ಶಿವಮೊಗ್ಗದ ಶಿಕ್ಷಕಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು ಮೋಸ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಹೆಚ್ಚುವರಿ ಅದಾಯ, ಅಧಿಕ ಲಾಭದ ಆಮಿಷವೊಡ್ಡಿ ಸೈಬರ್‌ ವಂಚಕರು ನಿತ್ಯ ಹಲವರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಹೊಟೇಲ್‌ಗಳಿಗೆ ರಿವ್ಯು (Hotel Review) ಬರೆದು ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಗೆ ₹11.35 ಲಕ್ಷ ವಂಚಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಗೆ ವಾಟ್ಸಪ್‌ಗೆ ಹೊಟೇಲ್‌ ರಿವ್ಯು ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಲಿಂಕ್‌ ಜೊತೆ ಅಪರಿಚತ ನಂಬರ್‌ನಿಂದ ಮೆಸೇಜ್‌ ಬಂದಿತ್ತು. ಲಿಂಕ್‌ ಕ್ಲಿಕ್‌ ಮಾಡಿದಾಗ ಟೆಲಿಗ್ರಾಂ ಆಪ್‌ನಲ್ಲಿ ಗ್ರೂಪ್‌ ಒಂದಕ್ಕೆ ಜಾಯಿನ್‌ ಮಾಡಲಾಯಿತು. ಹಣ ಕಟ್ಟಿ ರಿವ್ಯು ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಶಿಕ್ಷಕಿಗೆ ನಂಬಿಸಲಾಯಿತು.

ಇದನ್ನೂ ಓದಿ » ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಜೈಲು, ಈತ ಮಾಡಿದ ಅಪರಾಧವೇನು?

ಗ್ರೂಪ್‌ನಲ್ಲಿ ತಿಳಿಸಿದಂತೆ ಶಿಕ್ಷಕಿ ಹಂತ ಹಂತವಾಗಿ ₹11.35 ಲಕ್ಷ ಹಣ ಕಟ್ಟಿ ರಿವ್ಯು ನೀಡಿದ್ದರು. ತಮ್ಮ ಲಾಭಾಂಶದ ಹಣ ಡ್ರಾ ಮಾಡಲು ಹೋದಾಗ ₹6 ಲಕ್ಷ ಹಣ ಕಟ್ಟಬೇಕು. ಇದಕ್ಕೆ ಒಂದು ದಿನದ ಕಾಲವಕಾಶವಿರಲಿದೆ ಎಂದು ಗ್ರೂಪ್‌ನಲ್ಲಿ ತಿಳಿಸಲಾಯಿತು. ಆಗ ವಂಚನೆಗೊಳಗಾಗಿರುವುದು ಮಹಿಳೆಗೆ ಅರಿವಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

JNNCE-Admission-Advt-scaled

Hotel Review

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment