SHIVAMOGGA LIVE NEWS | 9 JANUARY 2025
ಶಿವಮೊಗ್ಗ : ನಕಲಿ ಬಂಗಾರ ಅಡವಿಟ್ಟು ಬ್ಯಾಂಕ್ (Bank) ಒಂದಕ್ಕೆ ದಂಪತಿ 1.70 ಲಕ್ಷ ರೂ. ವಂಚಿಸಿದ್ದಾರೆ. ಬ್ಯಾಂಕ್‌ನಲ್ಲಿ ಚಿನ್ನಾಭರಣ ಪರಿಶೀಲಿಸುವ ಅಪ್ರೈಸರ್‌ಗಳು ದಂಪತಿ ಜೊತೆಗೆ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಶೇಷಾದ್ರಿಪುರಂನ ಬ್ಯಾಂಕ್‌ನಲ್ಲಿ ಶಾಂತಿನಗರದ ದಂಪತಿ ಚಿನ್ನಾಭರಣ ಅಡಮಾನವಿಟ್ಟಿದ್ದರು. ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನಾಭರಣದ ಅಸಲಿಯತ್ತು ಪರಿಶೀಲಿಸುವ ಇಬ್ಬರು ಅಪ್ರೈಸರ್‌ಗಳು ಕೂಡ ದಂಪತಿ ಅಡವಿಟ್ಟ ನಕಲಿ ಬಂಗಾರವನ್ನು ಅಸಲಿ ಬಂಗಾರವೆಂದು ತಿಳಿಸಿದ್ದರು. ಅದರಂತೆ ಸಾಲ ಪಡೆದಿದ್ದರು. ಪುನರ್ ಪರಶೀಲಿಸಿದಾಗ ದಂಪತಿ ಅಡವಿಟ್ಟಿರುವುದು ನಕಲಿ ಬಂಗಾರ ಎಂಬುದು ಸಾಬೀತಾಗಿದೆ.
ಈ ಹಿನ್ನೆಲೆ ನಕಲಿ ಬಂಗಾರ ಅಡವಿಟ್ಟು ಸಾಲ ಪಡೆದ ದಂಪತಿ, ಇಬ್ಬರು ಅಪ್ರೈಸರ್‌ಗಳ ವಿರುದ್ಧ ಬ್ಯಾಂಕ್ ವತಿಯಿಂದ ದೂರು ನೀಡಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಬ್ಯಾಂಕ್ ಮತ್ತು ಆರೋಪಿಗಳ ಹೆಸರು ಬಹಿರಂಗಪಡಿಸಿಲ್ಲ. ಪ್ರಕರಣದ ಕುರಿತು ಜನರಿಗೆ ಮಾಹಿತಿ ತಿಳಿಸುವ ಉದ್ದೇಶದಿಂದ ಸುದ್ದಿ ಪ್ರಕಟಿಸಲಾಗಿದೆ.)
ಇದನ್ನೂ ಓದಿ » ತ್ಯಾವರೆಕೊಪ್ಪ ಸಫಾರಿಯ ಹುಲಿ ಅಂಜನಿ ಸಾವು, ಕಾರಣವೇನು?