ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019
ಖಗೋಳ ಕುತೂಹಲವನ್ನು ಮಕ್ಕಳಿಗೆ ತೋರಿಸಲು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಶಾಲೆಗಳಲ್ಲಿ ಟೆಲಿಸ್ಕೋಪ್, ವಿಶೇಷ ಮಾದರಿಯ ಕನ್ನಡಕ ಒದಗಿಸಲಾಗಿತ್ತು. ಈ ನಡುವೆ ಶಿವಮೊಗ್ಗದ ನ್ಯೂಸ್ ಫೋಟೊಗ್ರಾಫರ್ ಒಬ್ಬರು, ಸರ್ಕಾರಿ ಶಾಲೆ ಮಕ್ಕಳಿಗೆ ವಿಶೇಷ ವ್ಯವಸ್ಥೆ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರ್ಕಾರಿ ಶಾಲೆ ಮಕ್ಕಳಿಗೆ ಗ್ರಹಣ ದರ್ಶನ
ಗ್ರಹಣ ಕುರಿತು ಸರ್ಕಾರಿ ಶಾಲೆ ಮಕ್ಕಳಲ್ಲಿರುವ ಕುತೂಹಲ ತಣಿಸಿ, ಜಾಗೃತಿ ಮೂಡಿಸಲು ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ವಿಭಿನ್ನ ಪ್ರಯತ್ನ ಮಾಡಿದರು. ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಇರುವ ಅಮೀರ್ ಅಹಮ್ಮದ್ ಕಾಲೋನಿಯ ಸರ್ಕಾರಿ ಶಾಲೆ ಮಕ್ಕಳಿಗೆ ಕೆಲವು ಹೊತ್ತು ಗ್ರಹಣ ತೋರಿಸಿದರು. ಗ್ರಹಣದ ಹಂತಗಳನ್ನು ಕಂಡ ಮಕ್ಕಳು ಸಂತಸಪಟ್ಟರು.
Our news Photographer Nandan from Shivamogga was on duty to click pic of solar eclipse. He is showing eclipse to kids from Govt school@NewIndianXpress pic.twitter.com/JIZbOKvznL
— TNIE Karnataka (@XpressBengaluru) December 26, 2019
‘ಮಕ್ಕಳ ಕಣ್ಣಿಗೆ ಹಾನಿ ಆಗದ ಹಾಗೆ, ಕ್ಯಾಮರಾ ಲೆನ್ಸ್ ಮೇಲೆ ಎಕ್ಸ್’ರೇ ಶೀಟ್ ಇಟ್ಟಿದ್ದೆ. ಕ್ಯಾಮರಾದ ಎಲ್’ಸಿಡಿ ಮೂಲಕ ಗ್ರಹಣ ನೋಡುವಂತೆ ವ್ಯವಸ್ಥೆ ಮಾಡಿದ್ದೆ. ಮಕ್ಕಳು ಬಹಳ ಖುಷಿಯಿಂದ ಗ್ರಹಣ ನೋಡಿದರು’ ಅನ್ನುತ್ತಾರೆ ಶಿವಮೊಗ್ಗ ನಂದನ್. ಕೆಲವು ನಿಮಿಷ ಮಾತ್ರ ಗ್ರಹಣ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಚ್ಚುಗೆ ವ್ಯಕ್ತವಾಗಿದೆ.
ಎನ್ಇಎಸ್ ಆವರಣದಲ್ಲಿ ಟೆಲಿಸ್ಕೋಪ್
ಶಿವಮೊಗ್ಗ ನಗರದ ಎನ್ಇಎಸ್ ಕಾಲೇಜು ಆವರಣದಲ್ಲಿ ವಿಜ್ಞಾನ ಪರಿಷತ್ ವತಿಯಿಂದ ಗ್ರಹಣ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಟೆಲಿಸ್ಕೋಪ್ ಮತ್ತು ಗ್ರಹಣ ವೀಕ್ಷಣೆಗೆ ಸೌರ ಕನ್ನಡಕ ಇತ್ತು. ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಗ್ರಹಣವನ್ನು ಕಣ್ತುಂಬಿಕೊಂಡರು.
‘ಡಿಫರೆಂಟ್ ಮಾಡೆಲ್’ನಲ್ಲಿ ಗ್ರಹಣ ವೀಕ್ಷಣೆ
ಶಿವಮೊಗ್ಗದ ಸಾಂದೀಪಿನಿ ಶಾಲೆಯಲ್ಲಿ ಡಿಫರೆಂಟ್ ಮಾಡೆಲ್ ಸಿದ್ಧಪಡಿಸಿ ಮಕ್ಕಳಿಗೆ ಗ್ರಹಣದ ಹಂತಗಳನ್ನು ಮಕ್ಕಳಿಗೆ ತಿಳಿಸಲಾಯಿತು. ವಿಜ್ಞಾನ ಶಿಕ್ಷಕ ಸುಧೀಂದ್ರ ಅವರು ವಿಭಿನ್ನವಾದ ಮಾಡೆಲ್ ಸಿದ್ಧಪಡಿಸಿದ್ದರು. ಟೆಲಿಸ್ಕೋಪ್ ಮಾದರಿಯಲ್ಲಿದ್ದ ಮಾಡೆಲ್ ಮೂಲಕ ಗೋಡೆ ಮೇಲೆ ಇರಿಸಿದ್ದ ಬಿಳಿ ಹಾಳೆ ಮೇಲೆ ಗ್ರಹಣದ ಪ್ರತಿಫಲ ಕಾಣುವಂತೆ ಮಾಡಲಾಗಿತ್ತು. ಶಿಕ್ಷಕರು, ಸಿಬ್ಬಂದಿಗಳು ಮತ್ತು ಮಕ್ಕಳು ಗ್ರಹಣವನ್ನು ವೀಕ್ಷಿಸಿದರು. ಅಲ್ಲದೆ ಸೌರ ಕನ್ನಡಕವನ್ನು ಬಳಸಿ ಮಕ್ಕಳಿಗೆ ಗ್ರಹಣ ತೋರಿಸಲಾಯಿತು.




ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]