ಮನೆಯಲ್ಲಿ ಚಿನ್ನಾಭರಣ, ಹಣ ಕಳ್ಳತನ, ಪೊಲೀಸರ ಬಲೆಗೆ ಬಿದ್ದಳು ಸೊಸೆ, ಸ್ನೇಹಿತನು ಅರೆಸ್ಟ್‌

Published On : ಮೇ 31, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE | 31 MAY 2023

SHIMOGA : ಮನೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ, ನಗದು ಕಳ್ಳತನ ಪ್ರಕರಣನ್ನು ಭೇದಿಸಿರುವ ಪೊಲೀಸರು, ದೂರು ಕೊಟಿದ್ದ ಮಹಿಳೆಯ ಸೊಸೆ (Daughter In Law) ಮತ್ತು ಆಕೆಯ ಪರಿಚಯಸ್ಥನನ್ನು ಬಂಧಿಸಿದ್ದಾರೆ. ಅವರಿಂದ ಚಿನ್ನಾಭರಣ, ನಗದು ವಶಕ್ಕೆ ಪಡೆಯಲಾಗಿದೆ.

Daughter-In-Law-arrest-over-theft-case-in-Malalakoppa-in-Shimoga

ಶಿವಮೊಗ್ಗ ತಾಲೂಕು ಮಳಲಕೊಪ್ಪದ ಹೇಮಾವತಿ (23) ಮತ್ತು ಆಕೆಯ ಪರಿಚಯಸ್ಥ ಸತೀಶ್‌ (22) ಎಂಬುವವರನ್ನು ಬಂಧಿಸಲಾಗಿದೆ. ಮಳಲಕೊಪ್ಪದ ರೇಣುಕಮ್ಮ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು ಎಂದು ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಏನಿದು ಪ್ರಕರಣ?

ರೇಣುಕಮ್ಮ ಅವರ ಮನೆಯ ಬೀರುವಿನಲ್ಲಿಟ್ಟಿದ್ದ ಬಂಗಾರದ ಆಭರಣ, ನಗದು ಕಳ್ಳತನವಾಗಿತ್ತು. ಮೇ 13ರಂದು ಈ ಸಂಬಂಧ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಇದು ವೃತ್ತಿಪರ ಕಳ್ಳರ ಕೃತ್ಯವಲ್ಲ ಎಂಬುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆ ಮನೆಯವರನ್ನು ತನಿಖೆ ನಡೆಸಿದಾಗ ದೂರು ನೀಡಿದ್ದ ರೇಣುಕಮ್ಮಳ ಸೊಸೆ (Daughter In Law) ಹೇಮಾವತಿ ಸಿಕ್ಕಿಬದ್ದಿದ್ದಾಳೆ. ಆಕೆಯ ಪರಿಚಯಸ್ಥ ಸತೀಶ್‌ ಕೂಡ ಬಂಧನಕ್ಕೊಳಗಾಗಿದ್ದಾನೆ.

ಇದನ್ನೂ ಓದಿ – ಗಂಡ, ಹೆಂಡತಿ ಜಗಳ, ಸಮಾಧಾನ ಮಾಡಲು ಬಂದಿದ್ದ ಸ್ನೇಹಿತೆಯರಿಗೆ ಚಾಕುವಿನಿಂದ ಹಲ್ಲೆ

ಬಂಧಿತರಿಂದ 4.30 ಲಕ್ಷ ರೂ. ಮೌಲ್ಯದ 90 ಗ್ರಾಂ ಆಭರಣ, 2050 ರೂ. ನಗದು ವಶಕ್ಕೆ ಪಡೆಯಲಾಗಿದೆ. ತುಂಗಾ ನಗರ ಠಾಣೆ ಇನ್ಸ್‌ಪೆಕ್ಟರ್‌ ಮಂಜುನಾಥ್‌, ಸಬ್‌ ಇನ್ಸ್‌ಪೆಕ್ಟರ್‌ ರಾಜುರೆಡ್ಡಿ ಬೆನ್ನೂರು, ಕುಮಾರ್‌ ಕುರಗುಂದ, ಎಎಸ್‌ಐ ಮನೋಹರ್, ಸಿಬ್ಬಂದಿ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಪಿಸಿ ನಾಗಪ್ಪ, ಹರೀಶ್ ನಾಯ್ಕ, ಲಂಕೇಶ್, ಕಾಂತರಾಜ್, ಅರಿಹಂತ, ಹರೀಶ್, ಸಂತೋಷ್, ರಮೇಶ್, ಶಿವಕುಮಾರ್, ರಾಘವೇಂಧ್ರ, ಜಯಪ್ಪ ತನಿಖಾ ತಂಡದಲ್ಲಿದ್ದರು.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮೇ 31, 2023

Leave a Comment