಮಾಡಿದ್ದಾರೆ. ಹೊಸನಗರ ತಾಲೂಕು ಕಲ್ಲುಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ನಾಗರತ್ನ (65) ಎಂಬುವವರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆ ಹೊಸನಗರದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮಹಿಳೆಯ ರಕ್ಷಣೆ ಮಾಡಿದರು. ಆಗ್ನಿಶಾಮಕ ದಳದ ಆನಂದಪ್ಪ, ರಾಜೇಶ್‌, ರವಿ, ಶಂಕರಗೌಡ, ಮಂಜುನಾಥ್‌, ರಾಮೀಜ್‌, … Read more

ಸಿಗಂದೂರು ಸೇತುವೆ, ರೋಪ್‌ ವೇ ಅಳವಡಿಕೆ ಶುರು, ಏನಿದು ರೋಪ್‌ ವೇ?

Rope-Way-Pooja-for-Sigandur-Bridge-in-Sagara

SHIVAMOGGA LIVE NEWS | 28 MARCH 2024 BYKODU : ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಸಿಗಂದೂರು ಸೇತುವೆಗೆ ರೋಪ್‌ ವೇ ಅಳವಡಿಕೆ ಕಾರ್ಯ ಆರಂಭವಾಗಿದೆ. ಬುಧವಾರ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಏನಿದು ರೋಪ್‌ ವೇ? ಸಿಗಂದೂರು ಸೇತುವೆ ಕಾಮಗಾರಿ ಬಿರುಸಾಗಿ ನಡೆಯುತ್ತಿದೆ. ಸೆಗ್ಮೆಂಟ್‌ ಜೋಡಣೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ರೋಪ್‌ ವೇ ಸೇತುವೆಯ ಪ್ರಮುಖ ಕಾರ್ಯ. ಇದರ ಆಧಾರದಲ್ಲಿಯೇ ಸೇತುವೆ ಸಮತೋಲನ ಕಾಯ್ದುಕೊಳ್ಳಲಿದೆ. ಪೂಜೆ ಬಳಿಕ ಕಾರ್ಯಾರಂಭ ರೋಪ್‌ ವೇ ಅಳವಡಿಕೆ ಕಾರ್ಯದ … Read more

ನೇಣು ಬಿಗಿದ ಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ | ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿಗೆ ಕಾರು ಡಿಕ್ಕಿ, ಸಾವು

Crime-News-General-Image

SHIVAMOGGA LIVE NEWS | 26 MARCH 2024 ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ SHIMOGA : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾಗರ ತಾಲ್ಲೂಕಿನ ಯಡೇಹಳ್ಳಿಯ ಪರಶುರಾಮ ಬಾಬು (16) ಸಾವಿಗೀಡಾದ ಬಾಲಕ. ಈತನ ಶವ ಮನೆಯ ಕೊಠಡಿಯಲ್ಲಿ ದೊರೆತಿದೆ. ಈತ ಆನಂದಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ. ಕಲಿಕೆಯಲ್ಲಿ ಮುಂದಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ … Read more

ಮುಂದುವರೆದ ಟೆಂಪಲ್‌ ರನ್‌, ಇವತ್ತು ಸಿಗಂದೂರು, ಹುಂಚಕ್ಕೆ ಈ‍ಶ್ವರಪ್ಪ, ಭೇಟಿ ಕುರಿತು ಏನೆಲ್ಲ ಹೇಳಿದರು?

Eshwarappa-visit-to-Sigandur-and-Humcha

SHIVAMOGGA LIVE NEWS | 19 MARCH 2024 SHIMOGA : ಬಂಡಾಯದ ಬಾವುಟ ಹಾರಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಠ, ಮಂದಿರ ಭೇಟಿ ಮುಂದುವರೆಸಿದ್ದಾರೆ. ಅಲ್ಲಲ್ಲಿ ಬೆಂಬಲಿಗರನ್ನು ಭೇಟಿಯಾಗಿ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆ. ಈಶ್ವರಪ್ಪ ಅವರು ಇವತ್ತು ಸಿಗಂದೂರು ಶ್ರೀ ಚೌಡೇ‍ಶ್ವರಿ ಸನ್ನಿಧಿಗೆ ತೆರಳಿ ದೇವಿಯ ದರ್ಶನ ಪಡೆದರು. ಧರ್ಮದರ್ಶಿ ರಾಮಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇನ್ನು, ಹುಂಚ ಜೈನ ಮಠಕ್ಕೆ ಭೇಟಿ ನೀಡಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೊಂದಿಗೆ … Read more

ಸಿದ್ಲೀಪುರ, ಕಮಲಾಪುರದಲ್ಲಿ ಹುಲ್ಲಿಗೆ ಬೆಂಕಿ | ಸಾಗರದ ಕಾಡಿನಲ್ಲಿ ಕುಮಟಾದ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Holehonnuru-Sidlipura-incident

SHIVAMOGGA LIVE NEWS | 16 MARCH 2024 ಸಿದ್ಲೀಪುರದಲ್ಲಿ ಹುಲ್ಲಿನ ಬಣವೆಗೆ ಬೆಂಕಿ HOLEHONNURU : ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 280 ಪೆಂಡಿ ಹುಲ್ಲು ಸುಟ್ಟು ಹೋಗಿದೆ. ಸಿದ್ಲೀಪುರ ಗ್ರಾಮದ ಜಯಮ್ಮ ಹನುಮಂತಪ್ಪ ಎಂಬುವವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಹೊತ್ತುಕೊಂಡಿತ್ತು. ಕೂಡಲೆ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. 70 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹೊಳೆಹೊನ್ನೂರು … Read more

ಲಕ್ಷ ಲಕ್ಷದ ಸಿಗರೇಟ್‌ ಕದ್ದಿದ್ದ ರಾಜಸ್ಥಾನದ ವ್ಯಕ್ತಿ ಅರೆಸ್ಟ್‌, ಸಿಕ್ಕಿಬೀಳಲು ಕಾರಣವಾಯ್ತು ಒಂದು ಸಣ್ಣ ಸುಳಿವು

Rajasthan-Thief-arrested-by-Sagara-Police.

SHIVAMOGGA LIVE NEWS | 14 MARCH 2024 SAGARA : ಸೊರಬ ರಸ್ತೆಯ ಯುನೈಟೆಡ್ ಟ್ರೇಡಿಂಗ್ ಕಂಪನಿಯ ಕಟ್ಟಡದ ಹಿಂದಿನ ಬಾಗಿಲು ಒಡೆದು 17 ಲಕ್ಷ ರೂ. ಮೊತ್ತದ ಸಿಗರೇಟ್ ಬಂಡಲ್ ಕಳವು ಮಾಡಿದ್ದ ವ್ಯಕ್ತಿಯನ್ನು ಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಜಲೋರ್‌ ಜಿಲ್ಲೆಯ ಮಾಂಡವಾಲ ಗ್ರಾಮದ ಜಿತೇಂದ್ರ ಕುಮಾರ್ ಬಂಧಿತ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಮೂವರು ತಲೆಮರೆಸಿಕೊಂಡಿದ್ದಾರೆ. ವಾಹನದ ನಂಬರ್‌ ನೀಡಿದ ಸುಳಿವು ಕಳೆದ ವರ್ಷದ ಮೇ 18ರಂದು ಕಳ್ಳತನ ನಡೆದಿತ್ತು. ಸಿ.ಸಿ.ಟಿವಿ … Read more

ಆನಂದಪುರ ಬಳಿ ಬೈಕುಗಳ ಮಧ್ಯೆ ಡಿಕ್ಕಿ, ಒಬ್ಬರಿಗೆ ಗಂಭೀರ ಗಾಯ

Two-bike-incident-near-anandapura-in-sagara-taluk

SHIVAMOGGA LIVE NEWS | 14 MARCH 2024 SAGARA : ಆನಂದಪುರ ಸಮೀಪದ ಗೌರಿಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಆನಂದಪುರದಿಂದ ಆಡೂರಿಗೆ ಹೋಗುತ್ತಿದ್ದ ಬೈಕ್ ಹಾಗೂ ಯಡೇಹಳ್ಳಿಯಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಸತ್ಯನಾರಾಯಣ ಎಂಬುವವರಿಗೆ ತೀವ್ರ ಗಾಯವಾಗಿದೆ. ಆನಂದಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನೂ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಲಾಗಿದೆ. ಆನಂದಪುರ … Read more

ಕಾಡಿನ ಮಧ್ಯೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಗ್ರಾಮಸ್ಥರ ಶಂಕೆ ಏನು?

unknown-body-at-avige-near-Bykodu-in-Sagara-taluk

SHIVAMOGGA LIVE NEWS | 4 MARCH 2024 BYKODU : ಕಾಡಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿರುವ ಮೃತದೇಹ ಸಂಪೂರ್ಣ ಕೊಳೆತಿದೆ. ಗ್ರಾಮಸ್ಥರು ಕಟ್ಟಿಗೆಗಾಗಿ ಕಾಡಿಗೆ ತೆರಳಿದ್ದಾಗ ಮೃತದೇಹ ಪತ್ತೆಯಾಗಿದೆ. ಸಾಗರ ತಾಲೂಕು ಬ್ಯಾಕೋಡು ಸಮೀಪದ ಆವಿಗೆಯ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಗ್ರಾಮಸ್ಥರ ದೂರಿನ ಮೇರೆಗೆ ಕಾರ್ಗಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಮತ್ತು ಡಿಎನ್‌ಎ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಲಾಗಿದೆ. ಪತ್ನಿ ಕೊಂದವನ ಮೃತದೇಹ ಶಂಕೆ 2024ರ … Read more