| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
SHIVAMOGGA LIVE NEWS, 1 JANUARY 2025
ಶಿವಮೊಗ್ಗ : ಗುತ್ತಿಗೆದಾರರೊಬ್ಬರಿಗೆ ಹಣ ಮಂಜೂರು ಮಾಡಲು 1.20 ಲಕ್ಷ ರೂ. ಲಂಚ ಪಡೆಯುತ್ತಿದ್ದ ಅಧಿಕಾರಿಯೊಬ್ಬರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ (RAID) ನಡೆಸಿದ್ದಾರೆ. ಲಂಚದ ಹಣವನ್ನು ವಶಕ್ಕೆ ಪಡೆದು, ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಬಿಲ್ ಮಂಜೂರು ಮಾಡಲು ಲಂಚ
ಭದ್ರಾವತಿ ತಾಲೂಕು ಗೋಂದಿಯ ಭದ್ರಾ ಬಲದಂಡೆ ನಾಲೆಯ ಸಿಲ್ಟ್ ತೆಗೆಯುವ ಕಾಮಗಾರಿಯು 2024ರ ಜನವರಿಯಲ್ಲಿ ಪೂರ್ಣಗೊಂಡಿತ್ತು. ಆದರೆ ಟೆಂಡರ್ ಹಣ 9.16 ಲಕ್ಷ ರೂ. ಗುತ್ತಿಗೆದಾರರಿಗೆ ಮಂಜೂರಾಗಿರಲಿಲ್ಲ. ಹಾಗಾಗಿ ಗುತ್ತಿಗೆದಾರ ವಿ.ರವಿ ಹಲವು ಬಾರಿ ಹಣ ಮಂಜೂರಾತಿಗಾಗಿ ಮನವಿ ಮಾಡಿದ್ದರು. ಈಚೆಗೆ ನೀರಾವರಿ ನಿಗಮದ ಸೆಕ್ಷನ್ ಆಫೀಸರ್ ಕೊಟ್ರಪ್ಪ ಬಿಲ್ ಮಂಜೂರಾಗಬೇಕಿದ್ದರೆ 1.20 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
![]()
ಲೋಕಾಯುಕ್ತಕ್ಕೆ ದೂರು ನೀಡಿದ ಗುತ್ತಿಗೆದಾರ
ಸೆಕ್ಷನ್ ಆಫೀಸರ್ ಕೊಟ್ರಪ್ಪ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಗುತ್ತಿಗೆದಾರ ರವಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇವತ್ತು ಬಿಆರ್‌ಪಿ ವ್ಯಾಪ್ತಿಯ ಡಿ.ಬಿ.ಹಳ್ಳಿಯ ಕಚೇರಿಯಲ್ಲಿ ಗುತ್ತಿಗೆದಾರ ರವಿ ಅವರಿಂದ 1.20 ಲಕ್ಷ ರೂ. ಲಂಚದ ಹಣ ಪಡೆಯುತ್ತಿದ್ದ ಸಂದರ್ಭ ಸೆಕ್ಷನ್ ಆಫೀಸರ್ ಕೊಟ್ರಪ್ಪ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಕಚೇರಿಯ ಲೈಟ್ ಮಜದೂರ್ ಅರವಿಂದ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
![]()
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌದರಿ ಎಂ.ಹೆಚ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಎಸ್ ಸುರೇಶ್, ಪ್ರಕಾಶ್, ಸಿಬ್ಬಂದಿ ಯೋಗೇಶ್, ಟೀಕಪ್ಪ, ಸುರೇಂದ್ರ, ಮಂಜುನಾಥ್, ಪ್ರಶಾಂತ್ ಕುಮಾರ್, ಚೆನ್ನೇಶ್, ಅರುಣ್ ಕುಮಾರ್, ದೇವರಾಜ್, ಪ್ರಕಾಶ್, ಆದರ್ಶ, ಪುಟ್ಟಮ್ಮ.ಎನ್, ಅಂಜಲಿ, ಗಂಗಾಧರ, ಪ್ರದೀಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ » ಹರಿಹರದಿಂದ ಶಿವಮೊಗ್ಗಕ್ಕೆ ಬಂದು ಬಸ್ಸಿಳಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಬಿಸ್ಕತ್ತು, ಕೇಕ್, ಪಿಜ್ಜಾ, ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ, ಯಾರೆಲ್ಲ ಭಾಗವಹಿಸಬಹುದು?
- ಕ್ರೆಡಿಟ್ ಕಾರ್ಡ್ನಿಂದ ಹಣ ಕಡಿತ, ಎಸ್ಬಿಐಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ
- ಶಿಕಾರಿಪುರದಲ್ಲಿ ಎತ್ತಿನಗಾಡಿ ಏರಿ ಸರ್ಕಾರದ ವಿರುದ್ಧ ವಿಜಯೇಂದ್ರ ಗುಟುರು, ಏನೇನು ಹೇಳಿದರು?
- ಶಿವಮೊಗ್ಗ ಸಿಟಿಯಲ್ಲಿ ಕಾಲೇಜು ಬಸ್ ಅಡ್ಡಗಟ್ಟಿದ ಅಪರಿಚಿತರು, ಮುಂದೇನಾಯ್ತು?
- BREAKING NEWS – ಶಿವಮೊಗ್ಗದ ಪ್ರಯಾಣಿಕರಿಗು ತಟ್ಟಿದ ಇಂಡಿಗೋ ರದ್ದು ಬಿಸಿ
- BREAKING NEWS – ಶಿವಮೊಗ್ಗ ಜಿಲ್ಲಾಧಿಕಾರಿ ಕಾರು ಜಪ್ತಿಗೆ ಕೋರ್ಟ್ ಆದೇಶ, ಯಾಕೆ?
- ಶಿವಮೊಗ್ಗದಲ್ಲಿ ಬಸ್ ಹತ್ತಿ ಆಧಾರ್ ಕಾರ್ಡ್ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?
- ಕೋಟೆ ರಸ್ತೆಯಲ್ಲಿ ಬ್ರಹ್ಮರಥೋತ್ಸವ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ, ಏನೇನೆಲ್ಲ ಪೂಜೆ ನೆರವೇರಿತು?
![]()