ಹಾವು ಕೊಂದ ಶಿವಮೊಗ್ಗ ಸ್ಮಾರ್ಟ್ ಸಿಟಿ ಎಂಜಿನಿಯರ್’ಗಳು ಸೇರಿ ಮೂವರ ವಿರುದ್ಧ ಕೇಸ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಡಿಸೆಂಬರ್ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ರಸ್ತೆ ಅಗಲೀಕರಣ ವೇಳೆ ನಾಗರಹಾವೊಂದನ್ನು ಸಾಯಿಸಿದ ಆರೋಪದಲ್ಲಿ ಶಿವಮೊಗ್ಗ ಸ್ಮಾರ್ಟ್‌ಸಿಟಿ ಇಂಜಿನಿಯರ್’ಗಳ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ADVT JULY NANJAPPA HOSPITAL HOME LAB TESTING

ಶಂಕರ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಸ್ಮಾರ್ಟ್ ಸಿಟಿ ಇಂಜಿನಿಯರ್’ಗಳು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಮಾರ್ಟ್ ಸಿಟಿ ಇಂಜಿನಿಯರ್’ಗಳಾದ ಕೆ.ವಿ.ವಿಜಯಕುಮಾರ್, ರಾಜಕುಮಾರ್ ಮತ್ತು ಸಿಬ್ಬಂದಿ ನಾಗಪ್ಪ ಎಂಬುವವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಏನಿದು ಪ್ರಕರಣ?

ಕಳೆದ ಭಾನುವಾರ ಸಾಗರ ರಸ್ತೆಯ ಎಪಿಎಂಸಿ ಬಳಿ ಸ್ಮಾರ್ಟ್‌ಸಿಟಿ ಕಾಮಗಾರಿ ವೇಳೆ ಆಂಜನೇಯ ದೇವಸ್ಥಾನ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ದೇವಸ್ಥಾನದ ಬಳಿ ನಾಗರ ಹಾವು ಕಾಣಿಸಿಕೊಂಡಿದೆ. ಅಧಿಕಾರಿಗಳ ಸೂಚನೆ ಮೇರೆಗೆ ಜೆಸಿಬಿ ಬಳಸಿ ಚಾಲಕ ನಾಗಪ್ಪ ಹಾವನ್ನು ಸಾಸಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಾವು ಹಿಡಿಸಬಹುದಿತ್ತು

ನಾಗರ ಹಾವು ಪ್ರತ್ಯಕ್ಷವಾದಾಗ ಅದನ್ನು ಹಿಡಿಸಬಹುದಿತ್ತು. ಉರಗ ತಜ್ಞರನ್ನು ಕರೆಯಿಸಿ ಹಾವು ಹಿಡಿಸಿ, ಅರಣ್ಯ ವ್ಯಾಪ್ತಿಯಲ್ಲಿ ಬಿಡಬಹುದಿತ್ತು. ಆದರೆ ಅಧಿಕಾರಿಗಳು ಜೆಸಿಬಿ ಬಳಸಿ ಹಾವನ್ನು ಸಾಯಿಸಿದ್ದಾರೆ. ಬೇಕಂತಲೇ ಈ ಕೃತ್ಯ ಎಸಗಿದ್ದಾರೆ ಎಂದು ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

shivamogga live subscribe band

ಪ್ರಕರಣ ದಾಖಲು

ನಾಗರ ಹಾವು ಸಾವಿಗೆ ಕಾರಣರಾದ ಆರೋಪದ ಮೇಲೆ ಸ್ಮಾರ್ಟ್ ಸಿಟಿ ಇಂಜಿನಿಯರ್’ಗಳು, ಜೆಸಿಬಿ ಚಾಲಕನ ವಿರುದ್ಧ ಶಂಕರ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮೂವರು ತಲೆಮರೆಸಿಕೊಂಡಿದ್ದು ತನಿಖೆ ಮುಂದುವರಿದಿದೆ.

ಕ್ಯಾನ್ಸರ್ ಬಗ್ಗೆ ಇರಲಿ ಮುನ್ನೆಚ್ಚರಿಕೆ. ಈಗಲೆ ಪರೀಕ್ಷಿಸಿಕೊಳ್ಳಿ, ನೆಮ್ಮದಿಯ ಜೀವನ ನಡೆಸಿ.

AVvXsEgs2CAQQwFXPEeKJ0M8TIYSuTjC1YFP87yReiHpVPmRryODfVeCXuFAqftB8kOZ5mPWZitv CEgSxJ 0UftK 3Xtg FQnjiLvzYXdPYIyMcbnCizoegDYgVDMGV3v1L2lUIeE2 3X339z1W9X2I3kEIgBbfYiP ZYP9tZPaJV64qH Ith d6U8fBL4P5A=s926

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment