ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020
ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್’ಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ. ಮೇಯರ್ ಆಗಿ ಸುವರ್ಣ ಶಂಕರ್ ಅವರ ಆಯ್ಕೆ ಕಾನೂನು ಬಾಹಿರ ಎಂದು ಆರೋಪಿಸಿ, ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಅಲ್ಲದೆ, ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ಸುವರ್ಣ ಶಂಕರ್ ಅವರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಹಾಗಿದ್ದೂ ಜಾತಿ ಪ್ರಮಾಣ ಪತ್ರ ಪಡೆದುಕೊಂಡು, ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ಆಯ್ಕೆ ಕಾನೂನು ಬಾಹಿರವಾಗಿದ್ದು, ಇದನ್ನು ಹೈಕೋರ್ಟ್’ನಲ್ಲಿ ಪ್ರಶ್ನಿಸಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್’ಗಳು ತಿಳಿಸಿದ್ದಾರೆ.
ಮೇಯರ್ ಆಯ್ಕೆ ಚುನಾವಣೆ ಆರಂಭವಾಗುತ್ತಿದ್ದಂತೆ, ಚುನಾವಣಾಧಿಕಾರಿಗೆ ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಯಮುನಾ ರಂಗೇಗೌಡ ಮನವಿ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಸುವರ್ಣ ಶಂಕರ್ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಈ ನಡುವೆ ಮೇಯರ್ ಆಯ್ಕೆಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಡುತ್ತದೆ ಎಂದು ಪ್ರಾದೇಶಿಕ ಆಯುಕ್ತ ಎನ್.ವಿ.ಪ್ರಸಾದ್ ಘೋಷಿಸಿದರು. ಮೇಯರ್ ಆಯ್ಕೆ ಪ್ರಕ್ರಿಯೆ ಮುಕ್ತಾಯದ ಬಳಿಕವು, ಕಾಂಗ್ರೆಸ್’ನ ಯಮುನಾ ರಂಗೇಗೌಡ, ಚುನಾವಣಾಧಿಕಾರಿಗೆ ತಮ್ಮ ಮನವಿ ಸಲ್ಲಿಸಿದರು.
ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಕಾನೂನು ಪ್ರಕಾರ ಸುವರ್ಣ ಶಂಕರ್ ಅವರು ಮೇಯರ್ ಆಗಿ ಆಯ್ಕೆಯಾಗಲು ಸಾಧ್ಯವಿಲ್ಲ. ನಮ್ಮ ಬಳಿ ದಾಖಲೆಗಳಿವೆ. ಈ ಕುರಿತು ಹೈಕೋರ್ಟ್’ನಲ್ಲಿ ಪ್ರಶ್ನೆ ಮಾಡುತ್ತೇವೆ. ಪಕ್ಷದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
- ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ರಾತ್ರೋರಾತ್ರಿ ಹೊತ್ತಿ ಉರಿದ ಕಾರು
- ಶಿವಮೊಗ್ಗದಲ್ಲಿ ಜನತಾ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್, ಎಷ್ಟು ಅರ್ಜಿ ಸಲ್ಲಿಕೆಯಾಯ್ತು? ಇಲ್ಲಿದೆ 6 ಪ್ರಮುಖಾಂಶ
- ಜನತಾ ದರ್ಶನ, ಸಿಎಂಗೆ ಹೊಸ ಪ್ರಸ್ತಾವನೆ ಸಲ್ಲಿಸಲು ಮುಂದಾದ ಸಚಿವ ಮಧು ಬಂಗಾರಪ್ಪ, ಏನದು?
- ಇವತ್ತು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಭದ್ರಾವತಿಯಲ್ಲಿ ಹೇಗಿದೆ ಸಿದ್ಧತೆ?
- ಕುಂದಾಪುರಕ್ಕೆ ಹೋಗಲು ಶಿವಮೊಗ್ಗದಲ್ಲಿ ಪತಿ ಜೊತೆ ಬಸ್ ಹತ್ತಿದ ಮಹಿಳೆ, ಸೀಟ್ ಸಿಕ್ಕ ತಕ್ಷಣ ಕಾದಿತ್ತು ಶಾಕ್
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]