ಜಿಂಕೆ ಮಾಂಸ, ಚರ್ಮ ಮಾರಾಟಕ್ಕೆ ಯತ್ನ, ಇಬ್ಬರು ಅರೆಸ್ಟ್, ಸಿಕ್ಕಿಬಿದ್ದವರಾರು? ಎಲ್ಲಿ ಬೇಟೆಯಾಡಿದ್ದರು?

070920 Deer Hunters Arrest in Kumsi Limits 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಸೆಪ್ಟಂಬರ್ 2020 ಕಾಡಿನಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸಲು ಯತ್ನಿಸುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ 40 ಕೆ.ಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ಅಡಗಡಿ ಗ್ರಾಮದ ಅನಿಲ್ ಮತ್ತು ಹನುಮಂತ ಎಂಬುವವರು ಮಂಡಘಟ್ಟ ಸಮೀಪ ಕಾಡಿನಲ್ಲಿ ಜಿಂಕೆ ಬೇಟೆಯಾಡಿದ್ದರು. ಜಿಂಕೆಯ ತಲೆ, ಚರ್ಮ, ಕೊಂಬು ಮತ್ತು ಮಾಂಸವನ್ನು ಬೇರ್ಪಡಿಸಿ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. … Read more

ಶಿವಮೊಗ್ಗದಲ್ಲಿ ಟಿಪ್ಪರ್ ಲಾರಿ ಎಂಜಿನ್ನಲ್ಲಿ ಸೇರಿಕೊಂಡ ಹೆಬ್ಬಾವು ರಕ್ಷಣೆ

200820 Snake Kiran Catches Hebbavu 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಆಗಸ್ಟ್ 2020 ಟಿಪ್ಪರ್ ಎಂಜಿನ್‍ನಲ್ಲಿ ಸೇರಿಕೊಂಡಿದ್ದ ಹೆಬ್ಬಾವನ್ನು ರಕ್ಷಣೆ  ಮಾಡಲಾಗಿದೆ. ತಾಲೂಕಿನ ಕಲ್ಲಗಂಗೂರಿನ ಮಂಜುನಾಥ್ ಎಂಬುವರ ಟಿಪ್ಪರ್ ಎಂಜಿನ್‌ನಲ್ಲಿ ಹೆಬ್ಬಾವು ಸೇರಿಕೊಂಡಿತ್ತು. ಹಾವನ್ನು ಓಡಿಸಲು ಮಂಜುನಾಥ್ ಪ್ರಯತ್ನಿಸಿದ್ದಾರೆ. ಕೊನೆಗೆ ಸ್ನೇಕ್ ಕಿರಣ್ ಅವರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ 3 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಮೂಲಕ ಕಾಡಿಗೆ ಬಿಟ್ಟಿದ್ದಾರೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ … Read more

ಮನೆ ಆವರಣದಲ್ಲಿ ಗಾಂಜಾ ಬೆಳೆದ ಇಬ್ಬರು ಆರೆಸ್ಟ್, 17 ಕೆ.ಜಿ. ಗಾಂಜಾ ಗಿಡ ವಶಕ್ಕೆ

160820 Ganja Peddlers arrest in Kumsi Station 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಆಗಸ್ಟ್ 2020 ಗಾಂಜಾ ಬೆಳೆಗಾರರು ಮತ್ತು ಮಾರಾಟಗಾರರ ವಿರುದ್ಧ ಪೊಲೀಸರು ದಾಳಿ ಮುಂದುವರೆಸಿದ್ದಾರೆ. ಮಾರಾಟದ ಉದ್ದೇಶಕ್ಕೆ 17 ಕೆ.ಜಿ. ಗಾಂಜಾ ಬೆಳೆದಿದ್ದ ಇಬ್ಬರನ್ನು ಕುಂಸಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಯಾರೆಲ್ಲ ಬಂಧಿತರು? ಎಷ್ಟು ಗಾಂಜಾ ಬೆಳೆದಿದ್ದರು? ಎಂಟು ಕೆ.ಜಿ. ಗಾಂಜಾ ವಶಕ್ಕೆ | ದೊಡ್ಡಮಟ್ಟಿ ಗ್ರಾಮದ ರಾಜೇಶ್ (30) ಎಂಬಾತ ಮನೆ ಆವರಣದಲ್ಲಿ 16 ಸಾವಿರ ರೂ. ಮೌಲ್ಯದ 8 ಕೆ.ಜಿ.ಯಷ್ಟು ಗಾಂಜಾ ಬೆಳೆದಿದ್ದರು. ಖಚಿತ … Read more

ತುಂಗಾ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಶಿವಮೊಗ್ಗ ಪಾಲಿಕೆ ಕಾರ್ಪೊರೇಟರ್ ಪುತ್ರ, ಮೃತದೇಹ ಪತ್ತೆ

150820 Corporator Son Dies in Tunga Channel 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಆಗಸ್ಟ್ 2020 ಹಾಯ್‍ಹೊಳೆ ಸಮೀಪ ತುಂಗಾ ನದಿ ಚಾನಲ್‍ನಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಚಾನೆಲ್‍ನಲ್ಲಿ ಇವತ್ತು ಶೋಧ ಕಾರ್ಯ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಗಿದೆ. ಹೇಗಾಯ್ತು ಘಟನೆ? ಪ್ರತೀಶ್ (24) ಮೃತ ಯುವಕ. ಸ್ನೇಹಿತರೊಂದಿಗೆ ಶುಕ್ರವಾರ ಹುಟ್ಟುಹಬ್ಬದ ಆಚರಿಸಲು ತುಂಗಾ ನದಿ ಚಾನಲ್ ಬಳಿ ತೆರಳಿದ್ದರು. ಚಾನೆಲ್‍ಗೆ ನೀರಿನ ಬಾಟಲ್ ಬಿದ್ದಿದ್ದು, ಅದನ್ನು ಮೇಲೆತ್ತಲು ಹೋದಾಗ ಆಯಾತಪ್ಪಿ ಚಾನಲ್‍ಗೆ ಬಿದ್ದು, ಕೊಚ್ಚಿ ಹೋಗಿದ್ದರು. ನಿನ್ನೆಯಿಂದಲೇ ಶೋಧ … Read more

ಗಾಂಜಾ ಮಾರಾಟಗಾರರ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ದಾಳಿ, ಸಬ್ ಇನ್ಸ್‌ಪೆಕ್ಟರ್ ತಲೆ, ಪಿಸಿ ಕೈಗೆ ಗಾಯ

130820 Kumsi PSI Naveen Matapathi 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಆಗಸ್ಟ್ 2020 ಗಾಂಜಾ ಮಾರುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿದ್ದ ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೇಗಾಯ್ತು ಘಟನೆ? ಶಿವಮೊಗ್ಗ ತಾಲೂಕು ಮಂಡಘಟ್ಟದಲ್ಲಿ ಮಧು ಮತ್ತು ಮನು ಎಂಬುವವರು ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಅವರನ್ನು ಬಂಧಿಸಲು ಕುಂಸಿ ಠಾಣೆ ಸಬ್‍ ಇನ್ಸ್‍ಪೆಕ್ಟರ್ ನವೀನ್ ಮಠಪತಿ ನೇತೃತ್ವದಲ್ಲಿ ಪೊಲೀಸರು ತೆರಳಿದ್ದರು. ಈ ವೇಳೆ ದಾಳಿಯಾಗಿದೆ. ಪಿಎಸ್‍ಐ ತಲೆಗೆ … Read more

ತುಂಗಾ ಜಲಾಶಯದಿಂದ ಹೆಚ್ಚಾಯ್ತು ಹೊರ ಹರಿವು, ಹಳೆ ಶಿವಮೊಗ್ಗದಲ್ಲಿ ಭಯ, ಎಷ್ಟು ನೀರು ಹೊರ ಬಿಡಲಾಗ್ತಿದೆ?

050820 Tunga Dam 21 Crust Gate 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಆಗಸ್ಟ್ 2020 ತೀರ್ಥಹಳ್ಳಿ ಸೇರಿದಂತೆ ಜಲಾಶಯದ ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಮತ್ತಷ್ಟು ಹೆಚ್ಚಳವಾದ ಹಿನ್ನೆಲೆಯಲ್ಲಿ, ತುಂಗಾ ಜಲಾಶಯದಿಂದ ಮತ್ತಷ್ಟು ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ. ಬೆಳಗ್ಗೆ 8 ಗಂಟೆಗೆಯ ವರದಿಯ ಪ್ರಕಾರ ತುಂಗಾ ಜಲಾಶಯದ ಎಲ್ಲಾ ಗೇಟುಗಳಿಂದ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದ ಒಳ ಹರಿವು 68,500 ಕ್ಯೂಸೆಕ್ ಇದೆ. ಹೊರ ಹರಿವು 71,000 ಕ್ಯೂಸೆಕ್ ಇದೆ. ಮೂರು ಗಂಟೆಯಿಂದ ಹೆಚ್ಚಾದ ಹರಿವು ರಾತ್ರಿ 3 … Read more

ಮಳೆ ನಡುವೆಯು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಚುರುಕು, ರನ್ ವೇ ಕಾಮಗಾರಿ ಪರಿಶೀಲಿಸಿದ ಸಂಸದ ರಾಘವೇಂದ್ರ

060820 Raghavendra Visit To Shimoga Airport Spot 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಆಗಸ್ಟ್ 2020 ಮಳೆಯ ನಡುವೆಯು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಿರುಸಾಗಿ ನಡೆಯುತ್ತಿದೆ. ಸಂಸದ ಬಿ.ವೈ.ರಾಘವೇಂದ್ರ ಇವತ್ತು ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದರು. ಸೋಗಾನೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಏರ್‍ಬಸ್ ವಿಮಾನಗಳು ಲ್ಯಾಂಡಿಂಗ್ ಆಗಲು ಅನುವಾಗುವಂತೆ, ರನ್‍ವೇ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸಂಸದ ರಾಘವೇಂದ್ರ ಸೂಚಿಸಿದರು. ವಿಮಾನ ನಿಲ್ದಾಣದ ಪ್ಲಾನ್ ಹಿಡಿದು ರನ್‍ ವೇಗೆ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ ಸಂಸದ ರಾಘವೇಂದ್ರ, ಅಧಿಕಾರಿಗಳಿಂದ … Read more

ಆಯನೂರು ಕೋಟೆ ಬಳಿ ವ್ಯಕ್ತಿಯೊಬ್ಬರಿಗೆ ಕರೋನ, ಮನೆಯಲ್ಲಿದ್ದವರಿಗೆ ಕ್ವಾರಂಟೈನ್

shivamogga graphics map

ಶಿವಮೊಗ್ಗ ಲೈವ್.ಕಾಂ | AYANUR NEWS | 11 ಜುಲೈ 2020 ಬೆಂಗಳೂರಿನಿಂದ ಬಂದಿದ್ದ ಕಾರ್ಪೆಂಟರ್ ಒಬ್ಬರಿಗೆ ಕರೋನ ಸೋಂಕು ತಗುಲಿರುವುದು ದೃಢವಾಗಿದೆ. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಯನೂರಿನ ಕೋಟೆ ಪ್ರದೇಶಕ್ಕೆ ಬೆಂಗಳೂರಿನಿಂದ ಬಂದಿದ್ದ 48 ವರ್ಷದ ಕಾರ್ಪೆಂಟರ್ ಒಬ್ಬರಿಗೆ ಸೋಂಕು ತಗುಲಿದೆ. ಇವರು ಪತ್ನಿ, ಮೂವರು ಮಕ್ಕಳೊಂದಿಗೆ ಬಂದಿದ್ದರು. ಆಯನೂರಿನ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಸೋಂಕು ದೃಢವಾಗುತ್ತಿದ್ದಂತೆ ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರ ಮನೆಯಲಿದ್ದ ಆರು ಮಂದಿಯನ್ನು ಕ್ವಾರಂಟೈನ್ಗೆ … Read more

ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ಧಗಧಗ ಹೊತ್ತಿ ಉರಿದ ಕಾರು

030720 Car Burn Near Mandagadde 1

ಶಿವಮೊಗ್ಗ ಲೈವ್.ಕಾಂ | MANDAGADDE NEWS | 3 ಜುಲೈ 2020 ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೆ ನಿಮಿಷದಲ್ಲಿ ಕಾರಿಗೆ ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿದೆ. ಮಂಡಗದ್ದೆ ಬಳಿ 15ನೇ ಮೈಲಿ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಳೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ‌.

ಹಾಲು ಹಾಕುತ್ತಿದ್ದ ವ್ಯಕ್ತಿಗೆ ಎದೆ ನೋವು, ಪರೀಕ್ಷೆ ಮಾಡಿದಾಗ ಪತ್ತೆಯಾಯ್ತು ಕರೋನ ಸೋಂಕು

shivamogga graphics map

ಶಿವಮೊಗ್ಗ ಲೈವ್.ಕಾಂ | AYANRU NEWS | 3 ಜುಲೈ 2020 ಹಾಲು ಹಾಕುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಇಟ್ಟಿಗೆಹಳ್ಳಿಯ 42 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಯನೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಕರೋನ ಪರೀಕ್ಷೆ ನಡೆಸಲಾಗಿತ್ತು. ಆಗ ಆತನಲ್ಲಿ ಕರೋನ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಕ್ವಾರಂಟೈನ್ ಮಾಡಲಾಗಿದೆ. ಗದ್ದೆ ಕೆಲಸದ ಜೊತೆಗೆ ಈ ವ್ಯಕ್ತಿ ಹಲವು ಕಡೆ ಹಾಲು ಕೊಡಲು ಹೋಗುತ್ತಿದ್ದರು. ಡೈರಿಯೊಂದಕ್ಕೂ ಹಾಲು ಹಾಕುತ್ತಿದ್ದರು … Read more