ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 14 NOVEMBER 2020
ಹಬ್ಬದ ಸಂದರ್ಭ ಶಿವಮೊಗ್ಗ ಸಿಟಿಯಲ್ಲಿ ಪೊಲೀಸರು ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಹೆಚ್ಚು ಜನ ಸೇರುವ ಕಡೆಯಲ್ಲಿ ಮೈಕ್ ಹಿಡಿದು ಎಚ್ಚರಿಕೆಯ ಸಂದೇಶ ಸಾರುತ್ತಿದ್ದಾರೆ.
‘ಇದು ಶಿವಮೊಗ್ಗ ಪೊಲೀಸ್ ಪ್ರಕಟಣೆ’
ಹಬ್ಬದ ಖರೀದಿಯಲ್ಲಿ ತಲ್ಲೀನರಾದವರಲ್ಲಿ ಜಾಗೃತಿ ಮೂಡಿಸಲು, ಪೊಲೀಸರು ಮೈಕ್ ಹೆಗಲಿಗೇರಿಸಿಕೊಂಡು ನಗರದಾದ್ಯಂತ ಸಂಚರಿಸುತ್ತಿದ್ದಾರೆ. ಹೆಚ್ಚು ಜನರು ಸೇರಿರುವ ಕಡೆಯಲ್ಲಿ ಮೈಕ್ ಹಿಡಿದು, ‘ಇದು ಶಿವಮೊಗ್ಗ ಜಿಲ್ಲಾ ಪೊಲೀಸ್ ಪ್ರಕಟಣೆ’ ಅಂತಾ ಸಾರ್ವಜನಿಕರ ಗಮನ ಸೆಳೆದು, ಮಾಹಿತಿ ನೀಡುತ್ತಿದ್ದಾರೆ.
VIDEO REPORT
ಪೊಲೀಸರ ಸಂದೇಶವೇನು?
- ದೀಪಾವಳಿ, ಲಕ್ಷ್ಮೀ ಪೂಜೆ ಅಂತಾ ಚಿನ್ನಾಭರಣ ಹಾಕಿಕೊಂಡು ಓಡಾಡುವಾಗ ಎಚ್ಚರ. ಇದೆ ಸಮಯಕ್ಕೆ ಹೊಂಚು ಹಾಕುವ ಸರಗಳ್ಳರು ಅಮೂಲ್ಯ ಒಡವೆಗಳನ್ನು ಕದ್ದೊಯ್ಯಬಹುದು.
- ಮಾರುಕಟ್ಟೆಯಲ್ಲಿ ಖರೀದಿ ವೇಳೆ ಮೊಬೈಲ್, ಪರ್ಸ್ ಬಗ್ಗೆ ಗಮನ ವಹಿಸಬೇಕು. ಸ್ವಲ್ಪ ಯಾಮಾರಿದರೂ ಕಳ್ಳರು ಕೈಚಳಕ ತೋರಿಸುವ ಸಾದ್ಯತೆ ಇದೆ.
- ಕಳ್ಳತನ ಅಥವಾ ಕಳ್ಳತನದ ಪ್ರಯತ್ನವಾದರೆ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಬೇಕು.
- ಎಲ್ಲೆಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ?
ಶಿವಮೊಗ್ಗ ನಗರದ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಜಾಗೃತಿ ಸಂದೇಶ ಸಾರುತ್ತಿದ್ದಾರೆ. ಠಾಣೆಗಳ ವ್ಯಾಪ್ತಿಯಲ್ಲಿರುವ ಪ್ರಮುಖ ಸರ್ಕಲ್ಗಳು, ಮಾರುಕಟ್ಟೆ ಪ್ರದೇಶಗಳಲ್ಲಿ ಪೊಲೀಸರು ಹ್ಯಾಂಡ್ ಹೆಲ್ಡ್ ಮೈಕ್ ಹಿಡಿದುಕೊಂಡು ಜಾಗೃತಿ ಸಂದೇಶಗಳನ್ನು ತಿಳಿಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422