ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 AUGUST 2023
SHIMOGA : ಬಾಡಿಗೆ ವಿಚಾರದಲ್ಲಿ ಆಟೋ ಚಾಲಕರ ಮಧ್ಯೆ ಮಾತಿಗೆ ಮಾತು ಬೆಳೆದು ಓರ್ವ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣದ (Railway Station) ಬಳಿ ಘಟನೆ ಸಂಭವಿಸಿದೆ.
ಆಟೋ ಚಾಲಕ ಫಯಾಜ್ ಖಾನ್ ಮೇಲೆ ಹಲ್ಲೆ ನಡೆಸಲಾಗಿದೆ. ರೈಲ್ವೆ ನಿಲ್ದಾಣದ (Railway Station) ಮುಂದೆ ಆಟೋ ನಿಲ್ಲಿಸಿಕೊಂಡಿದ್ದಾಗ ಮಹಿಳೆಯೊಬ್ಬರು ಕಮಲಾ ನೆಹರೂ ಹಾಸ್ಟೆಲ್ವರೆಗೆ ಬಿಡುವಂತೆ ಕೇಳಿದ್ದಾರೆ. 40 ರೂ. ಬಾಡಿಗೆ ನೀಡುವಂತೆ ಫಯಾಜ್ ಖಾನ್ ತಿಳಿಸಿದ್ದಾರೆ. ಆಗ ಅಲ್ಲಿಯೇ ಇದ್ದ ಇತರೆ ನಾಲ್ವರು ಆಟೋ ಚಾಲಕರು ಆಕ್ರೋಶಗೊಂಡು, ಫಯಾಜ್ ಖಾನ್ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಮೂಗು, ಕಣ್ಣಿನ ಭಾಗಕ್ಕೆ ಗಾಯವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ದಿಢೀರ್ ಕೆಳಗೆ ಬಿದ್ದ ಬೃಹತ್ ರಾಷ್ಟ್ರಧ್ವಜ, ಆಟೋ ಚಾಲಕರಿಂದ ತ್ರಿವರ್ಣಕ್ಕೆ ಗೌರವ
ಇತರೆ ಆಟೋ ಚಾಲಕರು ಗಲಾಟೆ ಬಿಡಿಸಿದ್ದು ಫಯಾಜ್ ಖಾನ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬೆದರಿಕೆ ಹಾಕಿ, ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಫಯಾಜ್ ಖಾನ್ ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422