ಶಿವಮೊಗ್ಗ: ವಿದ್ಯಾನಗರ ಫ್ಲೈಓವರ್‌ನ ಕೆಳಗೆ ನಕಲಿ ಚಿನ್ನದ ನಾಣ್ಯಗಳನ್ನು (Gold Coins) ನೀಡಿ ತೆಲಂಗಾಣ ರಾಜ್ಯದ ವ್ಯಕ್ತಿಯೊಬ್ಬರಿಗೆ ₹4 ಲಕ್ಷ ವಂಚಿಸಲಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಪಸ್ಪುಲಾ ವಂಶಿ ಎಂಬುವವರು ವಂಚನೆಗೊಳಗಾಗಿದ್ದಾರೆ. ಪಸ್ಪುಲಾ ವಂಶಿಗೆ ಉಡುಪಿಯ ಸುರೇಶ್ ಎಂಬಾತನ ಪರಿಚಯವಾಗಿತ್ತು. ಕೆಲವು ತಿಂಗಳ ಹಿಂದೆ ಸುರೇಶ ಕರೆ ಮಾಡಿ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ತಿಳಿಸಿದ್ದ. ಚಿತ್ರದುರ್ಗಕ್ಕೆ ಕರೆಯಿಸಿಕೊಂಡು ಎರಡು ನಾಣ್ಯಗಳನ್ನು ಕೊಟ್ಟು ಕಳುಹಿಸಿದ್ದ. ತಮ್ಮೂರಿಗೆ ಕೊಂಡೊಯ್ದು ಪರೀಕ್ಷಿಸಿದಾಗ ಆ ಎರಡು ನಾಣ್ಯಗಳು ಚಿನ್ನದ್ದು ಎಂದು ಖಚಿತವಾಗಿತ್ತು.
ಅ.16ರಂದು ಪಸ್ಪುಲಾ ವಂಶಿಯನ್ನು ಶಿವಮೊಗ್ಗಕ್ಕೆ ಕರೆಯಿಸಿಕೊಂಡ ಸುರೇಶ್ ಚಿನ್ನದ ನಾಣ್ಯಗಳಿರುವ ಚೀಲವನ್ನು ಹಸ್ತಾಂತರ ಮಾಡಿದ್ದ. ₹4 ಲಕ್ಷ ಹಣ ಪಡೆದು ಗಡಿಬಿಡಿಯಲ್ಲಿ ಸ್ಥಳದಿಂದ ತೆರಳಿದ್ದ. ಪಸ್ಪುಲಾ ವಂಶಿ ತಮ್ಮೂರಿಗೆ ಮರಳಿ ಚಿನ್ನದ ನಾಣ್ಯಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ. ಕುಟುಂಬದವರ ಜೊತೆಗೆ ಚರ್ಚಿಸಿ ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಸ್ಪರ್ಧೆ ವೇಳೆ ಬಸ್‌ಗೆ ಡಿಕ್ಕಿಯಾಗಿ ಹೋರಿ ಸಾವು, ಹೇಗಾಯ್ತು ಘಟನೆ?
Gold Coins
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






