ಬೆಳ್ಳಂಬೆಳಗ್ಗೆ ಟೀ ಕುಡಿದು ಹತ್ತೇ ನಿಮಿಷದಲ್ಲಿ ವಾಪಾಸಾದ ಗಾರೆ ಕೆಲಸಗಾರನಿಗೆ ಕಾದಿತ್ತು ಆಘಾತ

Published On : ಮೇ 30, 2024

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 30 MAY 2024

SHIMOGA : ಟೀ ಕುಡಿದು ಹಿಂತಿರುಗುವಷ್ಟರಲ್ಲಿ ಖಾಸಗಿ ಬಸ್‌ ನಿಲ್ದಾಣದ (Bus Stand) ಒಳಗೆ ನಿಲ್ಲಿಸಿದ್ದ ಟಿವಿಎಸ್‌ ಎಕ್ಸ್‌ಎಲ್‌ ಕಳ್ಳತನವಾಗಿದೆ. ಬೊಮ್ಮನಕಟ್ಟೆಯ ಮಂಜುನಾಥ ಬೆಳಗ್ಗೆ 5 ಗಂಟೆ ಹೊತ್ತಿಗೆ ಗಾರೆ ಕೆಲಸಕ್ಕೆ ತೆರಳುತ್ತಿದ್ದರು. ಟೀ ಕುಡಿಯಲು ಖಾಸಗಿ ಬಸ್‌ ನಿಲ್ದಾಣದ ಒಳಗೆ ಟಿವಿಎಸ್‌ ಎಕ್ಸ್‌ಎಲ್‌ ನಿಲ್ಲಿಸಿ ಹೋಗಿದ್ದರು. ಹತ್ತು ನಿಮಿಷದ ಬಳಿಕ ಮರಳಿದಾಗ ಟಿವಿಎಸ್‌ ಎಕ್ಸ್‌ಎಲ್‌ ಇರಲಿಲ್ಲ. ಎಲ್ಲೆಡೆ ಹುಡುಕಿದ ಮಂಜುನಾಥ ಬಳಿಕ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ, ಲಂಚ ಪಡೆಯುತ್ತಿದ್ದ ಅಧಿಕಾರಿ ಅರೆಸ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮೇ 30, 2024

Leave a Comment