ಶಿವಮೊಗ್ಗ ಜೈಲು ಸೇರಿದ ಮೂರೇ ದಿನಕ್ಕೆ ವಿಚಾರಣಾಧೀನ ಕೈದಿ ಸಾವು, ಏನಿದು ಕೇಸ್‌?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ವಿಚಾರಣಾಧೀನ ಕೈದಿಯಾಗಿ (Prisoner) ಶಿವಮೊಗ್ಗ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಮೂರೇ ದಿನಕ್ಕೆ ಮೃತಪಟ್ಟಿದ್ದಾನೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಇಂದು ಬಳಗ್ಗೆ ಆತ ಸಾವನ್ನಪ್ಪಿದ್ದಾನೆ ಎಂದು ಕಾರಾಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಟಿಪ್ಪುನಗರದ ನಿವಾಸಿ ಮನ್ಸೂರ್‌ (43) ಮೃತ ವಿಚಾರಣಾಧೀನ ಕೈದಿ. ಸೆ.15ರಂದು ಮನ್ಸೂರ್‌ ಶಿವಮೊಗ್ಗ ಜೈಲು ಸೇರಿದ್ದ. ಅನಾರೋಗ್ಯದ ಹಿನ್ನೆಲೆ ಸೆ.17ರ ಮಧ್ಯರಾತ್ರಿ ಈತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

ತಂದೆ ಎದೆಗೆ ಕತ್ತರಿ ಚುಚ್ಚಿದ್ದ

ಸೆ.14ರಂದು ಮನ್ಸೂರ್‌ ತನ್ನ ತಂದೆಯ ಜೊತೆಗೆ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಗಲಾಟೆ ಮಾಡಿದ್ದ. ಕತ್ತರಿಯಿಂದ ತಂದೆಯ ಎದೆ, ಕುತ್ತಿಗೆ ಸೇರಿದಂತೆ ಹಲವೆಡೆ ಮಾರಣಾಂತಿಕವಾಗಿ ಚುಚ್ಚಿದ್ದ. ಈ ಹಿನ್ನೆಲೆ ಶಿವಮೊಗ್ಗದ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಧಿಸಿದ್ದ ಪೊಲೀಸರು ಶಿವಮೊಗ್ಗ ಜೈಲಿಗೆ ರವಾನಿಸಿದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮೀಸಲಾತಿಯ ಶವಯಾತ್ರೆ, ಶಿವಮೂರ್ತಿ ಸರ್ಕಲ್‌ನಲ್ಲಿ ಟ್ರ್ಯಾಕ್ಟರ್‌ ಅಡ್ಡ ನಿಲ್ಲಿಸಿ ರಸ್ತೆ ತಡೆ

JNNCE-Admission-Advt-scaled

Shimoga jail Prisoner succumbed 

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment