ನಾಯಿ ಕಚ್ಚಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ, ಕೊಲೆ ಬೆದರಿಕೆ

KUMSI-NEWS

ಶಿವಮೊಗ್ಗದ ಲೈವ್.ಕಾಂ | KUMSI NEWS | 4 ಫೆಬ್ರವರಿ 2022 ಬಾಲಕನಿಗೆ ನಾಯಿ ಕಚ್ಚಿದ್ದನ್ನು ಪ್ರಶ್ನಿಸಿದ ತಂದೆ, ತಾಯಿ ಮೇಲೆಯೇ ಹಲ್ಲೆ ನಡೆಸಲಾಗಿದೆ. ಅಲ್ಲದೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ತಾಲೂಕು ಕೊನಗವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬಾಲಕನಿಗೆ ನಾಯಿ ಕಚ್ಚಿದ್ದನ್ನು ಪ್ರಶ್ನಿಸಿದ ತಂದೆ-ತಾಯಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಹಾಕಲಾಗಿದೆ. ಹೇಗಾಯ್ತು ಘಟನೆ? ಕೊನಗವಳ್ಳಿಯ ರೂಪಾ, ಆಕೆಯ ಪತಿ ರುದ್ರೇಶ್ ಮತ್ತು … Read more

ಮನೆ ಮೇಲೆ ಹೊಳೆಹೊನ್ನೂರು ಪೊಲೀಸರಿಂದ ದಾಳಿ

020222 Holehonnur Police Raid on a house in taraganahlli

ಶಿವಮೊಗ್ಗದ ಲೈವ್.ಕಾಂ | HOLEHONNURU NEWS | 2 ಫೆಬ್ರವರಿ 2022 ಕ್ವಿಂಟಾಲ್’ಗಟ್ಟಲೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕಾಳಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಲಾಗಿತ್ತು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ತರಗನಹಳ್ಳಿ ಗ್ರಾಮದ ಮಲ್ಲಿಕಮ್ಮ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಪೊಲೀಸರು ಇವತ್ತು ದಾಳಿ ನಡೆಸಿದ್ದಾರೆ. ಮನೆ ಮಾಲೀಕರು ಅಲ್ಲಿಲ್ಲ ಮಲ್ಲಿಕಮ್ಮ ಅವರು … Read more

ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಸಿಂಹಗಳ ನಡುವೆ ಕಾದಾಟ, ಸಿಂಹಿಣಿ ಸಾವು

010222 lion manya dies in tyavarekoppa

ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022 ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಎರಡು ಸಿಂಹಗಳ ನಡುವೆ ಕಾದಾಟವಾಗಿದೆ. ಘಟನೆಯಲ್ಲಿ ಸಿಂಹಿಣಿಯೊಂದು ಸಾವನ್ನಪ್ಪಿದೆ. ಇದರಿಂದ ಸಿಂಹಧಾಮದಲ್ಲಿ ಸಿಂಹಗಳ ಸಂಖ್ಯೆ 5ಕ್ಕೆ ಕುಸಿದಿದೆ. ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಮಾನ್ಯಾ (11) ಎಂಬ ಸಿಂಹಿಣಿ ಸಾವನ್ನಪ್ಪಿದೆ. ಸೋಮವಾರ ಮಾನ್ಯಾಳ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ವಾರದ ಹಿಂದೆ ಕಾದಾಟ ಸಿಂಹಧಾಮದ ಯಶವಂತ ಎಂಬ ಸಿಂಹದ ಜೊತೆಗೆ ಮಾನ್ಯಾ ಕಾದಾಟ ನಡೆಸಿತ್ತು. ಒಂದು ವಾರದ ಹಿಂದೆ ಇವೆರಡು ಸಿಂಹಗಳ … Read more

ಹೊಳೆಬೆನವಳ್ಳಿ ಬಳಿ ದಿಢೀರ್ ರಸ್ತೆಗೆ ಬಂದ ಟ್ರಾಕ್ಟರ್, ಬೈಕ್ ಸವಾರ ಸಾವು

crime name image

ಶಿವಮೊಗ್ಗದ ಲೈವ್.ಕಾಂ | SHIMOGA CRIME NEWS | 1 ಫೆಬ್ರವರಿ 2022 ಟ್ರಾಕ್ಟರ್ ಟ್ರೈಲರ್’ಗೆ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿಯ ಪೆಟ್ರೋಲ್ ಬಂಕ್ ಮುಂಭಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ರೇಣು (42) ಎಂಬುವವರು ಮೃತಪಟ್ಟಿದ್ದಾರೆ. ಹೇಗಾಯ್ತು ಅಪಘಾತ? ಶಿವಮೊಗ್ಗದ ಚಿಕ್ಕಲ್’ನ ರೇಣು ಅವರು ಗುರುಪುರದ ಶಿವಕುಮಾರ್ ಅವರೊಂದಿಗೆ ಜನವರಿ 28ರಂದು … Read more

ಆಯನೂರು | ನಡೆದು ಹೋಗುತ್ತಿದ್ದ ಯುವಕರಿಗೆ ಖಾಸಗಿ ಬಸ್ ಡಿಕ್ಕಿ

crime name image

ಶಿವಮೊಗ್ಗದ ಲೈವ್.ಕಾಂ | ಆಯನೂರು NEWS | 30 ಜನವರಿ 2022 ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು, ರಸ್ತೆ ಬದಿ ನಡೆದು ಹೋಗುತ್ತಿದ್ದ ಮೂವರು ಯುವಕರಿಗೆ ಗುದ್ದಿದೆ. ಆಯನೂರು ಬಳಿ ಶನಿವಾರ ಘಟನೆ ಸಂಭವಿಸಿದೆ. ಹಾರನಹಳ್ಳಿಯ ಅಲ್ಲಾಭಕ್ಷಿ, ರಾಹುಲ್ ಮತ್ತು ಕಿರಣ್ ಎಂಬುವವರು ಗಾಯಗೊಂಡಿದ್ದಾರೆ. ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಮೂವರು ಯುವಕರು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಬಸ್ ಗುದ್ದುತ್ತಿದ್ದಂತೆ ಸ್ಥಳೀಯರು ಯುವಕರಿಗೆ ನೆರವಾಗಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು KFD ಪ್ರಕರಣ, ಶಿಕ್ಷಕರೊಬ್ಬರಿಗೆ ಸೋಂಕು ದೃಢ

Shimoga Map Graphics

ಶಿವಮೊಗ್ಗದ ಲೈವ್.ಕಾಂ | SHIMOGA NEWS | 28 ಜನವರಿ 2022 ಶಿವಮೊಗ್ಗದಲ್ಲಿ ಒಂದೇ ತಿಂಗಳಲ್ಲಿ ಎರಡನೇ KFD ಪ್ರಕರಣ ಪತ್ತೆಯಾಗಿದೆ. ಶಿಕ್ಷಕರೊಬ್ಬರಿಗೆ KFD ಸೋಂಕು (ಮಂಗನ ಕಾಯಿಲೆ) ದೃಢವಾಗಿದೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಯನೂರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿದ್ದ ಶಿಕ್ಷಕ, ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ರಕ್ತದ ಮಾದರಿಯನ್ನು KFD ಲ್ಯಾಬ್’ಗೆ ಕಳುಹಿಸಲಾಗಿತ್ತು. KFD ಪಾಸಿಟಿವ್ ಬಂದ ಹಿನ್ನೆಲೆ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. … Read more

ಗ್ರಾಮ ಲೆಕ್ಕಾಧಿಕಾರಿಯನ್ನು ತಳ್ಳಾಡಿ, ಅವಾಚ್ಯವಾಗಿ ನಿಂದಿಸಿದ ಆರೋಪ, ಮೂವರ ವಿರುದ್ಧ ಕೇಸ್

Shimoga Map Graphics

ಶಿವಮೊಗ್ಗದ ಲೈವ್.ಕಾಂ | SHIMOGA NEWS | 25 ಜನವರಿ 2022 ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಮಾಹಿತಿ ಹಿನ್ನೆಲೆ, ಪರಿಶೀಲನೆಗೆ ತೆರಳಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ತಳ್ಳಾಡಿ, ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಬಸವನಗಂಗೂರು ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಯೋಗೇಶ್ ನಾಯ್ಕ್ ಅವರು ಪರಿಶೀಲನೆಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಬಸವನಗಂಗೂರು ಗ್ರಾಮದ ಜಮೀನು ಒಂದರಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿತ್ತು. ಈ ಕುರಿತು ಗ್ರಾಮ … Read more

ತೋಟದ ಮನೆ ಮೇಲೆ ಶಿವಮೊಗ್ಗ ಪೊಲೀಸರ ದಾಳಿ, ಇಬ್ಬರು ಅರೆಸ್ಟ್, ಮೂವರು ಮಹಿಳೆಯರ ರಕ್ಷಣೆ

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಜನವರಿ 2022 ತೋಟದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಅರೋಪದ ಹಿನ್ನೆಲೆ ಮಹಿಳಾ ಠಾಣೆ ಇನ್ಸ್ ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಮೂವರು ಮಹಿಳೆಯರ ರಕ್ಷಣೆ ಮಾಡಲಾಗಿದೆ. ಶಂಕರ ಮತ್ತು ಮುನಿಯಪ್ಪ ಎಂಬುವವರನ್ನು ಬಂಧಿಸಲಾಗಿದೆ. ಬೇರೆ ಊರುಳಿಂದ ಮೂವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಏನಿದು ಪ್ರಕರಣ? ಮಾಲೀಕರಿಗೆ ಗೊತ್ತಾಗದ ಹಾಗೆ ಶಿವಮೊಗ್ಗದ ಸಮೀಪದ ತೋಟದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಈ … Read more

ಬಿಕ್ಕೊನಹಳ್ಳಿ ಬಳಿ ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ, ಮೂವರು ಬೈಕ್ ಸಾವರರಿಗೆ ಗಾಯ

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಜನವರಿ 2022 ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಸವಾರನೊಬ್ಬ ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್’ಗೆ ಹ್ಯಾಂಡಲ್ ತಗುಲಿಸಿದ್ದು, ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಸವಳಂಗ ರಸ್ತೆಯ ಬಿಕ್ಕೋನಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಹೊಳೆಹಟ್ಟಿಯ ಮಂಜುನಾಥ, ಅಭಿಲಾಶ್, ಪವನ್ ಕುಮಾರ್ ಗಾಯಗೊಂಡವರು. ಹೇಗಾಯ್ತು ಘಟನೆ? ಜೋಗಿಹಳ್ಳಿ ಜಾತ್ರೆಗೆ ಅಭಿಲಾಶ್, ಮಂಜುನಾಥ್ ಮತ್ತು ಪವನ್ ಕುಮಾರ್ ಒಂದೇ ಬೈಕಿನಲ್ಲಿ ತೆರಳುತ್ತಿದ್ದರು. ಮಂಜುನಾಥ ಬೈಕ್ ಚಲಾಯಿಸುತ್ತಿದ್ದ. ಬಿಕ್ಕೋನಹಳ್ಳಿ ಬಳಿ … Read more

ಸಕ್ರೆಬೈಲು ಬಳಿ ಮರಕ್ಕೆ ಡಿಕ್ಕಿಯಾಗಿ ಧಗಧಗ ಉರಿದ ಕಾರು, ಯುವಕ ಸಾವು

180122 Car Caught Fire Near Sakrebyle in Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಜನವರಿ 2022 ಸಕ್ರೆಬೈಲು ಸಮೀಪ ಮರಕ್ಕೆ ಕಾರು ಡಿಕ್ಕಿಯಾಗಿ, ಬೆಂಕಿ ಹೊತ್ತುಕೊಂಡ ಪ್ರಕರಣದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಶಿವಮೊಗ್ಗದ ವೆಂಕಟೇಶನಗರದ ಸನತ್ (22) ಮೃತ ದುರ್ದೈವಿ. ಭದ್ರಾವತಿಯ ರುದ್ವಿಕ್ ಮತ್ತು ಅನೋಕ್ ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಡಗದ್ದೆಯಿಂದ ಮರಳುತ್ತಿದ್ದರು ಮೂವರು ಯುವಕರು ಮಂಡಗದ್ದೆಗೆ ತೆರಳಿದ್ದರು. ಊಟ ಮುಗಿಸಿ ಮರಳುತ್ತಿದ್ದಾಗ ಸಕ್ರೆಬೈಲು ಬಳಿ ಕಾರು ಮರಕ್ಕೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಮೂವರಿಗೂ ಗಾಯವಾಗಿದೆ. ಗಂಭೀರ ಗಾಯಗೊಂಡಿದ್ದ … Read more