ಶಿವಮೊಗ್ಗ ತಾಲೂಕಿನ ಹಲವು ಕಡೆ ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲಿಲ್ಲಿ? ಇಲ್ಲಿದೆ ಲಿಸ್ಟ್‌

power cut mescom ELECTRICITY

SHIMOGA, 4 SEPTEMBER 2024 : ಎಂ.ಆರ್.ಎಸ್‌ನಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಸೆ.5 ರಂದು ಬೆಳಿಗ್ಗೆ 9.30 ರಿಂದ ಸಂಜೆ 5 ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆ ತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೊನಿ, ಹಕ್ಕಿಪಿಕ್ಕಿ ಕ್ಯಾಂಪ್, … Read more

ಬೈಕುಗಳು ಡಿಕ್ಕಿ, ಓರ್ವ ಸವಾರ ಸಾವು, ಮತ್ತಿಬ್ಬರು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು

two bikes mishap near sampigehalla in kumsi limits.

SHIMOGA, 3 SEPTEMBER 2024 : ಬೈಕುಗಳು ಡಿಕ್ಕಿಯಾಗಿ (MISHAP) ಗಂಭೀರ ಗಾಯಗೊಂಡಿದ್ದ ಓರ್ವ ಸವಾರ ಸಾವನ್ನಪ್ಪಿದ್ದಾನೆ. ಕಲ್ಲುಕೊಪ್ಪ ಸಮೀಪದ ಗುತ್ತಿಹಳ್ಳ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಶಿವಮೊಗ್ಗ ತಾಲೂಕು ಸಂಪಿಗೆಹಳ್ಳದ ಮಂಜುನಾಥ್‌ (27) ಮೃತರು. ಮತ್ತೊಂದು ಬೈಕ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಂಜುನಾಥನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟಿದ್ದಾನೆ. ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಉತ್ತಮ … Read more

ಎಲ್ಲರೂ ಮೈಸೂರಿಗೆ ತೆರಳಿದ್ದಾಗ ಎದುರು ಮನೆಯಿಂದ ಬಂತು ಫೋನ್‌, ತಕ್ಷಣ ಮರಳಿದಾಗ ಕಾದಿತ್ತು ಶಾಕ್

Crime-News-General-Image

SHIMOGA, 3 SEPTEMBER 2024 : ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ತೆರಳಿದ್ದ ವೇಳೆ ಮನೆಯ ಬಾಗಿಲಿನ ಬೀಗ ಮುರಿದು (Theft) ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ಹರಕೆರೆ ಗ್ರಾಮದ ವೀರೇಶ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ವೀರೇಶ್‌ ಅವರ ಕುಟುಂಬದವರು ಆ.31ರಂದು ರಾತ್ರಿ ಮೈಸೂರಿಗೆ ತೆರಳಿದ್ದರು. ಮರುದಿನ ಬೆಳಗ್ಗೆ ಎದುರು ಮನೆಯವರು ಕರೆ ಮಾಡಿ, ಕಳ್ಳತನವಾಗಿರುವ ಕುರಿತು ಮಾಹಿತಿ ನೀಡಿದ್ದರು. ಕೂಡಲೆ ಮೈಸೂರಿನಿಂದ ವೀರೇಶ್‌ ಅವರು ಹಿಂತಿರುಗಿದ್ದರು. ಬಾಗಲಿನ ಬೀಗವನ್ನು ಮೀಟಿ ತೆಗೆದು ಒಳ ಹೋಗಿದ್ದ ಕಳ್ಳರು … Read more

BREAKING NEWS – ಶಿವಮೊಗ್ಗ ನಗರದ ಸಮೀಪ ಆನೆ ದಾಳಿಗೆ ವ್ಯಕ್ತಿ ಬಲಿ

elephant-attack-on-woker-near-puradal-

SHIMOGA, 24 AUGUST 2024 : ಕಾಡಾನೆ (Wild Elephant) ದಾಳಿಗೆ ಕೃಷಿ ಕಾರ್ಮಿಕ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ನಗರ ಸಮೀಪದ ಆಲದೇವರ ಹೊಸೂರು ಬಳಿ ಇಂದು ಸಂಜೆ ಘಟನೆ ಸಂಭವಿಸಿದೆ. ಹನುಮಂತಪ್ಪ, ಮೃತ ದುರ್ದೈವಿ. ಪುರದಾಳು ಗ್ರಾಮ ಸಮೀಪ ಇರುವ ಆಲದೇವರ ಹೊಸೂರು ಗ್ರಾಮ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಜಮೀನಿಗೆ ಹೋಗಿ ಮನೆಗೆ ಮರಳುವಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನ ಕೃಷ್ಣ … Read more

ಬೆಳಗ್ಗೆ ಎದ್ದು ಬಂದಾಗ ಓಪನ್‌ ಆಗಿತ್ತು ಮನೆ ಬಾಗಿಲು, ರೂಂಗೆ ಹೋದಾಗ ಕುಟುಂಬದವರಿಗೆ ಆಘಾತ, ಆಗಿದ್ದೇನು?

Tunga-Nagara-Police-Station-Shimoga

SHIMOGA, 22 AUGUST 2024 | ಕುಟುಂಬದವರೆಲ್ಲ ಹಿಂಬದಿ ಶೆಡ್‌ನಲ್ಲಿ ಮಲಗಿದ್ದಾಗ ಮನೆಯ ಬಾಗಿಲು ಮೀಟಿ ಚಿನ್ನಾಭರಣ ಕಳ್ಳತನ (Theft) ಮಾಡಲಾಗಿದೆ. ಶಿವಮೊಗ್ಗ ತಾಲೂಕು ಹಾಯ್‌ಹೊಳೆ ಸಮೀಪದ ಭಾರತಿ ನಗರದಲ್ಲಿ ಘಟನೆ ಸಂಭವಿಸಿದೆ. ಮೀನಾಕ್ಷಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮೀನಾಕ್ಷಿ ಅವರ ಪುತ್ರಿ ಈಚೆಗೆ ತೀರಿಕೊಂಡಿದ್ದರು. ಈ ಹಿನ್ನೆಲೆ ಪೂಜೆ ಮಾಡಿಸಲಾಗಿತ್ತು. ಅದೇ ಕಾರಣಕ್ಕೆ ಮನೆಯವರೆಲ್ಲ ಹಿಂಬದಿಯಲ್ಲಿರುವ ಶೆಡ್‌ನಲ್ಲಿ ಮಲಗುತ್ತಿದ್ದರು. ಆ.17ರಂದು ರಾತ್ರಿ ಊಟ ಮುಗಿಸಿ ಶೆಡ್‌ನಲ್ಲಿ ಎಲ್ಲರು ಮಲಗಿದ್ದರು. ಬೆಳಗ್ಗೆ ಮನೆಗೆ ಬಂದಾಗ ಬಾಗಿಲು ಮೀಟಿ … Read more

BREAKING NEWS | ಆಯನೂರಿನಲ್ಲಿ ಬೇಕರಿಗೆ ಬೆಂಕಿ, ಸಿಲಿಂಡರ್‌ಗಳು ಸ್ಪೋಟ, ಧಗಧಗ ಹೊತ್ತಿ ಉರಿದ ಅಂಗಡಿ

Ayanuru-SLV-Bakery-incident

AYANURU, 21 AUGUST 2024 : ಬೇಕರಿಯೊಂದರಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡು ಸಿಲಿಂಡರ್‌ಗಳು (cylinder) ಸ್ಪೋಟಗೊಂಡಿವೆ. ಶಿವಮೊಗ್ಗ ತಾಲೂಕು ಆಯನೂರಿನಲ್ಲಿ ಘಟನೆ ಸಂಭವಿಸಿದೆ. ಆಯನೂರಿನ ಹಣಗೆರೆ ರಸ್ತೆಯಲ್ಲಿರುವ ಎಸ್‌ಎಲ್‌ವಿ ಐಯ್ಯಾಂಗಾರ್‌ ಬೇಕರಿಯಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷದಲ್ಲಿ ಬೇಕರಿ ಒಳೆಗೆ ಮೂರು ಬಾರಿ ಸ್ಪೋಟ ಸಂಭವಿಸಿದೆ. ಸಿಲಿಂಡರ್‌ಗಳು ಸ್ಪೋಟಗೊಂಡಿವೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಬೇಕರಿಯ ಅಕ್ಕಪಕ್ಕದಲ್ಲಿನ ಅಂಗಡಿಯವರು, ಗ್ರಾಹಕರು ಕೂಡಲೆ ಸ್ಥಳದಿಂದ ಓಡಿ ಹೋಗಿದ್ದಾರೆ. ಬೇಕರಿ ಮುಂಭಾಗದಲ್ಲಿಯೇ ಪೆಟ್ರೋಲ್‌ ಬಂಕ್‌ ಇದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. … Read more

ಮಘ ಮಳೆಗೆ ಕೋಡಿ ಬಿತ್ತು ಅಬ್ಬಲಗೆರೆ ಕೆರೆ, ಬೊಮ್ಮನಕಟ್ಟೆಯಲ್ಲಿ ಹಾನಿ, ಆನಂದಪುರದಲ್ಲಿ ಕೊಚ್ಚಿ ಹೋದ ಸಸಿ

abbalagere-lake-and-basavanaganguru-school.

RAINFALL NEWS, 20 AUGUST 2024 : ಮಘ ಮಳೆ ಅಬ್ಬರಕ್ಕೆ (Rain Effect)  ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರಿ ಹಾನಿ ಉಂಟಾಗಿದೆ. ಸೋಮವಾರ ಸುರಿದ ಮಳೆಗೆ ಕೆರೆ ಕೋಡಿ ಬಿದ್ದಿವೆ. ಗದ್ದೆ, ತೋಟಗಳು ಜಲಾವೃತವಾಗಿ ನಷ್ಟ ಉಂಟಾಗಿದೆ. ಎಲ್ಲೆಲ್ಲಿ ಏನೇನು ಹಾನಿಯಾಗಿದೆ? [su_note note_color=”#EBEDEF ” text_color=”#000000″] ಕೋಡಿ ಬಿದ್ದ ಅಬ್ಬಲಗೆರೆ ಕೆರೆ ಶಿವಮೊಗ್ಗ ಲೈವ್.ಕಾಂ : ಭಾರಿ ಮಳೆಗೆ ಶಿವಮೊಗ್ಗದ ಅಬ್ಬಲಗೆರೆ ಕೆರೆ ಕೋಡಿ ಬಿದ್ದು, ಜಲಪಾತ ಸೃಷ್ಟಿಯಾಗಿದೆ. ಶಿವಮೊಗ್ಗ – ಶಿಕಾರಿಪುರ ಹೆದ್ದಾರಿ … Read more

ಗಾಜನೂರು ತುಂಗಾ ಜಲಾಶಯದಲ್ಲಿ ತಪ್ಪಿದ ದುರಂತ, ತುಂಡಾಗುವ ಹಂತದಲ್ಲಿದೆ ಗೇಟ್‌ ರೋಪ್‌

Gajanuru-Dam-gate-8-rope-to-cut

SHIMOGA, 13 AUGUST 2024 : ತುಂಗಭದ್ರ ಜಲಾಶಯದ ಗೇಟ್‌ (Crust Gate) ಮುರಿದು ಭಾರಿ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಡ್ಯಾಮ್‌ಗಳ ಸುರಕ್ಷತೆ ಕುರಿತು ಪ್ರಶ್ನೆಗಳು ಮೂಡಿವೆ. ಈ ಮಧ್ಯೆ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯದ 8ನೇ ಗೇಟ್‌ನ ರೋಪ್‌ ತುಂಡಾಗುವ ಹಂತದಲ್ಲಿದೆ. ಇದರ ಫೋಟೊಗಳು ಶಿವಮೊಗ್ಗ ಲೈವ್.ಕಾಂಗೆ ಲಭ್ಯವಾಗಿದೆ. ಗಾಜನೂರಿನ ತುಂಗಾ ಜಲಾಶಯ ಮೂರುವರೆ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸರಿಯಾದ ಒಂದೆರಡು ಮಳೆಗೆ ಜಲಾಶಯ … Read more

ಸಕ್ರೆಬೈಲಿನ ಸಲಗಕ್ಕೆ ಆನೆ ದಿನದಂದು ನಾಮಕರಣ, ಏನಂತ ಹೆಸರಿಡಲಾಯ್ತು?

sakrebyle-elephant-named-after-ashwathama

SHIMOGA, 13 AUGUST 2024 : ವಿಶ್ವ ಆನೆ ದಿನಾಚರಣೆ ಶುಭ ಸಂದರ್ಭದಲ್ಲಿ ಶಿವಮೊಗ್ಗ ಸಕ್ರೇಬೈಲು ಆನೆ ಬಿಡಾರದಲ್ಲಿ (Camp) ಸಲಗವೊಂದಕ್ಕೆ ಶಾಸ್ರೋಕ್ತವಾಗಿ ನಾಮಕರಣ ಮಾಡಲಾಯಿತು. 2023ನೇ ನವೆಂಬ‌ರ್ 16ರಂದು ಮೂಡಿಗೆರೆ ತಾಲೂಕು ಆಲ್ಲೂರು ಅರಣ್ಯ ವ್ಯಾಪ್ತಿಯಲ್ಲಿ ಸೆರೆ ಸಿಕ್ಕ ಕಾಡಾನೆಯನ್ನು ಶಿಬಿರದಲ್ಲಿ ಪಳಗಿಸಲಾಗಿತ್ತು. ಅಲ್ಪಾವಧಿಯಲ್ಲೆ ಈ ಸಲಗ ಶಿಬಿರದ ಮೆಚ್ಚಿನ ಊರಾನೆಯಾಗಿ ಬದಲಾಗಿದೆ. ಮಾವುತರು ಮತ್ತು ಕಾವಾಡಿಗಳಿಗೆ ವಿಧೇಯನಾಗಿದ್ದ ಸಲಗಕ್ಕೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿ ಕಾರಿಗಳು ‘ಅಶ್ವತ್ಥಾಮ’ ಹೆಸರಿಟ್ಟರು. ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ … Read more

ಒಂಟಿ ಮಹಿಳೆ ಕೊಲೆ ಕೇಸ್‌, ಸಂಬಂಧಿ ಅರೆಸ್ಟ್‌, ಹತ್ಯೆಗೆ ಕಾರಣವೇನು?

Kumsi-Police-Station-Shimoga

SHIMOGA, 6 AUGUST 2024 : ಒಂಟಿ ಮಹಿಳೆ ಕೊಲೆ ಪ್ರಕರಣ ಆರೋಪಿಯನ್ನು (Accused) ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಮಹಿಳೆಯ ಸಂಬಂಧಿಯೇ ಆಗಿದ್ದು, ಹಲಗೆ ಕಳ್ಳತನಕ್ಕೆ ಹೋದಾಗ ಕೃತ್ಯ ಎಸಗಿದ್ದಾನೆ. ಮಂಜರಿಕೊಪ್ಪ ಗ್ರಾಮದ ಎಸ್.ಆದರ್ಶ್(30) ಬಂಧಿತ. ಅದೇ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ಸಾವಿತ್ರಮ್ಮ (60) ಅವರನ್ನು ಗುರುವಾರ ಈತ ಹತ್ಯೆ ಮಾಡಿದ್ದ. ಹಲಗೆ ಕದಿಯಲು ಬಂದು ಹತ್ಯೆ ಮಾಡಿದ ಕೊಲೆಯಾದ ಸಾವಿತ್ರಮ್ಮ ಬಂಧಿತ ಆದರ್ಶನ ಅತ್ತೆ. ‘ಸಾವಿತ್ರಮ್ಮ ಮನೆಯಲ್ಲಿ ಹಲಗೆ ಕಳವು ಮಾಡಲು ಹೋಗಿದ್ದ. … Read more