ಶಿವಮೊಗ್ಗದ ಲೈವ್.ಕಾಂ | SHIMOGA NEWS | 30 ಡಿಸೆಂಬರ್ 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಕ್ಷುಲಕ ವಿಚಾರಕ್ಕೆ ಅಣ್ಣ, ತಮ್ಮನ ಮಧ್ಯೆ ಗಲಾಟೆಯಾಗಿದ್ದು, ಒಬ್ಬನ ಕೊಲೆಯಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ.
ಗುರುಪ್ರಸಾದ್ (26) ಮೃತ ವ್ಯಕ್ತಿ. ಬುಧವಾರ ರಾತ್ರಿ ಗುರುಪ್ರಸಾದ್ ತನ್ನ ತಾಯಿಯೊಂದಿಗೆ ಜಗಳಕ್ಕೆ ಇಳಿದಿದ್ದ. ಈ ಸಂದರ್ಭ ಸಹೋದರ ವಿಶ್ವನಾಥ್ ಮಧ್ಯ ಪ್ರವೇಶಿಸಿದ್ದ. ಆಗ ಸಹೋದರರ ಮಧ್ಯೆ ಮಾತಿಗೆ ಮಾತು ಬೆಳೆದು ಗುರುಪ್ರಸಾದ್ ಕೊಲೆಯಾಗಿದೆ.
ಗಲಾಟೆಗೆ ಕಾರಣವೇನು?
ತನಗೆ ಆಟೋ ಒಂದನ್ನು ಕೊಡಿಸುವಂತೆ ಗುರುಪ್ರಸಾದ್ ತನ್ನ ತಾಯಿಯಲ್ಲಿ ಕೇಳಿದ್ದ. ಬುಧವಾರ ರಾತ್ರಿ ಇದೆ ವಿಚಾರಕ್ಕೆ ತಾಯಿಯೊಂದಿಗೆ ಜಗಳ ಆರಂಭಿಸಿದ್ದ. ಆಟೋ ಕೊಡಿಸಬೇಕು, ಇಲ್ಲವಾದಲ್ಲಿ ಆಸ್ತಿಯಲ್ಲಿ ಪಾಲು ನೀಡುವಂತೆ ಒತ್ತಾಯಿಸಿದ. ಈ ಸಂದರ್ಭ ಸಹೋದರ ವಿಶ್ವನಾಥ್ ಮಧ್ಯ ಪ್ರವೇಶಿಸಿದ್ದ.
ತಾನೇ ದುಡಿದು ಆಟೋ ಖರೀದಿಸುವಂತೆ ವಿಶ್ವನಾಥ್ ತನ್ನ ಸಹೋದರ ಗುರುಪ್ರಸಾದ್’ಗೆ ಸಲಹೆ ನೀಡಿದ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ವಿಶ್ವನಾಥ್, ಗಾರೆ ಕೆಲಸಕ್ಕೆ ಬಳಸುವ ಮಟ್ಟಗೋಲನ್ನು ತೆಗೆದುಕೊಂಡು ಗುರುಪ್ರಸಾದನ ತಲೆ ಮತ್ತು ಕಿವಿ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಗುರುಪ್ರಸಾದ್ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






