ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 23 NOVEMBER 2023
AYANUR : ಪಂಜಾಬ್‌ಗೆ 180 ಕ್ವಿಂಟಾಲ್ ಶುಂಠಿ ತುಂಬಿಕೊಂಡು ಹೊರಟ ಲಾರಿ ನಿಗದಿತ ಸ್ಥಳ ತಲುಪದೆ ನಾಪತ್ತೆಯಾಗಿದೆ. ಲಾರಿ ಚಾಲಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆಯನೂರಿನ ಶುಂಟಿ ವ್ಯಾಪಾರಿಗೆ ನಷ್ಟವಾಗಿದ್ದು ಕುಂಸಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆಯನೂರು TO ಪಂಜಾಬ್‌ಗೆ ಲಾರಿ
ಸಯ್ಯದ್ ಸಾದಿಕ್ ಎಂಬುವವರು ಕಳೆದ 8 ವರ್ಷದಿಂದ ಸುತ್ತಮುತ್ತಲ ರೈತರಿಂದ ಶುಂಠಿ ಖರೀದಿಸಿ ವ್ಯಾಪಾರ ಮಾಡುತ್ತಿದ್ದಾರೆ. ನ.18ರಂದು ಆಯನೂರಿನಿಂದ 180 ಕ್ವಿಂಟಾಲ್ ಶುಂಠಿಯನ್ನು ಲಾರಿಯಲ್ಲಿ ಪಂಜಾಬ್‌ಗೆ ರವಾನಿಸಿದ್ದರು. ನ.21ರ ರಾತ್ರಿ ಪಂಜಾಬ್‌ನ ಅಮೃತಸರಕ್ಕೆ ಲಾರಿ ತಲುಪಬೇಕಿತ್ತು. ಆದರೆ ನ.21ರ ಬೆಳಗ್ಗೆಯಿಂದ ಲಾರಿ ಚಾಲಕನ ಮೊಬೈಲ್ ಸ್ವಿಚ್ ಆಫ್ ಆಗಿದೆ.
ವಾಟ್ಸಪ್ ಗ್ರೂಪ್‌ನಲ್ಲಿ ಆಘಾತಕಾರಿ ಮೆಸೇಜ್
ಈ ಮಧ್ಯೆ ಮಧ್ಯಪ್ರದೇಶದ ಝಾನ್ಸಿಯಲ್ಲಿ ಕರ್ನಾಟಕದ ಲಾರಿಯೊಂದರಲ್ಲಿ ಶುಂಠಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆ.ಜಿ. 50 ರೂ. ನಂತೆ ಮಾರಾಟ ಮಾಡುತ್ತಿರುವುದಾಗಿ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ ವಾಟ್ಸಪ್ ಗ್ರೂಪ್‌ನಲ್ಲಿ ಮೆಸೇಜ್ ಬಂದಿತ್ತು. ವಿಚಲಿತರಾದ ವರ್ತಕ ಸಯ್ಯದ್ ಸಾದಿಕ್ ಅಮೃತಸರದಲ್ಲಿರುವ ಟ್ರಾನ್ಸ್‌ಪೋರ್ಟ್ ಕಚೇರಿಗೆ ಕರೆ ಮಾಡಿ ವಿಚಾರಿಸಿದ್ದು ಲಾರಿ ತಲುಪಿಲ್ಲ ಎಂದು ತಿಳಿಸಿದ್ದರು.
ಲಾರಿ ಚಾಲಕ ಮೋಹನ್ ಸೇರಿದಂತೆ ಇಬ್ಬರ ವಿರುದ್ಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದಾಜು 13.77 ಲಕ್ಷ ರೂ. ಮೌಲ್ಯದ 180 ಕ್ವಿಂಟಾಲ್ ಶುಂಠಿ ಪತ್ತೆ ಹಚ್ಚಿಕೊಡುವಂತೆ ಸಯ್ಯದ್ ಸದಾಕ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ ಕಾಂಪೌಂಡ್ ವಿಚಾರಕ್ಕೆ ಪ್ರತಿಭಟನೆ, ಪೊಲೀಸರ ಜೊತೆ ಮಾತಿಗೆ ಮಾತು, ಕಾರಣವೇನು?
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















