ಶಿವಮೊಗ್ಗ – ಸಾಗರ ಮಧ್ಯೆ 4 ಕಡೆ ರೈಲ್ವೆ ಗೇಟ್‌ ಪರಿಶೀಲನೆ, ವಾಹನ ಸಂಚಾರ ನಿಷೇಧ, ಪರ್ಯಾಯ ಮಾರ್ಗ ಪ್ರಕಟ

070923-Railway-Track-with-Electric-lane-in-Shimoga-Sagara-Route.webp

ರೈಲ್ವೆ ಸುದ್ದಿ: ಶಿವಮೊಗ್ಗ – ಸಾಗರ ಮಧ್ಯೆ ಮಾರ್ಗದಲ್ಲಿ ನಾಲ್ಕು ಕಡೆ ರೈಲ್ವೆ ಲೆವೆಲ್‌ ಕ್ರಾಸಿಂಗ್‌ (Level Crossing) ಗೇಟ್‌ಗಳನ್ನು ತೆರೆದು ಪರಿಶೀಲನೆ ನಡೆಸಲಾಗುತ್ತದೆ. ಆದ್ದರಿಂದ ಆ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಯಾವ್ಯಾವ ರಸ್ತೆಯಲ್ಲಿ ಯಾವಾಗ ರಿಪೇರಿ? ಜೇಡಿಸರ ರಸ್ತೆ: ಸೆ.22ರ ಬೆಳಗ್ಗೆ 7 ಗಂಟೆಯಿಂದ ಸೆ.23ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಆನಂದಪುರದಿಂದ ಜೇಡಿಸರ ಹಾಗೂ ಸಿದ್ದೇಶ್ವರ … Read more

ಸಾಗರ ನಗರಸಭೆ ವಿರುದ್ಧ ಆಕ್ರೋಶ, ಕಚೇರಿ ಎದುರು ಹೋರಾಟ, ಕೆಆರ್‌ಎಸ್‌ ಪಕ್ಷದ ಡಿಮಾಂಡ್‌ಗಳೇನು?

KRS-Party-Protest-against-sagara-Nagara-sabhe.

ಸಾಗರ: ನಗರಸಭೆ ಆಡಳಿತ (Administration) ಸುಧಾರಣೆಗೆ ಒತ್ತಾಯಿಸಿ ನಗರಸಭೆ ಕಚೇರಿ ಎದುರು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ತಾಲ್ಲೂಕು ಘಟಕದ ಪ್ರಮುಖರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರ ಬೇಡಿಕೆಗಳೇನು? ಬೇಡಿಕೆ 1 : ಸಾಗರ ನಗರ ವ್ಯಾಪ್ತಿಯ ಚರಂಡಿ ವ್ಯವಸ್ಥೆ ಸರಿಪಡಿಸಬೇಕು. ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕು. ಬೇಡಿಕೆ 2 : ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ಪರಿಶಿಷ್ಟ ಜಾತಿ, ಪಂಗಡದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಬೇಕು ಬೇಡಿಕೆ 3 : ಹಲವು ವರ್ಷಗಳಿಂದ … Read more

ಕೆಲಸ ಮಾಡುತ್ತಿದ್ದ ಫೈನಾನ್ಸ್‌ ಸಂಸ್ಥೆಗೇ ₹3,00,000 ವಂಚಿಸಿದ ಕ್ವಾಲಿಟಿ ಮ್ಯಾನೇಜರ್‌, ಏನಿದು ಕೇಸ್‌?

Sagara Police Station Building

ಸಾಗರ: ಗ್ರಾಹಕರು ಮರುಪಾವತಿ ಮಾಡಿದ್ದ ಸಾಲದ ಕಂತಿನ ಹಣವನ್ನು ಫೈನಾನ್ಸ್‌ (Finance) ಸಂಸ್ಥೆಗೆ ಕಟ್ಟದೆ ವಂಚಿಸಿದ ಬ್ರಾಂಚ್‌ ಕ್ವಾಲಿಟಿ ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಲೆಕ್ಕ ಪರಿಶೋಧನೆ ಮಾಡಿದಾಗ ಕ್ವಾಲಿಟಿ ಮ್ಯಾನೇಜರ್‌ ₹3.03 ಲಕ್ಷ ವಂಚಿಸಿರುವು ಬೆಳಕಿಗೆ ಬಂದಿದೆ. ಫೈನಾನ್ಸ್‌ ಸಂಸ್ಥೆಯೊಂದು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸುತ್ತದೆ. ಅವರು ಸಾಲ ಮರುಪಾವತಿ ಮಾಡಿದ್ದನ್ನು ಕ್ವಾಲಿಟಿ ಮ್ಯಾನೇಜರ್‌ ಫೈನಾನ್ಸ್‌ ಸಂಸ್ಥೆಗೆ ಮರುಪಾವತಿಸಬೇಕು. 2024ರ ಡಿಸೆಂಬರ್‌ 10 ರಿಂದ 2025ರ ಮೇ 12ರವರೆಗೆ ₹3.03 ಲಕ್ಷವನ್ನು ಫೈನಾನ್ಸ್‌ ಸಂಸ್ಥೆಗೆ … Read more

ರೈತನ ಮೇಲೆ ಕಾಡು ಹಂದಿ ದಾಳಿ, ತೀವ್ರ ಗಾಯ, ಹೇಗಾಯ್ತು ಘಟನೆ?

SAGARA-NEWS-UPDATE

ಸಾಗರ: ತಾಲೂಕಿನ ಬಾರಂಗಿ ಹೋಬಳಿಯ ಕಾನೂರು ಗ್ರಾಮದಲ್ಲಿ ಕೃಷಿಕ ರಾಮಪ್ಪ ಜಟ್ಟನಾಯಕ (60) ಎಂಬುವವರ ಮೇಲೆ ಕಾಡು ಹಂದಿ (Wild Boar) ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಕೊಟ್ಟಿಗೆಗೆ ದರಗು ತರಲು ಕಾಡಿಗೆ ತೆರಳಿದ್ದಾಗ ಹಂದಿಯು ನಾಯಿ ಮೇಲೆ ದಾಳಿಗೆ ಯತ್ನಿಸಿದೆ. ನಾಯಿ ಓಡಿ ಹೋಗುತ್ತಿದ್ದಂತೆ ರಾಮಪ್ಪ ಅವರ ಮೇಲೆ ಎರಗಿ, ಹೊಟ್ಟೆಗೆ ತಿವಿದು, ಕಚ್ಚಿ ಗಾಯಗೊಳಿಸಿದೆ. ಸ್ಥಳೀಯರು ಅವರನ್ನು ರಕ್ಷಿಸಿ ಸಾಗರ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನೂ ಓದಿ » ಜೋಗದಲ್ಲಿ … Read more

ಸಾಗರದ ಎಲ್‌.ಬಿ.ಕಾಲೇಜು ನಿವೃತ್ತ ಪ್ರಾಧ್ಯಾಪಕ ನಿಧನ, ಮೆಡಿಕಲ್‌ ಕಾಲೇಜಿಗೆ ದೇಹ ದಾನ

Sagara-LB-College-Retired-Professor-HLS-Rao-breathed-last

ಸಾಗರ: ಲಾಲ್‌ಬಹದ್ದೂರ್‌ ಶಾಸ್ತ್ರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ (Professor) ಹೆಚ್.ಎಲ್.ಎಸ್.‌ ರಾವ್‌ (87) ನಿಧನರಾಗಿದ್ದಾರೆ. ಅವರ ಇಚ್ಛೆಯಂತೆ ಮೃತದೇಹವನ್ನು ಶಿವಮೊಗ್ಗದ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ. ಸಾಗರದ ನೆಹರು ನಗರದ ನಿವಾಸಿಯಾಗಿದ್ದ ಹೆಚ್‌.ಎಲ್.ಎಸ್‌.ರಾವ್‌ ಶುಕ್ರವಾರ ನಿಧನರಾದರು. ಸಾಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಶನಿವಾರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಅವರ ಮೃತದೇಹವನ್ನು ಶಿವಮೊಗ್ಗದ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಯಿತು. ಹೆಚ್‌.ಎಲ್.ಎಸ್‌.ರಾವ್‌ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿ ಹಲವರು ಸಂತಾಪ … Read more

ಜೋಗದಲ್ಲಿ ಕಳ್ಳರ ಹಾವಳಿ, ಶೀಘ್ರ ಬಂಧನಕ್ಕೆ ಒತ್ತಾಯ

JOG SAGARA NEWS 1

ಜೋಗ್‌ಫಾಲ್ಸ್: ಕೆಪಿಸಿ ಕಾಲೊನಿ, ಬಜಾರ್, ಜಲಪಾತ (Jog Falls) ಪ್ರದೇಶಗಳಲ್ಲಿ ಕಳ್ಳರ ಹಾವಳಿ ಹೆಚ್ಚಿದ್ದು ಈಗಾಗಲೇ ಮೂರು ಮನೆ ಹಾಗೂ ಗೂಡಂಗಡಿಗಳಿಗೆ ನುಗ್ಗಿ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. ಬೀಗ ಹಾಕಿದ ಮನೆಗಳನ್ನೇ ಗುರುತಿಸಿ ಕಳವು ಮಾಡಲಾಗಿದೆ. ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಪೊಲೀಸರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ » ಆನಂದಪುರ ಠಾಣೆ ಪೊಲೀಸರ ಕಾರ್ಯಾಚರಣೆ, ಗೋವು ಸಾಗಣೆ ಮಾಡುತ್ತಿದ್ದ ಶಿಕಾರಿಪುರದ ಇಬ್ಬರ ಬಂಧನ

ಹೊಟ್ಟೆನೋವು ಅಂತಾ ಆಸ್ಪತ್ರೆಗೆ ಬಂದ ಮಹಿಳೆ, ಪರಿಶೀಲಿಸಿದಾಗ ಕಾದಿತ್ತು ಆಘಾತ

Gadde-in-Lady-stomach-in-Sagara-Hospital.

ಶಿವಮೊಗ್ಗ: ಮಹಿಳೆಯ ಗರ್ಭಕೋಶದ ಸುತ್ತ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆ ಹೊರ ತೆಗೆಯುವಲ್ಲಿ ಸಾಗರದ ತಾಯಿ-ಮಗು ಸರಕಾರಿ ಆಸ್ಪತ್ರೆಯ (Hospital) ವೈದ್ಯರ ತಂಡ ಯಶಸ್ವಿಯಾಗಿದೆ. 47 ವರ್ಷದ ಮಹಿಳೆಯ ಗರ್ಭಕೋಶದ ಸುತ್ತ 6.5 ಕೆ.ಜಿ ಗಡ್ಡೆ ಬೆಳೆದಿತ್ತು. ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರು, ತಾಯಿ-ಮಗು ಸರಕಾರಿ ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದರು. ವೈದ್ಯರು ಅವರನ್ನು ಪರೀಕ್ಷಿಸಿದಾಗ ಹೊಟ್ಟೆ ಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಪ್ರಸೂತಿ ತಜ್ಞೆ ಡಾ. ವಿದ್ಯಾಶ್ರೀ ನೇತೃತ್ವದ ವೈದ್ಯರ ತಂಡ ಸತತ 3 … Read more

ಆನಂದಪುರ ಠಾಣೆ ಪೊಲೀಸರ ಕಾರ್ಯಾಚರಣೆ, ಗೋವು ಸಾಗಣೆ ಮಾಡುತ್ತಿದ್ದ ಶಿಕಾರಿಪುರದ ಇಬ್ಬರ ಬಂಧನ

281123-Anandapura-Police-Station-Board.webp

ತ್ಯಾಗರ್ತಿ: ಜಾನುವಾರು (Cow) ಅಕ್ರಮ ಸಾಗಣೆ ಮಾಡುತ್ತಿದ್ದ ವಾಹನವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಆನಂದಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕಿನ ತ್ಯಾಗರ್ತಿ ಮಾರಿಕಾಂಬಾ ವೃತ್ತದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪರವಾನಗಿ ಇಲ್ಲದೆ 2 ಎಮ್ಮೆ, 1 ಕೋಣ, 2 ಹೋರಿಗಳನ್ನು ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ತುಂಬಿ ಸಾಗಿಸುತ್ತಿದ್ದರು. ಶಿಕಾರಿಪುರ ತಾಲೂಕು ಬಿಳಕಿ ಗ್ರಾಮದ ಮೆಹಬೂಬ್ ಬಾಷಾ ಹಾಗೂ ಮಕ್ಬೂಲ್ ಸಾಬ್ ಎಂಬುವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ » ಅಡಿಕೆ ಬೆಳೆಯಲ್ಲಿ ಅಂತರ, ಮಿಶ್ರ ಬೆಳೆ … Read more

‘ಪಾಕಿಸ್ತಾನ ಜಿಂದಾಬಾದ್‌ ಅಂದವರನ್ನು ಗುಂಡಿಕ್ಕಿ ಕೊಲ್ಲಬೇಕು’, ಬೇಳೂರು ಗರಂ

Beluru-Gopalakrishna-distributes-chicken-at-sagara

ಸಾಗರ: ನಮ್ಮ ದೇಶದಲ್ಲಿ ಇದ್ದುಕೊಂಡು ಪಾಕಿಸ್ತಾನ ಜಿಂದಾಬಾದ್‌ (Pakistan) ಎನ್ನುವವರು ದೇಶದ್ರೋಹಿಗಳು. ಅವರು ಈ ದೇಶದಲ್ಲಿ ಇರುವಂತಿಲ್ಲ. ಅಂತಹವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು. ಸಾಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಪಾಕಿಸ್ತಾನ ಜಿಂದಾಬಾದ್‌ ಎಂದು ಘೋಷಣೆ ಕೂಗಿರುವುದು ಖಂಡನೀಯ. ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದರು. ಎಲ್ಲ ಧರ್ಮದಲ್ಲಿಯು ಕಿಡಿಗೇಡಿಗಳಿರುತ್ತಾರೆ. ಅಂತಹವರನ್ನು ಗುರುತಿಸಿ ಸಮಾಜ ಬಾಂಧವರು ದೂರ ಇರಿಸಬೇಕು. ಇಲ್ಲವಾದಲ್ಲಿ ಒಬ್ಬಿಬ್ಬರು … Read more

ಸಾಗರ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡುವಂತೆ ಪಟ್ಟು, ಭಾರಿ ಪ್ರತಿಭಟನೆಯ ದಿನಾಂಕ ಪ್ರಕಟ

Sagara-district-protest-in-shimoga.

ಸಾಗರ: ಸಾಗರ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ (District) ಘೋಷಿಸುವಂತೆ ಒತ್ತಾಯಿಸಿ ಸೆ.18 ರಂದು ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಪಕ್ಷಾತೀತ ಪ್ರತಿಭಟನೆ ನಡೆಯಲಿದೆ ಎಂದು ಸಾಗರ ಜಿಲ್ಲಾ ಹೋರಾಟ ಸಂಚಾಲನಾ ಸಮಿತಿಯ ಪ್ರಮುಖ ತೀ.ನ. ಶ್ರೀನಿವಾಸ್ ತಿಳಿಸಿದ್ದಾರೆ. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನ.ಶ್ರೀನಿವಾಸ್‌, ಪ್ರತಿಭಟನೆಯ ಸ್ವರೂಪ ತಿಳಿಸಿದರು. ಹೇಗಿರಲಿದೆ ಪ್ರತಿಭಟನೆ? ಸಾಗರ ತಾಲೂಕಿಗೆ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಇದೆ. 1956ರಿಂದಲೇ ಸಾಗರ ಉಪವಿಭಾಗೀಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಳದಿ ಅರಸರು … Read more