ಶಿವಮೊಗ್ಗ ಲೈವ್.ಕಾಂ | SHIMOGA | 8 ಅಕ್ಟೋಬರ್ 2019
ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊರಬೇಕಿರುವ ಸಾಗರ್ ಆನೆಗೆ ಕೊನೆ ಕ್ಷಣದಲ್ಲಿ ಆರೋಗ್ಯ ಕೈಕೊಟ್ಟಿದೆ. ಕೂಡಲೆ ವೈದ್ಯರು ಚಿಕಿತ್ಸೆ ನೀಡಿದ್ದು, ಸದ್ಯ ಗ್ಲೂಕೋಸ್ ಹಾಕಲಾಗಿದೆ.
ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ದಸರಾ ಜಂಬೂ ಸವಾರಿಗೆ ಆಗಮಿಸಿರುವ ಆನೆಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಜಂಬೂ ಸವಾರಿಗೆ ಸಿದ್ಧತೆ ನಡೆಯುತ್ತಿತ್ತು. ಈ ವೇಳೆ ಸಾಗರ್ ಆನೆಯಲ್ಲಿ ಭೇದಿ ಕಾಣಿಸಿಕೊಂಡಿದೆ. ಸ್ಥಳದಲ್ಲೆ ಇದ್ದ ಡಾ.ವಿನಯ್ ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಸಾಗರ್ ಆನೆ ಚೇತರಿಸಿಕೊಳ್ಳುತ್ತಿದ್ದು, ಅಂಬಾರಿ ಹೊರಲಿದೆ ಎಂದು ತಿಳಿಸಿದ್ದಾರೆ. ಎರಡು ವರ್ಷದ ಹಿಂದೆ ಕೊನೆ ಕ್ಷಣದಲ್ಲಿ ಸಾಗರ್ ಆನೆಯ ಆರೋಗ್ಯ ಕೈಕೊಟ್ಟಿತ್ತು. ಹಾಗಾಗಿ ಅಂಬಾರಿಯನ್ನು ಲಾರಿಯಲ್ಲಿ ಮೆರವಣಿಗೆ ಮಾಡಲಾಗಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
