ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 DECEMBER 2024
ಶಿವಮೊಗ್ಗ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಏಳು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಶಿವಮೊಗ್ಗ ಜೈಲಿನಲ್ಲಿದ್ದ 12ನೇ ಆರೋಪಿ ಲಕ್ಷ್ಮಣ್ ಇವತ್ತು ಬಿಡುಗಡೆಯಾಗಿದ್ದಾನೆ (Released). ಮತ್ತೊಬ್ಬ ಆರೋಪಿಗೆ ಇವತ್ತೂ ಬಿಡುಗಡೆ ಭಾಗ್ಯವಿಲ್ಲವಾಗಿದೆ.
ಜಾಮೀನು ದೊರೆತ ಹಿನ್ನೆಲೆ ನಟ ದರ್ಶನ್ ಕಾರು ಚಾಲಕ ಲಕ್ಷ್ಮಣ್ ಇವತ್ತು ಶಿವಮೊಗ್ಗ ಜೈಲನಿಂದ ಬಿಡುಗಡೆಯಾಗಿದ್ದಾನೆ. ಲಕ್ಷ್ಮಣ್ನನ್ನು ಕರೆದೊಯ್ಯಲು ಕಳನಟ ರಾಜಕುಮಾರ್ ಜೈಲು ಬಳಿ ಆಗಮಿಸಿದ್ದರು. ಜೈಲಿನ ಬಾಗಿಲಿನಿಂದ ಹೊರ ಬರುತ್ತಿದ್ದಂತೆ ಲಕ್ಷ್ಮಣ್ ಓಡೋಡಿ ಹೋಗಿ ಕಾರು ಹತ್ತಿ ಹೊರಟ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಲಕ್ಷ್ಮಣ್ 12ನೇ ಆರೋಪಿಯಾಗಿದ್ದ. ಹತ್ಯೆ ನಡೆದ ಸ್ಥಳದಲ್ಲಿ ಈತ ಇದ್ದ ಮತ್ತು ಮೃತದೇಹವನ್ನು ಎಸೆಯಲು ವ್ಯವಸ್ಥೆ ಮಾಡಿದ್ದ ಎಂಬ ಆರೋಪವಿದೆ.ಓಡೋಡಿ ಹೋಗಿ ಕಾರು ಹತ್ತಿದ ಲಕ್ಷ್ಮಣ್
ಜಗದೀಶ್ಗೆ ಬಿಡುಗಡೆ ಭಾಗ್ಯವಿಲ್ಲ
ಪ್ರಕರಣದ 6ನೇ ಆರೋಪಿ, ಚಿತ್ರದುರ್ಗದ ಆಟೋ ಚಾಲಕ ಜಗದೀಶ್ ಅಲಿಯಾಸ್ ಜಗ್ಗು ಕೂಡ ಶಿವಮೊಗ್ಗ ಜೈಲಿನಲ್ಲಿದ್ದಾನೆ. ಆತನಿಗು ಜಾಮೀನು ಮಂಜೂರಾಗಿದೆ. ಆದರೆ ಶೂರಿಟಿ ಸಿಗದ ಹಿನ್ನೆಲೆ ಜಗದೀಶ್ ಇನ್ನೂ ಜೈಲಿನಲ್ಲೇ ಇದ್ದಾನೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದ ತಂಡದಲ್ಲಿ ಜಗದೀಶ್ ಕೂಡ ಇದ್ದ ಎಂಬ ಆರೋಪವಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ಆರೋಪದ ನಂತರ ಆರೋಪಿಗಳನ್ನು ರಾಜ್ಯದ ವಿವಿಧ ಜೈಲಿಗೆ ವರ್ಗಾಯಿಸಲಾಯಿತು. ನಟ ದರ್ಶನ್ ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಆ.29ರಂದು ಆರೋಪಿಗಳಾದ ಜಗದೀಶ್ ಮತ್ತು ಲಕ್ಷ್ಮಣ್ನನ್ನು ಶಿವಮೊಗ್ಗ ಜೈಲಿಗೆ ರವಾನಿಸಲಾಗಿತ್ತು.ಪರಪ್ಪನ ಅಗ್ರಹಾರದಿಂದ ಶಿವಮೊಗ್ಗಕ್ಕೆ
ಇದನ್ನೂ ಓದಿ » ದಿಢೀರ್ ಕುಸಿದು ಬಿದ್ದ ಅತಿಥಿ ಉಪನ್ಯಾಸಕಿ, ತಕ್ಷಣ ನೆರವಾದ ಡಾ. ಸರ್ಜಿ, ಆಗಿದ್ದೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422