ಆಗಷ್ಟೇ ಜನಿಸಿದ ಕರುವಿನ ಮೇಲೆ ಬೀದಿ ನಾಯಿಗಳ ದಾಳಿ, ಸಾವು

Stray-Dog-Attack-General-Image

SHIVAMOGGA LIVE NEWS | 19 DECEMBER 2023 SHIKARIPURA : ಬೀದಿ ನಾಯಿಗಳ ದಾಳಿಗೆ ಆಗಷ್ಟೆ ಜನಿಸಿದ ಕರು ಸಾವನ್ನಪ್ಪಿದೆ. ಶಿಕಾರಿಪುರ ತಾಲೂಕು ಈಸೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಈಸೂರಿನ ಉಜ್ಜಳ್ಳಿ ಸುರೇಶ್‌ ಎಂಬುವವರ ಮನೆಯಲ್ಲಿ ಹಸು ಬೆಳಗ್ಗೆ 5 ಗಂಟೆ ಹೊತ್ತಿಗೆ ಕರುವಿಗೆ ಜನ್ಮ ನೀಡಿತ್ತು. ವಾಸನೆ ಹಿಡಿದು ಬಂದ ನಾಯಿಗಳು ಕರುವಿನ ಮೇಲೆ ದಾಳಿ ನಡೆಸಿವೆ. ನಾಯಿಗಳು ಜೋರಾಗಿ ಕೂಗುತ್ತಿರುವುದನ್ನು ಗಮನಿಸಿ ಬಂದ ಸಾರ್ವಜನಿಕರು ಅವುಗಳನ್ನು ಓಡಿಸಿ ಕರುವನ್ನು ರಕ್ಷಿಸಲು ಯತ್ನಿಸಿದ್ದಾರೆ. ಆ … Read more

ಗಾಮ ಕ್ರಾಸ್‌ ಬಳಿ ಬಸ್‌ ಡಿಕ್ಕಿ, ಬೈಕ್ ಸವಾರ ಮಾಜಿ ಪೈಲ್ವಾನ್‌ ಸಾವು

SHIKARIPURA-TALUK-NEWS-1.jpg

SHIVAMOGGA LIVE NEWS | 9 DECEMBER 2023 SHIKARIPURA : ಖಾಸಗಿ ಬಸ್‌ ಮತ್ತು ಬೈಕ್‌ ಮಧ್ಯೆ ಅಪಘಾತ ಸಂಭವಿಸಿದ್ದು ಮಾಜಿ ಪೈಲ್ವಾನ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕು ಗಾಮ ಕ್ರಾಸ್‌ ಬಳಿ ಘಟನೆ ಸಂಭವಿಸಿದೆ. ಪಟ್ಟಣದ ವಿನಾಯಕ ನಗರ ನಿವಾಸಿ ಕುಸ್ಕೂರು ಸತೀಶ್‌ (54) ಮೃತರು. ಜಮೀನಿಗೆ ತೆರಳಿದ್ದ ಸತೀಶ್‌ ಅವರಿಗೆ ಸಾಲೂರು ರಸ್ತೆ ಗಾಮ ಕ್ರಾಸ್‌ ಬಳಿ ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಕುಸಿದಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. … Read more

ಶಿಕಾರಿಪುರದಲ್ಲಿ ಜಿಲ್ಲಾಧಿಕಾರಿ ಜನತಾ ದರ್ಶನ, ದಿನಾಂಕ ಫಿಕ್ಸ್‌, ಎಲ್ಲಿ ನಡೆಯಲಿದೆ?

Shimoga-DC-Car-With-Board.c

SHIVAMOGGA LIVE NEWS | 8 DECEMBER 2023 SHIMOGA : ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಜನತಾದರ್ಶನ ಕಾರ್ಯಕ್ರಮವನ್ನು ಡಿ.12 ರಂದು ಬೆಳಿಗ್ಗೆ 10.30 ರಿಂದ ಶಿಕಾರಿಪುರ ಟೌನ್ ವ್ಯಾಪ್ತಿಯ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿರಲಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಸಾರ್ವಜನಿಕರು ಜನತಾದರ್ಶದಲ್ಲಿ ಪಾಲ್ಗೊಂಡು ತಮ್ಮ ಅಹವಾಲು ಸಲ್ಲಿಸಲು ಅವಕಾಶವಿರಲಿದೆ. ವೈಯಕ್ತಿಕ ಅಹವಾಲು ಸಲ್ಲಿಸುವವರು ತಮ್ಮ ಅಹವಾಲನ್ನು ತಾವೊಬ್ಬರೇ ಸಲ್ಲಿಸಬಹುದಾಗಿದೆ. ಸಾರ್ವಜನಿಕವಾಗಿ … Read more

3 ಕ್ವಿಂಟಾಲ್‌ ಅಡಿಕೆ ಪತ್ತೆಗಿಳಿದ ಪೊಲೀಸರಿಗೆ ಸಿಕ್ತು 5 ಕ್ವಿಂಟಾಲ್‌, ಭಟ್ಕಳದ ಮೂವರು ಅರೆಸ್ಟ್‌, ಏನಿದು ಕೇಸ್‌?

Areca-Thieves-from-bhatkal-arrest-by-Shiralakoppa-police.

SHIVAMOGGA LIVE NEWS | 8 DECEMBER 2023 SHIKARIPURA : ಮನೆ ಮುಂದೆ ಇರಿಸಿದ್ದ 3.50 ಕ್ವಿಂಟಾಲ್‌ ಅಡಿಕೆ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ 5.14 ಕ್ವಿಂಟಾಲ್‌ ಒಣ ಅಡಿಕೆ, ಒಂದು ಬೊಲೇರೋ ಕಾರು ವಶಕ್ಕೆ ಪಡೆಯಲಾಗಿದೆ. ಭಟ್ಕಳದ ಅಬ್ರಾರ್‌ ಶೇಖ್‌ (21), ಇಮ್ರಾನ್‌ (20), ಅಬ್ದುಲ್‌ ವಾಹೀದ್‌ ತಾರ್‌ (22) ಬಂಧಿತರು. 3 ಕ್ವಿಂಟಾಲ್‌ಗಾಗಿ ತನಿಖೆ ವೇಳೆ 5 ಕ್ವಿಂಟಾಲ್‌ ಪತ್ತೆ ಶಿರಾಳಕೊಪ್ಪ ಸಮೀಪದ ಬಳ್ಳಿಗಾವಿ ಗ್ರಾಮದ ರಮೇಶ್‌ ಎಂಬುವವರು … Read more

ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ, ಶ್ರೀಗಂಧ, ಗರಗಸ ಸಹಿತ ಆರೋಪಿಗಳು ಅರೆಸ್ಟ್

SHIRALAKOPPA-SHIKARIPURA-NEWS

SHIVAMOGGA LIVE NEWS | 6 DECEMBER 2023 SHIRALAKOPPA : ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅವರಿಂದ ಶ್ರೀಗಂಧ ಮತ್ತು ಗರಗಸ ವಶಕ್ಕೆ ಪಡೆಯಲಾಗಿದೆ. ಶಿರಾಳಕೊಪ್ಪದ ಸಮೀಪದ ಬಸವನಂದಿಹಳ್ಳಿ ವ್ಯಾಪ್ತಿಯ ಹುಲಿಗಿನ ಕೊಪ್ಪ ಅರಣ್ಯ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗದ ಮೈಲಾರಿ ಮತ್ತು ಮಂಜುನಾಥ್ ಬಂಧಿತರು. ಅವರಿಂದ 26 ಕೆ.ಜಿ. ಶ್ರೀಗಂಧ, 2 ಕೈ ಗರಗಸ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. … Read more

30ಕ್ಕೂ ಹೆಚ್ಚು ಅಡಿಕೆಗೆ ಸಸಿಗಳಿಗೆ ಕೊಡಲಿ ಹಾಕಿದ ದುಷ್ಕರ್ಮಿಗಳು

061223-Areca-plants-cut-by-misrcrients-at-malavalli-in-Shikaripura.webp

SHIVAMOGGA LIVE NEWS | 6 DECEMBER 2023 SHIKARIPURA : ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಸಸಿಗಳನ್ನು (Areca Plants) ದುಷ್ಕರ್ಮಿಗಳು ಕಡಿದಿದ್ದಾರೆ. ಶಿಕಾರಿಪುರ ತಾಲೂಕು ಮಳವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರೈತ ಮಂಜಪ್ಪ ಎಂಬುವವರ ತೋಟದಲ್ಲಿ ಘಟನೆ ಸಂಭವಿಸಿದೆ. ಸುಮಾರು 30 ಅಡಿಕೆ ಸಸಿಗಳನ್ನು (Areca Plants) ಕಡಿದು ಹಾಕಲಾಗಿದೆ. ವಿಷಯ ತಿಳಿದು ಕಾಂಗ್ರೆಸ್‌ ಮುಖಂಡ ನಾಗರಾಜ ಗೌಡ ಸೇರಿದಂತೆ ಹಲವರು ಭೇಟಿ ನೀಡಿದ್ದರು. ಇದನ್ನೂ ಓದಿ – ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ … Read more

ವಿಜಯೇಂದ್ರ ‘ಪುಢಾರಿʼ ಹೇಳಿಕೆಗೆ ಶಿಕಾರಿಪುರದಲ್ಲಿ ಆಕ್ರೋಶ, ಕ್ಷಮೆಗೆ ಪಟ್ಟು

051223-Shikaripura-Congress-Leader-Bhandari-Malthesh-angry-over-BJP.webp

SHIVAMOGGA LIVE NEWS | 5 DECEMBER 2023 SHIKARIPURA : ಕಾಂಗ್ರೆಸ್‌ ಕಾರ್ಯಕರ್ತರನ್ನು ಪುಢಾರಿಗಳು ಎಂದಿರುವ ಬಿ.ವೈ.ವಿಜಯೇಂದ್ರ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿ, ಅದನ್ನು ಹಿಂಪಡೆಯಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ( Congress) ಉಪಾಧ್ಯಕ್ಷ ಭಂಡಾರಿ ಮಾಲತೇಶ್‌ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ಶಿಕಾರಿಪುರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್‌ (Congress) ಕಾರ್ಯಕರ್ತರನ್ನು ಪುಢಾರಿಗಳು ಎಂದು ಟೀಕಿಸಿದ್ದಾರೆ. ಇದರು ಕಾಂಗ್ರೆಸ್‌ ಪಕ್ಷಕ್ಕೆ, ಈ ಕ್ಷೇತ್ರದಲ್ಲಿ ಮತ ನೀಡಿದ 78 ಸಾವಿರ ಮತದಾರರಿಗೆ ಅವಮಾನ ಮಾಡಿದಂತಾಗಿದೆ. … Read more

ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನಿಗೆ ಸನ್ಮಾನ, ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು?

011223-Felicitation-for-BY-Vijayendra-in-Shikaripura.webp

SHIVAMOGGA LIVE NEWS | 1 DECEMBER 2023 SHIKARIPURA : ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿ ಕ್ಷೇತ್ರಕ್ಕೆ ಆಗಮಿಸಿದ ಬಿ.ವೈ.ವಿಜಯೇಂದ್ರ (BY Vijayendra) ಅವರಿಗೆ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಇದಕ್ಕೂ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು ದೊಡ್ಡ ಸಂಖ್ಯೆಯ ಕಾರ್ಯಕರ್ತರು ಬಿಜೆಪಿ ಧ್ವಜ ಹಿಡಿದು ಬೈಕ್‌ ಜಾಥಾ ಮಾಡಿದರು. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನಿಗೆ ಸನ್ಮಾನ ಶಿಕಾರಿಪುರ ಪಟ್ಟಣದ ಹಳೆ ಸಂತೆ ಮೈದಾನದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಅಭಿನಂದನೆ … Read more

ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ನೀರು ತುಂಬಿಸಿʼ, ಮಿನಿಸ್ಟರ್‌ ಸೂಚನೆ

301123-Madhu-Bangarappa-KDP-Meeting-in-Shikaripura.webp

SHIVAMOGGA LIVE NEWS | 30 NOVEMBER 2023 SHIKARIPURA : ತಾಲ್ಲೂಕಿನ ಜನತೆಗೆ ಕುಡಿಯುವ ನೀರಿಗೆ  ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ನಿರ್ವಹಣೆ ಕುರಿತು ನಡೆದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಸಚಿವರು ಹೇಳಿದ್ದೇನು? ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳನ್ನು ತುಂಬಿಸುವ ಕಾರ್ಯ … Read more

ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದ ವಿವಿಧೆಡೆ ಮಳೆ ಅಬ್ಬರ, ಎಲ್ಲೆಲ್ಲಿ ಮಳೆಯಾಗುತ್ತಿದೆ?

Rain-at-Shimoga-Kote-Road

SHIVAMOGGA LIVE NEWS | 28 NOVEMBER 2023 SHIMOGA : ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಶಿವಮೊಗ್ಗ ಮತ್ತು ಭದ್ರವಾತಿ ಜನರಿಗೆ ವರುಣ ತುಸು ನೆಮ್ಮದಿ ನೀಡಿದ್ದಾನೆ. ಎರಡು ತಾಲೂಕಿನ ವಿವಿಧೆಡೆ ಮಳೆ ಅಬ್ಬರಿಸುತ್ತಿದೆ. ಶಿವಮೊಗ್ಗ ನಗರ ಮತ್ತು ತಾಲೂಕಿನ ವಿವಿಧೆಡೆ ಮಳೆ ಸುರಿಯುತ್ತಿದೆ. ಮಾಚೇನಹಳ್ಳಿ, ಮಲವಗೊಪ್ಪ, ಹರಿಗೆ, ವಿದ್ಯಾನಗರ ಸುತ್ತಮುತ್ತ ಮಳೆಯಾಗುತ್ತಿದೆ. ಇನ್ನು, ಭದ್ರಾವತಿ ತಾಲೂಕಿನ ವಿವಿಧೆಡೆಯು ಮಳೆಯಾಗುತ್ತಿರುವ ವರದಿಯಾಗಿದೆ. ಭದ್ರಾವತಿ ಪಟ್ಟಣ, ಅರೆಬಿಳಚಿ, ದಾಸರಕಲ್ಲಹಳ್ಳಿ, ಮಂಗೋಟೆಯಲ್ಲಿ ಜೋರು ಮಳೆಯಾಗುತ್ತಿದೆ. PHOTO : ಶಿವಮೊಗ್ಗ – … Read more