ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
FATAFAT SHIMOGA NEWS, 16 SEPTEMBER 2024
‘ಈದ್ ಮೆರವಣಿಗೆಗೆ ಅವಕಾಶ ಬೇಡʼ
ಶಿವಮೊಗ್ಗ ಲೈವ್.ಕಾಂ : ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಈ ಬಾರಿ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟವಾಗಿದೆ. ಈಗ ಶಿವಮೊಗ್ಗದಲ್ಲೂ ಅಂತಹ ಘಟನೆಗಳು ನಡೆಯುವ ಆತಂಕವಿದೆ. ಆದ್ದರಿಂದ ಈದ್ ಮೆರವಣಿಗೆಗೆ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ರಾಗಿಗುಡ್ಡದಲ್ಲಿ ಗಲಭೆಯಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ದಿಢೀರ್ ತಿರುಗಿದ ಲಾರಿಯಿಂದ ಅಪಘಾತ
ಶಿವಮೊಗ್ಗ ಲೈವ್.ಕಾಂ : ಚಲಿಸುತ್ತಿದ್ದ ಲಾರಿ ಮುನ್ಸೂಚನೆ ನೀಡದೆ ದಿಢೀರ್ ಬಲಕ್ಕೆ ತಿರುಗಿದ್ದರಿಂದ ಪಕ್ಕದಲ್ಲಿ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿ ಸವಾರ ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಹೊಳಲೂರು – ಹರಮಘಟ್ಟ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಹರಮಘಟ್ಟದ ವೆಂಕಟೇಶ್ (48) ಗಾಯಗೊಂಡಿದ್ದಾರೆ. ಗಾರೆ ಕೆಲಸ ಮುಗಿಸಿಕೊಂಡು ರಾತ್ರಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ವೆಂಟಕೇಶ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೇಔಟ್ ಮುಂದೆ ನಿಲ್ಲಿಸಿದ್ದ ಬೈಕ್ ಕಳವು
ಶಿವಮೊಗ್ಗ ಲೈವ್.ಕಾಂ : ತ್ಯಾವರೆಚಟ್ನಹಳ್ಳಿಯ ಲೇಔಟ್ ಒಂದರ ಆರ್ಚ್ ಮುಂಭಾಗ ನಿಲ್ಲಿಸಿದ್ದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಗೋಂದಿಚಟ್ನಹಳ್ಳಿಯ ರಾಕೇಶ್ ಎಂಬುವವರಿಗೆ ಸೇರಿದ ಬೈಕ್ ಕಳುವಾಗಿದೆ. ರಾಕೇಶ್, ವಡ್ಡರಹಟ್ಟಿಗೆ ತೆರಳಬೇಕಿತ್ತು. ಹಾಗಾಗಿ ಬೈಕ್ ನಿಲ್ಲಿಸಿ ಹೋಗಿದ್ದರು. ಮರಳಿ ಬಂದಾಗ ನಾಪತ್ತೆಯಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಇವು ಸಾಮಾನ್ಯ ಗುಂಡಿಗಳಲ್ಲ, ಬಂದ್ ಆಗಲು PM, CMಗಳೆ ಬರಬೇಕು
LATEST NEWS
- ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

- ಮಾರ್ಚ್ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

- ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು
















