ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 9 DECEMBER 2024
ಶಿವಮೊಗ್ಗ : ಸೋಗಾನೆಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಆಯುರ್ವೇದ ವಿಶ್ವವಿದ್ಯಾಲಯ (Ayurveda) ಸಂಬಂಧ ಮತ್ತೊಮ್ಮೆ ಚರ್ಚೆಯ ಅಗತ್ಯವಿದೆ. ರಾಜ್ಯದಲ್ಲಿರುವ ಆಯುರ್ವೇದ ಕಾಲೇಜುಗಳ ಸುಧಾರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಡಿ.ಎಸ್.ಅರುಣ್ ಪ್ರಶ್ನೆ ಏನು?
ಡಿ.ಹೆಚ್.ಶಂಕರಮೂರ್ತಿ ಅವರು ಸಭಾಪತಿ ಆಗಿದ್ದಾಗ ಶಿವಮೊಗ್ಗದಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸೋಗಾನೆಯಲ್ಲಿ 100 ಎಕರೆ ಜಾಗ ಮೀಸಲಿಟ್ಟು, ವಿಶ್ವವಿದ್ಯಾಲಯ ಸ್ಥಾಪನೆಗೆ 200 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿತ್ತು. 2021ರಲ್ಲಿ 20 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಲಾಗಿತ್ತು. ಆದರೆ ಈತನಕ ವಿಶ್ವವಿದ್ಯಾಲಯ ಸ್ಥಾಪನೆಯಾಗಿಲ್ಲ. ಇನ್ನು, ಆಯುರ್ವೇದ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿಯಿಲ್ಲ. ಸೌಲಭ್ಯಗಳಿಲ್ಲ. ಇದರಿಂದ ವಿದ್ಯಾರ್ಥಿಗಳ ದಾಖಲಾತಿ 60 ರಿಂದ 32ಕ್ಕೆ ಕುಸಿದಿದೆ ಎಂದರು.
ಆಯುರ್ವೇದ ವಿವಿ ಸ್ಥಾಪನೆಗೆ 100 ಎಕರೆ ಜಾಗ ಮೀಸಲಿಡಾಗಿತ್ತು. ಈಗ 8 ಎಕರೆಯಷ್ಟು ಜಾಗ ಮಾತ್ರ ಉಳಿದಿದೆ ಎಂದು ಸರ್ಕಾರ ಉತ್ತರಿಸಿದೆ. ಸರ್ಕಾರದ ನಿರ್ಲ್ಯಕ್ಷದಿಂದಾಗಿ ಆಯುರ್ವೇದ ವಿವಿ ಯೋಜನೆ ನೆನೆಗುದಿಗೆ ಬಿದ್ದಿದೆ. ರಾಜ್ಯದಲ್ಲಿರುವ ನಾಲ್ಕು ಆಯುರ್ವೇದ ಕಾಲೇಜುಗಳ ಸುಧಾರಣೆಗೆ ಸರ್ಕಾರ ಕ್ರಮ ವಹಿಸಬೇಕಿದೆ.
ಡಿ.ಎಸ್.ಆರುಣ್, ವಿಧಾನ ಪರಿಷತ್ ಸದಸ್ಯ
ಸಚಿವರ ಉತ್ತರವೇನು?
ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆಗೆ 8 ಎಕರೆ ಜಾಗ ಸಾಕಾಗುವುದಿಲ್ಲ. ಮೀಸಲಿಟ್ಟ ನೂರು ಎಕರೆಯಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವುದು ಮತ್ತು 32 ಎಕರೆಯಷ್ಟು ಜಾಗವನ್ನು ವಸತಿ ಇಲಾಖೆಗೆ ನೀಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಜೊತೆಗು ಚರ್ಚೆ ನಡೆಸಲಾಗಿದೆ. ಜಾಗ ದೊರೆತರೆ ಆಯುರ್ವೇದ ವಿವಿ ಸ್ಥಾಪನೆ ಮಾಡಲಾಗುತ್ತದೆ. ಇನ್ನು, ಆಯುರ್ವೇದ ಕಾಲೇಜುಗಳ ಸುಧಾರಣೆ ಸಂಬಂಧ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಇದನ್ನೂ ಓದಿ » ವಿಧಾನ ಪರಿಷತ್‌ನಲ್ಲಿ ಡಾ. ಸರ್ಜಿ ಪ್ರಶ್ನೆ, ಸಚಿವರ ಉತ್ತರವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422