ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 1 JANUARY 2025
ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ವ್ಯಾನಿಟಿ ಬ್ಯಾಗುಗಳಿಂದ ನಗದು, ಚಿನ್ನಾಭರಣ (Gold) ಕಳ್ಳತನ ಪ್ರಕರಣಗಳು ಮುಂದುವರೆದಿವೆ. ಹರಿಹರದಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬಂದಿಳಿದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳುವಾಗಿದೆ.
ತಸ್ನೀಮ್ ಸುಲ್ತಾನಾ ಎಂಬುವವರು ಹರಿಹರದಿಂದ ಶಿವಮೊಗ್ಗಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬಂದಿದ್ದರು. ಬಸ್ ಇಳಿಯುವಾಗ ಜನ ದಟ್ಟಣೆ ಹೆಚ್ಚಿತ್ತು. ಈ ಸಂದರ್ಭ ತಸ್ನೀಮ್ ಸುಲ್ತಾನಾ ಅವರ ವ್ಯಾನಿಟಿ ವ್ಯಾಗ್‌ನಿಂದ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ವ್ಯಾನಿಟಿ ಬ್ಯಾಗ್‌ನಲ್ಲಿದ್ದ 55 ಗ್ರಾಂ ತೂಕದ ಚಿನ್ನದ ಸರ, ಎರಡು ಚಿನ್ನದ ಉಂಗುರ, 7 ಸಾವಿರ ರೂ. ನಗದು, ಎಟಿಎಂ ಕಾರ್ಡ್ ಕಳ್ಳತನವಾಗಿದೆ.
ಒಟ್ಟು 2.24 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಕಾರು, ಬೈಕ್ ಅಪಘಾತದ CCTV ದೃಶ್ಯ ಲಭ್ಯ, ಹೇಗಾಯ್ತು ಘಟನೆ? ಏನೇನೆಲ್ಲ ಆಯ್ತು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422