ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್‌ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಪೆಸೆಟ್‌ ಕಾಲೇಜು ಬಸ್‌ (College Bus) ಅಡ್ಡಗಟ್ಟಿ ಚಾಲಕನಿಗೆ ಜೀವ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆಸೆಟ್‌ (PESIT) ಕಾಲೇಜು ಬಸ್‌ ಚಾಲಕ ಹುಚ್ಚರಾಯ ಅವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹಿಂತಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ವಿನೋಬನಗರ ಆಟೋ ನಿಲ್ದಾಣದ ಬಳಿ ಪೆಸೆಟ್‌ ಕಾಲೇಜು ಬಸ್‌ ಅಡ್ಡಗಟ್ಟಿ ಚಾಲಕನಿಗೆ ನಿಂದಿಸಿದ್ದಾರೆ. ಬಸ್ಸು ಉಷಾ ನರ್ಸಿಂಗ್‌ ಹೋಂ ಬಳಿ ಹೋಗುತ್ತಿದ್ದಾಗ ಬೈಕಿನಲ್ಲಿ ಮೂವರು ಪುನಃ ಅಡ್ಡಗಟ್ಟಿ ಚಾಲಕ ಹುಚ್ಚರಾಯನನ್ನು ಕೆಳಗಿಳಿಸಿದ್ದಾರೆ.  

Crime-News-General-Image

ಇದನ್ನೂ ಓದಿ » ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ

ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment