ಶಿವಮೊಗ್ಗ ಲೈವ್.ಕಾಂ | SHIMOGA | 10 ಡಿಸೆಂಬರ್ 2019
ತೆಲಂಗಾಣದಲ್ಲಿ ಪಶು ವೈದ್ಯೆ ಅತ್ಯಾಚಾರ, ಬರ್ಬರ ಹತ್ಯೆ ಪ್ರಕರಣದ ಬಳಿಕ ಮಹಿಳಾ ಸುರಕ್ಷೆ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಮಧ್ಯೆ ರಾತ್ರಿ ವೇಳೆ ಮಹಿಳೆಯರು ಸುರಕ್ಷತೆಯಿಂದ ಸಂಚರಿಸಲು ಅನುವು ಮಾಡಿಕೊಡಲು ಶಿವಮೊಗ್ಗ ಪೊಲೀಸರು ವಿಭಿನ್ನ ಹೆಜ್ಜೆ ಇರಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಹಿಳೆಯರು ಸುರಕ್ಷಿತೆಯಿಂದ ನಿಗದಿತ ಸ್ಥಳ ತಲುಪಲು ಇನ್ಮುಂದೆ ಪೊಲೀಸರು ನೆರವು ನೀಡಲಿದ್ದಾರೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಪ್ರಕಟಣೆ ಹೊರಡಿಸಿದ್ದು, ತುರ್ತು ಸಂದರ್ಭದಲ್ಲಿ ಮಹಿಳೆಯರು ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.
ರಾತ್ರಿ ಹತ್ತು ಗಂಟೆಯಿಂದ
ರಾತ್ರಿ 10 ಗಂಟೆಯಿಂದೆ ಬೆಳಗ್ಗೆ 6 ಗಂಟೆವರೆಗೆ ಮಹಿಳೆಯರು ನಿರ್ದಿಷ್ಟ ಸ್ಥಳಕ್ಕೆ ತಲುಪಲು ಪೊಲೀಸರು ನೆರವು ನೀಡಲಿದ್ದಾರೆ. ಇನ್ನು ರಾತ್ರಿ ವೇಳೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರೆ ಸ್ಥಳಗಳಲ್ಲಿ ಮಹಿಳೆಯರು ಕಾಯುತ್ತಿರುವಾಗ ಸುರಕ್ಷತೆ ಇಲ್ಲ ಎಂಬ ಸಂಶಯ ಮೂಡಿದರೂ, ಪೊಲೀಸರು ನೆರವಿಗೆ ಬಾರಲಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆ ತಲುಪಿದ ಖಾತ್ರಿ
ತುರ್ತು ಸಂದರ್ಭದಲ್ಲಿ ಮಹಿಳೆಯರು ಪೊಲೀಸರ ನೆರವು ಪಡೆಯಬಹುದು. ರಾತ್ರಿ ವೇಳೆ ಅವರು ಮನೆ ತಲುಪಲು ಪೊಲೀಸರು ಸಹಾಯ ಮಾಡಲಿದ್ದಾರೆ. ಒಂದು ವೇಳೆ ಆಟೋ ಅಥವಾ ಇತರೆ ವಾಹನದಲ್ಲಿ ಮಹಿಳೆಯನ್ನು ಮನೆಗೆ ಕಳುಹಿಸಿಕೊಟ್ಟರೆ ಆ ವಾಹನದ ನಂಬರ್, ಚಾಲಕನ ಸಂಪೂರ್ಣ ವಿವರವನ್ನು ಪೊಲೀಸರು ಪಡೆಯಲಿದ್ದಾರೆ. ಇನ್ನು, ಮಹಿಳೆಯರು ಮನೆ ತಲುಪಿದ ಬಳಿಕ ಅದನ್ನು ಖಾತ್ರಿಪಡಿಸಿಕೊಂಡು ಪೊಲೀಸರು ಕಂಟ್ರೋಲ್ ರೂಂಗೆ ತಿಳಿಸಲಿದ್ದಾರೆ.
ಒಂದೇ ಒಂದು ಫೋನ್ ಕರೆ
ರಾತ್ರಿ ವೇಳೆ ಮನೆ ತಲುಪಲು ಮತ್ತು ತುರ್ತು ಸಂದರ್ಭದಲ್ಲಿ ಪೊಲೀಸರ ನೆರವು ಬೇಕಿದ್ದರೆ, ಮಹಿಳೆಯರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಬಹುದಾಗಿದೆ. 9480803300 ಮತ್ತು 112 ಸಹಾಯವಾಣಿ ನಂಬರ್’ಗೆ ಕರೆ ಮಾಡಿದರೆ, ಪೊಲೀಸ್ ನೆರವು ಸಿಗಲಿದೆ. ಜಿಲ್ಲೆಯಾದ್ಯಂತ ಮಹಿಳೆಯರು ಯಾವುದೇ ಜಾಗದಲ್ಲಿ ಇದ್ದರು ಅಲ್ಲಿಗೆ ಪೊಲೀಸರು ತಲುಪಿ, ನೆರವು ನೀಡಲಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Shimoga takes a special initiative for women safety during Night. Police to look after safety of women from 10 Am to 6 Am says Shimoga SP Shantharaju.
ಒಳ್ಳೆಯ ಆಲೋಚನೆ …