ದಿನ ಭವಿಷ್ಯ | 27 ಆಗಸ್ಟ್‌ 2024 | ಈ ದಿನ ಯಾವ್ಯಾವ ರಾಶಿಯವರಿಗೆ ಹೇಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA | 27 AUGUST 2024

ಮೇಷ : ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ. ಚತುರ್ಥದ ದೋಷ ನೆಮ್ಮದಿ ಹಾಳು ಮಾಡಬಹುದು. ವಿದ್ಯೆಗೆ ಪ್ರಶಸ್ತ ದಿನ. ಆರೋಗ್ಯದ ಬಗ್ಗೆ ಎಚ್ಚರ. ಲಕ್ಷ್ಮೀನೃಸಿಂಹ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 1-5-8-9

ವೃಷಭ : ಇಂದು ತೊಂದರೆ ದೂರವಾಗುವ ದಿನ. ಯತ್ನ ಕಾರ್ಯದಲ್ಲಿ ಸಫಲತೆ ತಡವಾಗಲಿದೆ. ಮಕ್ಕಳಿಗೆ ತೊಂದರೆಯಾದೀತು. ಮಿತ್ರರ ಸಹವಾಸದಿಂದ ನೆಮ್ಮದಿ ಬರುತ್ತದೆ. ದೇವಿಗೆ ತುಪ್ಪದ ದೀಪ ಹಚ್ಚಿ. ಶುಭ ಸಂಖ್ಯೆ : 2-7-10-11

ಮಿಥುನ : ಯೋಚಿಸಿ ಮಾತನಾಡಿ. ಆರ್ಥಿಕ ನಷ್ಟವಾಗಬಹುದು. ಭಾಗ್ಯದ ಮಿತ್ರ ತಡವಾದರೂ ಉತ್ತಮ ಫಲ ನೀಡುತ್ತಾನೆ. ಕೆಲಸದಲ್ಲಿ ತೊಂದರೆ. ಸುಪ್ರಭಾತದ ಆಲೈಸುವಿಕೆ ಮನಸ್ಸಿಗೆ  ನೆಮ್ಮದಿ. ಶುಭ ಸಂಖ್ಯೆ : 5-6-10

ಕರ್ಕ : ಮಾತೇ ಮುತ್ತು ಮಾತೇ ಮೃತ್ಯು  ಗಾದೆಯಂತೆ ನಿಮ್ಮ ಈದಿನ. ಹಾಗಾಗಿ ಯೋಚಿಸಿ. ನಿರ್ಧರಿಸಿ ಕೆಲಸ ಮಾಡಿ. ನವಮದ ರಾಹು ತೊಂದರೆ ಮಾಡುವ ಯೋಚನೆಯಲ್ಲಿ ಇದ್ದಾನೆ. ಭಾಗ್ಯೋದಯ ಅಲ್ಪ ಮಾತ್ರ ನವಗ್ರಹ ಪೂಜೆ ಮಾಡಿಸಿ. ಶುಭ ಸಂಖ್ಯೆ : 4-5-1

ಸಿಂಹ : ನಿಮ್ಮ ಗತ್ತು ಹಾಗೇ ಇರಲಿದೆ. ಆದರೆ ಹಣದ ವಿಚಾರಕ್ಕೆ ಹಿಂದೆ ಸರಿಯುವಿರಿ. ಪತ್ನಿಯಿಂದ ಕಿರಿಕಿರಿ. ಉದ್ಯೋಗ ಉತ್ತಮ. ಅಧಿಕ ವ್ಯಯ. ಗಣೇಶನನ್ನ ಸ್ತುತಿಸಿ. ಅನುಕೂಲಕರ. ಶುಭ ಸಂಖ್ಯೆ : 5-6-9-11

ಕನ್ಯಾ : ಈದಿನ ಸರ್ಪನ ಆರಾಧನೆ ಬಹಳ ಮುಖ್ಯ. ಮುಟ್ಟಿದ ಕೆಲಸ ಮುಗಿಯುವುದಿಲ್ಲ. ಮನೋಕ್ಲೇಶದ ಜೊತೆ ಆರೋಗ್ಯ ಸಮಸ್ಯೆ. ಸಪ್ತಶತಿ ಪಾರಾಯಣ ಮಾಡಿಸಿ..ಶುಭ ಸಂಖ್ಯೆ : 7-10-11-03

SANDESH-UPADHYA-DINA-BHAVISHYA-SHIMOGA

ತುಲಾ : ಪಂಚಮದ ಶನಿ ನಿಧಾನವಾಗಿ ಶುಭಕರನಾಗಿದ್ದಾನೆ. ಆದರೂ ಕಿರಿಕಿರಿ. ಅಧಿಕ ವ್ಯಯ. ವೃಥಾ ತಿರುಗಾಟ. ನಾಗನಿಗೆ ತನು ಸೇವೆ ಮಾಡಿಸಿ. ಶುಭ ಸಂಖ್ಯೆ : 8-9-4

ವೃಶ್ಚಿಕ : ನಾಲ್ಕರ ಶನಿ ಐದರ ರಾಹು ನವಮದ ಬುಧ ಬಹಳ ಉತ್ತಮ ಫಲ ನಿರೀಕ್ಷಿಸಲಾರಿರಿ. ಹಿಂದಿನ ಖುಷಿ ಸ್ವಲ್ಪ ಕಡಿಮೆ ಆದೀತು. ಕೆಲಸದಲ್ಲಿ ಉತ್ತಮ ಫಲ. ಅಂದುಕೊಂಡ ಕೆಲಸದಲ್ಲಿ ಬೇಸರ. ಆದಿತ್ಯ ಹೃದಯ ಓದಿ. ಶುಭ ಸಂಖ್ಯೆ : 8-1-5

ಧನು : ನಿಮ್ಮ ಅದೃಷ್ಟ ಈದಿನ ಕೈ ಹಿಡಿಯಲಿದೆ. ನಿಮ್ಮ ಭಾಗ್ಯದ ರವಿ ಅನುಗ್ರಹ ಮಾಡಿದ್ದಾನೆ. ನಿಮ್ಮ ಕೆಲಸವೇ ನಿಮಗೆ ತೊಂದರೆ. ವೆಂಕಟೇಶನಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಆರಾಧಿಸಿ. ಶುಭ ಸಂಖ್ಯೆ : 9-12-04

ಮಕರ : ಹಣ ಬಂದರೂ ವ್ಯಯ ಹೆಚ್ಚು. ಅಣ್ಣ ತಮ್ಮಂದಿರಿಗೆ ಸಹಾಯ ಮಾಡುವ ದಿನ. ಮನೆಯಲ್ಲಿ ವಿರಸ. ಅನ್ಯ ವಿಷಯ ಇಂದು ಗೌಪ್ಯವಾಗಿಡಿ. ನಾಗನ ಪೂಜೆ ಮಾಡಿಸಿ. ಶುಭ ಸಂಖ್ಯೆ: 10-11-02

ಕುಂಭ : ರಾಶಿಯ ಶನಿ ತೊಂದರೆ ಇಲ್ಲದಿದ್ದರೂ ಹೆಚ್ಚು ಖುಷಿ ನೀಡಲಾರ. ಸಾಡೇಸಾತಿಯಿಂದ ತೊಂದರೆ ಇಲ್ಲ. ಪತ್ನಿ ಕಷ್ಟಕ್ಕೆ ಸಹಾಯ ಮಾಡುತ್ತಾಳೆ. ತಾಳ್ಮೆ ಬೇಕು ನಿಮಗೆ. ಕೆಲಸದ ಬಗ್ಗೆ ಗಮನ ಅಗತ್ಯ. ಶುಭ ಸಂಖ್ಯೆ : 11-03-06

ಮೀನ : ಸಿಟ್ಟು ಕಡಿಮೆ ಮಾಡಿಕೊಳ್ಳಿ. ಅದೃಷ್ಟದ ಬಾಗಿಲು ಹಾಕಬಹುದು. ನಿಮ್ಮ ಬುದ್ಧಿ ನಿಮಗೆ ವ್ಯಯ ಮಾಡಿಸಲಿದ್ದಾನೆ. ಪಂಚಮದ ಬುಧ ಮನಸ್ಸಿಗೆ ನೋವು. ರಾಯರನ್ನ ಆರಾಧಿಸಿ. ಶುಭ ಸಂಖ್ಯೆ : 12-1-8-5

ಇದನ್ನೂ ಓದಿ ⇒ ಟೋಲ್‌ ವಿರುದ್ಧ ಗರಂ, ಶಿವಮೊಗ್ಗದಲ್ಲಿ ಹೋರಾಟಕ್ಕೆ ದಿನಾಂಕ ಫಿಕ್ಸ್‌, ಸಮಿತಿ ಆರೋಪಗಳೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment