ಈಶ್ವರಪ್ಪ ಪರ ಪ್ರಚಾರಕ್ಕೆ ಜನ ಕರೆಯಲು ಹೋದ ಸಂಯೋಜಿಕಿ ಮೇಲೆ ಹಲ್ಲೆ

Published On : ಏಪ್ರಿಲ್ 24, 2024

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 24 APRIL 2024

SHIMOGA : ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪರ ಪ್ರಚಾರಕ್ಕೆ ಜನರ ಸಂಯೋಜನೆ ವೇಳೆ ಮಹಿಳೆ ಮೇಲೆ ಹಲ್ಲೆಯಾಗಿದೆ. ಸವರ್‌ಲೈನ್‌ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಮಾರಿಕಾಂಬ ಟ್ರಸ್ಟ್‌ ಸಂಯೋಜಕಿ ಪೂರ್ಣಿಮಾ ಎಂಬುವವರ ಮೇಲೆ ಹಲ್ಲೆಯಾಗಿದೆ. ಏ.20ರಂದು ಸವರ್‌ಲೈನ್‌ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಪೂರ್ಣಿಮಾ ಜನರನ್ನು ಸಂಯೋಜಿಸುತ್ತಿದ್ದರು. ಈ ಸಂದರ್ಭ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಪೂರ್ಣಿಮಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈಶ್ವರಪ್ಪ ಪರ ಪ್ರಚಾರ ನಡೆಸದಂತೆ ಆಗ್ರಹಿಸಿ ಅಶ್ಲೀಲವಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಕಲ್ಲಿಹಾಳ್‌ನಲ್ಲಿ ವಿಜಯೇಂದ್ರ ವಿರುದ್ಧ ಮರಾಠ ಸಮಾಜದ ಪ್ರತಿಭಟನೆ, ಕ್ಷಮೆಗೆ ಆಗ್ರಹ

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 24, 2024

Leave a Comment