ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
Published On: 11 October 2025
ಫಟಾಫಟ್ ನ್ಯೂಸ್: ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳ ಐದು ಫಟಾಫಟ್ ಸುದ್ದಿ ಅಪ್‌ಡೇಟ್ ಇಲ್ಲಿದೆ (Fatafat).
ಬಿಜೆಪಿ, ಸಂಸದರು, ಶಾಸಕರ ಬಣ್ಣ ಬಯಲು
ಶಿಕಾರಿಪುರ: ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಗುರುವಾರ ನಡೆಸಿದ ಬಂದ್‌ಗೆ ಜನರು ಬೇಷರತ್ತಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಸಂಸದ ಬಿ.ವೈ.ರಾಘವೇಂದ್ರ ಅವರು ‘ಸರ್ಕಾರ ಟೋಲ್ ತೆರವುಗೊಳಿಸದಿದ್ದರೆ ಜನತೆಯೇ ಕಿತ್ತುಹಾಕಲಿದ್ದಾರೆ’ ಎಂದು ಹೋರಾಟಕ್ಕೆ ಪ್ರೇರಣೆ ನೀಡಿದ್ದರು. ಆದರೆ ಹೋರಾಟದಲ್ಲಿ ಸಂಸದ, ಶಾಸಕ, ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳದೆ ನಾಪತ್ತೆಯಾಗಿ ತಮ್ಮ ಬಣ್ಣ ಬಯಲುಗೊಳಿಸಿದ್ದಾರೆ ಎಂದು ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ ಆರೋಪಿಸಿದರು.
ಸಾಗರದ ಸಾರಿಗೆ ಕಚೇರಿಗೆ ಬೀಗ ಹಾಕುವ ಎಚ್ಚರಿಕೆ
ಸಾಗರ: ವಾಹನಗಳ ನೋಂದಣಿ, ಚಾಲನಾ ಪರವಾನಗಿ ಸೇರಿ ವಿವಿಧ ಕೆಲಸಗಳಿಗೆ ಸಾರ್ವಜನಿಕರು ಇಲ್ಲಿನ ಸಾರಿಗೆ ಇಲಾಖೆ ಕಚೇರಿಗೆ ಹೋದಾಗ ಸಕಾಲದಲ್ಲಿ ಕೆಲಸ ಮಾಡಿಕೊಡದೇ ಸತಾಯಿಸಲಾಗುತ್ತಿದೆ. ಎಲ್ಲದಕ್ಕೂ ನೆಟ್‌ವರ್ಕ್ ಸಮಸ್ಯೆ ಎಂಬ ಸಬೂಬು ಹೇಳುವುದನ್ನು ಇಲ್ಲಿನ ಸಿಬ್ಬಂದಿ ಅಭ್ಯಾಸ ಮಾಡಿಕೊಂಡಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಸಕಾಲದಲ್ಲಿ ಕೆಲಸವಾಗುವ ವ್ಯವಸ್ಥೆ ರೂಪಿಸದೆ ಇದ್ದರೆ ಸಾರಿಗೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುತ್ತೆ. ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಬೆಳೆಹಾನಿ, ಸೂಕ್ತ ಪರಿಹಾರಕ್ಕೆ ಹೋರಾಟ
ಸೊರಬ: ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆ ಆಗಿದ್ದರಿಂದ ಬೆಳೆಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹೆಸಿರು ಸೇನೆ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ್ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮೈಸೂರು ಪ್ರಕರಣ, ಆರೋಪಿಗೆ ಕಠಿಣ ಶಿಕ್ಷೆಗೆ ಪಟ್ಟು
ಶಿವಮೊಗ್ಗ: ಮೈಸೂರಿನಲ್ಲಿ ಹಕ್ಕಿಪಿಕ್ಕಿ ಹರಣಿ ಶಿಕಾರಿ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ಮಾಡಲಾಯಿತು. ಸಂತ್ರಸ್ತ ಕುಟುಂಬಕ್ಕೆ ಸರಕಾರಿ ನೌಕರಿ ಹಾಗೂ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಮಿತಿ ರಾಜ್ಯಾಧ್ಯಕ್ಷ ಜಗ್ಗು, ನಂಜುಂಡಸ್ವಾಮಿ, ಕುಮುದ, ಪ್ರಭು, ಸುರೇಂದ್ರ, ನೀಮ, ವಿನು, ಟಿ. ವೆಂಕಟೇಶ್, ಪ್ರಸನ್ನ, ಪ್ರಕಾಶ್ ಇದ್ದರು.
ಮುಗುಡ್ತಿಯಲ್ಲಿ ಆರ್‌ಎಸ್‌ಎಸ್ ಪಥಸಂಚಲನ
ರಿಪ್ಪನ್‌ಪೇಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಹೆದ್ದಾರಿಪುರ ಮಂಡಲದ ಮುಗುಡ್ತಿಯಲ್ಲಿ ಇತ್ತೀಚೆಗೆ ಸ್ವಯಂ ಸೇವಕರು ಪಥಸಂಚಲನ ನಡೆಸಿದರು. ಸಭಾ ಕಾರ್ಯಕ್ರಮದಲ್ಲಿ ಬೌದ್ಧಿಕ್ ಪ್ರಮುಖ ಲೋಹಿತಾಶ್ವ ಕೇದಿಗೆರೆ ಮಾತನಾಡಿ, ಜನಸೇವದೊಂದಿಗೆ ಪ್ರಾರಂಭವಾದ ಸಂಘ 100 ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ದೇಶದ ಎಲ್ಲ ಗ್ರಾಮಗಳಲ್ಲಿಯೂ ಅಸ್ತಿತ್ವವನ್ನು ಸ್ಥಾಪಿಸಿದೆ ಎಂದರು.
ಇದನ್ನೂ ಓದಿ » ಕಾರ್ಗಲ್ ಪವರ್ ಚಾನಲ್ ಬಳಿ ನಾಪತ್ತೆಯಾಗಿದ್ದ ವ್ಯಕ್ತಿ, ತಳಕಳಲೆ ಡ್ಯಾಂ ಹಿನ್ನೀರಿನಲ್ಲಿ ಶವವಾಗಿ ಪತ್ತೆ
Fatafat


