ಶಿವಮೊಗ್ಗದ ಮೊದಲ ವಿಮಾನದಲ್ಲಿ 10 ಬೆಳ್ಳಿ ಕಾಯಿನ್‌ ಬಹುಮಾನ, ಯಾರಿಗೆ ವಿತರಿಸಲಾಯಿತು?

A.Na_.Vijayendra-about-Shimoga-Aiport-First-Flight.webp

SHIVAMOGGA LIVE NEWS | 31 AUGUST 2023 SHIMOGA : ಬೆಂಗಳೂರಿನಿಂದ – ಶಿವಮೊಗ್ಗಕ್ಕೆ ಆಗಮಿಸಿದ ಮೊದಲ ವಿಮಾನದಲ್ಲಿ ರಸಪ್ರಶ್ನೆ ಕಾರ್ಯಕ್ರಮ (Quiz Competition) ನಡೆಸಲಾಯಿತು. ಸರಿಯಾದ ಉತ್ತರ ನೀಡಿದವರಿಗೆ ಬೆಳ್ಳಿ ನಾಣ್ಯಗಳನ್ನು (Silver Coin) ಬಹುಮಾನವಾಗಿ ನೀಡಲಾಗಿದೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಯೂಥ್‌ ಹಾಸ್ಟೆಲ್‌ ವತಿಯಿಂದ ಈ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಈ ಕುರಿತು ಯೂಥ್‌ ಹಾಸ್ಟೆಲ್‌ನ ಪ್ರಮುಖ ಆ.ನಾ.ವಿಜಯೇಂದ್ರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿದ್ದ … Read more

ಶಿವಮೊಗ್ಗಕ್ಕೆ ಬಂದಿದ್ದ ಮೊದಲ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಪ್ರಮುಖ ವಿಚಾರ

First Flight - Indigo ATR 72 Flight in Shimoga Airport

SHIVAMOGGA LIVE NEWS | 31 AUGUST 2023 SHIMOGA : ಸೋಗಾನೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಮೊದಲ ವಿಮಾನ (First Flight) ಆಗಮಿಸಿದೆ. ಇಂಡಿಗೋ ಎಟಿಆರ್‌ (Indigo ATR) ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ಜನರು ಹರ್ಷ ವ್ಯಕ್ತಪಡಿಸಿದರು. ಇನ್ನು, ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನದ ಕುರಿತು ಇಲ್ಲಿದೆ 3 ಪ್ರಮುಖಾಂಶ. ಶಿವಮೊಗ್ಗಕ್ಕೆ ಇವತ್ತು ಬಂದಿದ್ದು ಇಂಡಿಗೋ ಸಂಸ್ಥೆಯ ಎಟಿಆರ್‌ 72 ಮಾದರಿಯ ವಿಮಾನ. ಫ್ರಾನ್ಸ್‌ ದೇಶದ ಏವಿಯಾನ್ಸ್‌ ಡಿ ಟ್ರಾನ್ಸ್‌ಪೋರ್ಟ್‌ ರೀಜನಲ್‌ (ಎಟಿಆರ್‌) ಸಂಸ್ಥೆ … Read more

ಇನ್ಮುಂದೆ ಕುಂಸಿ, ಅರಸಾಳು ನಿಲ್ದಾಣಗಳಲ್ಲಿ ಸ್ಟಾಪ್‌ ಕೊಡಲಿವೆ 4 ಎಕ್ಸ್‌ಪ್ರೆಸ್‌ ರೈಲುಗಳು, ಯಾವ ರೈಲು? ಟೈಮಿಂಗ್‌ ಏನು?

Kumsi-and-Arasalu-Railway-Station-in-Shimoga-taluk

SHIVAMOGGA LIVE NEWS | 22 AUGUST 2023 SHIMOGA : ಕುಂಸಿ (Kumsi)  ಮತ್ತು ಅರಸಾಳು (Arasalu) ನಿಲ್ದಾಣಗಳಲ್ಲಿ ಎರಡು ಎಕ್ಸ್‌ಪ್ರೆಸ್‌ ರೈಲುಗಳ (Express Trains) ನಿಲುಗಡೆಗೆ ನೈಋತ್ಯ ರೈಲ್ವೆ ಒಪ್ಪಿಗೆ ನೀಡಿದೆ. ಆ.24ರಿಂದ ರೈಲುಗಳು ಈ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ. ಸದ್ಯದಲ್ಲೆ ರೈಲ್ವೆ ಇಲಾಖೆ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾವ್ಯಾವ ರೈಲುಗಳ ನಿಲುಗಡೆ? ರೈಲು ಸಂಖ್ಯೆ 16205 : ತಾಳಗುಪ್ಪ – ಮೈಸೂರು ಎಕ್ಸ್ ಪ್ರೆಸ್ … Read more

ಶಿವಮೊಗ್ಗದಲ್ಲಿ ಬೋನಿಗೆ ಬಿತ್ತು ಚಿರತೆ, ಸೆರೆ ಹಿಡಿಯಲು ಮೈಸೂರಿನಿಂದ ಬಂದಿತ್ತು ಟಾಸ್ಕ್‌ ಫೋರ್ಸ್‌

Leopard-Caught-at-Bikkonahalli-near-Kunchenahalli-Forest-range

SHIVAMOGGA LIVE NEWS | 19 AUGUST 2023 SHIMOGA : ಗಂಡು ಚಿರತೆಯೊಂದು (Leopard) ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಇಲ್ಲಿಗೆ ಸಮೀಪದಲ್ಲಿ ಹತ್ತು ದಿನದ ಹಿಂದೆ ಚಿರತೆ ದಾಳಿಗೆ ಮಹಿಳೆ ಸಾವನ್ನಪ್ಪಿದ್ದರು. ಲೆಪರ್ಡ್‌ ಟಾಸ್ಕ್‌ ಫೋರ್ಸ್‌ (Task Force) ಮತ್ತು ಅರಣ್ಯ ಇಲಾಖೆ (Forest Department) ಸಿಬ್ಬಂದಿ ಚಿರತೆಯನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ (Kunchenahalli) ಮೀಸಲು ಅರಣ್ಯ ವ್ಯಾಪ್ತಿಯ ಬಿಕ್ಕೋನಹಳ್ಳಿ (Bikkonahalli) ಗ್ರಾಮದಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿತ್ತು. ಸುಮಾರು … Read more

ಪಿಳ್ಳಂಗಿರಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು, ಶೇಂಗಾ ಚಿಕ್ಕಿ, ಜಿಲ್ಲೆಯಾದ್ಯಂತ ವಿತರಣೆಗೆ ಚಾಲನೆ

90823-Mid-Day-Meal-Egg-Banana-to-be-included

SHIVAMOGGA LIVE NEWS | 19 AUGUST 2023 SHIMOGA : ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಣೆಗಾಗಿ ಪ್ರಧಾನ ಮಂತ್ರಿ ಪೋಷಣ್‌ ಉಪಹಾರ ಯೋಜನೆ ಅಡಿ ಮೊಟ್ಟೆ (Egg), ಬಾಳೆಹಣ್ಣು (Banana), ಶೇಂಗಾ ಚಿಕ್ಕಿ ವಿತರಣೆ ಆರಂಭಿಸಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ ಅವರು ಪಿಳ್ಳಂಗಿರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಈ ಹಿಂದೆ 1 ರಿಂದ 8 ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ವಾರದಲ್ಲಿ ಒಂದು ದಿನ ಮೊಟ್ಟೆ, … Read more

ಕುಂಸಿ ಬಳಿ ಶಿವಮೊಗ್ಗ – ತಾಳಗುಪ್ಪ ರೈಲಿಗೆ ಸಿಲುಕಿದ ಎಮ್ಮೆ

Incident-on-Railway-track-at-Rechikoppa-near-kumsi

SHIVAMOGGA LIVE NEWS | 18 AUGUST 2023 KUMSI : ಹಳಿ ದಾಟುತ್ತಿದ್ದ ಎಮ್ಮೆಯೊಂದು ರೈಲಿಗೆ ಸಿಲುಕಿ ಗಂಭೀರ ಗಾಯಗೊಂಡಿದೆ. ಕುಂಸಿ ಸಮೀಪ ರೇಚಿಕೊಪ್ಪ (Rechikoppa) ಗ್ರಾಮದಲ್ಲಿ ಮಧ್ಯಾಹ್ನ ಘಟನೆ ಸಂಭವಿಸಿದೆ. ಶಿವಮೊಗ್ಗ – ತಾಳಗುಪ್ಪ ರೈಲಿಗೆ (Train) ಸಿಲುಕಿದ್ದು, ಸ್ವಲ್ಪ ದೂರದವರೆಗೆ ರೈಲು ಎಮ್ಮೆಯನ್ನು ಎಳೆದುಕೊಂಡು ಹೋಗಿದೆ. ಚಾಲಕ ರೈಲು ನಿಲ್ಲಿಸಿ ಪರಿಶೀಲಿಸಿದಾಗ ಎಮ್ಮೆ (Buffalo) ಬದುಕಿತ್ತು. ಸ್ಥಳೀಯರು, ಪ್ರಾಯಣಿಕರು, ಕಾರ್ಮಿಕರ ನೆರವಿನಿಂದ ರೈಲಿನಡಿ ಸಿಲುಕಿದ್ದ ಎಮ್ಮೆಯನ್ನು ರಕ್ಷಿಸಲಾಗಿದೆ. ಎಮ್ಮೆ ಪರಿಸ್ಥಿತಿ ಗಂಭೀರವಾಗಿದೆ ಎಂದು … Read more

ರಾತ್ರೋರಾತ್ರಿ ಅಡಿಕೆ ಕಳ್ಳತನ ಮಾಡುತ್ತಿದ್ದವರನ್ನು ಬೆನ್ನಟ್ಟಿ ಹಿಡಿದ ಗ್ರಾಮಸ್ಥರು

Holehonnuru-Police-Station-Bhadravathi-jpg

SHIVAMOGGA LIVE NEWS | 17 AUGUST 2023 HOLEHONNURU : ತೋಟದಲ್ಲಿ ಅಡಿಕೆ ಕಳ್ಳತನ (Adike Theft) ಮಾಡಿಕೊಂಡು ಹೋಗುತ್ತಿದ್ದವರನ್ನು ಗ್ರಾಮಸ್ಥರೆ ಬೆನ್ನಟ್ಟಿ ಹಿಡಿದಿದ್ದಾರೆ. ಮೂವರ ಪೈಕಿ ಒಬ್ಬಾತ ತಪ್ಪಿಸಿಕೊಂಡಿದ್ದು, ಇನ್ನಿಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಳೆಹೊನ್ನೂರು ಸಮೀಪದ ಹೊಸ ಜಂಭರಗಟ್ಟೆ (Hosa Jambharaghatta) ಗ್ರಾಮದಲ್ಲಿ ಘಟನೆ ಸಂಭವಿಸಿದೆ. ನಂಜಪ್ಪ ಎಂಬುವವರ ತೋಟದಿಂದ ರಾತ್ರಿ ಅಡಿಕೆ ಕಳ್ಳತನ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ನಂಜಪ್ಪ ಅವರಿಗೆ ಮಾಹಿತಿ ತಿಳಿಸಿದ್ದರು. ಗ್ರಾಮಸ್ಥರ ಜೊತೆಗೆ ನಂಜಪ್ಪ ಅವರು ಕಳ್ಳರನ್ನು ಹಿಡಿಯಲು … Read more

ತ್ಯಾವರೆಕೊಪ್ಪ ಹುಲಿ, ಸಿಂಹಧಾಮ, ನಾಳೆಯೂ ಓಪನ್‌

Lion-Tiger-Safari-Tyavrekoppa-in-Shimoga.

SHIVAMOGGA LIVE NEWS | 14 AUGUST 2023 SHIMOGA : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆ.15 ರ ಮಂಗಳವಾರ ತ್ಯಾವರೆಕೊಪ್ಪದ (Tyavarekoppa) ಹುಲಿ-ಸಿಂಹಧಾಮ  (Lion Safari) ತೆರೆದಿರುತ್ತದೆ. ವಿದ್ಯಾರ್ಥಿಗಳು, ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜೂ ಹಾಗೂ ಸಫಾರಿ ವೀಕ್ಷಿಸುವಂತೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ – ಪಂಜರ ಸೇರಿತು ಶಿವಮೊಗ್ಗಕ್ಕೆ ಆಗಮಿಸಿದ್ದ ಟಿ-55 ಯುದ್ಧ ಟ್ಯಾಂಕರ್

ಆಯನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ MLA ದಿಢೀರ್‌ ಭೇಟಿ, ಗ್ರಾಮಸ್ಥರಿಂದ ಸಮಸ್ಯೆಗಳ ಪಟ್ಟಿ

140823 MLA Sharada Puryanaik Visit Ayanuru Samudaya Arogya Kendra

SHIVAMOGGA LIVE NEWS | 14 AUGUST 2023 AYANURU : ಸಮುದಾಯ ಆರೋಗ್ಯ ಕೇಂದ್ರಕ್ಕೆ (Health Centre) ಶಾಸಕಿ ಶಾರದಾ ಪೂರ್ಯಾನಾಯ್ಕ್‌ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಾರ್ವಜನಿಕರು ಹಲವು ನ್ಯೂನತೆಗಳ ಕುರಿತು ತಿಳಿಸಿದರು. ಇದನ್ನೂ ಓದಿ – ಪಂಜರ ಸೇರಿತು ಶಿವಮೊಗ್ಗಕ್ಕೆ ಆಗಮಿಸಿದ್ದ ಟಿ-55 ಯುದ್ಧ ಟ್ಯಾಂಕರ್ ಸ್ಥಳೀಯರು ಏನೆಲ್ಲ ದೂರು ಹೇಳಿದರು? ಆಯನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ (Health Centre) ಸುತ್ತಮುತ್ತಲ ಗ್ರಾಮದ ಜನರು ಬರುತ್ತಾರೆ. ಉತ್ತಮ ವೈದ್ಯರಿದ್ದಾರೆ. ಆದರೆ ಸಂಜೆ … Read more

ಗಾಜನೂರು ತುಂಗಾ ಜಲಾಶಯದ ಮುಂದೆ ಯುವಕ ನಾಪತ್ತೆ, ಶೋಧ ಕಾರ್ಯ ಚುರುಕು

Fire-Rescue-team-at-Tunga-dam

SHIVAMOGGA LIVE NEWS | 12 AUGUST 2023 SHIMOGA : ತುಂಗಾ ಜಲಾಶಯದ (Tunga Dam) ಮುಂಭಾಗ ವೀಕ್ಷಣೆಗೆ ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಾಪತ್ತೆಯಾದ ಯುವಕನನ್ನು ಶಿವಮೊಗ್ಗದ ಮಿಳಘಟ್ಟದ ಹರೀಶ್‌ ಎಂದು ಹೇಳಲಾಗುತ್ತಿದೆ. ಜಲಾಶಯದ ಮುಂಭಾಗ ವೀಕ್ಷಣೆಗೆ ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ತುಂಗಾ ಜಲಾಶಯದ ಮೇಲ್ಭಾಗದಲ್ಲಿ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧವಿದೆ. ಆದರೆ ಕೆಲವರು ಚಾನಲ್‌ ಏರಿ ಮೇಲೆ ಹೋಗಿ ತುಂಗಾ ಜಲಾಶಯದ … Read more