ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ವೀಡಿಯೋ (Video) ತಿರುಚಿ ಧಾರ್ಮಿಕ ಭಾವನೆ ಕೆರಳುವಂತೆ ಮಾಡಿದ್ದಲ್ಲದೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ದ್ವೇಷ ಹುಟ್ಟುವಂತೆ ಮಾಡಲಾಗಿದೆ. ಕೃತ್ಯ ಎಸಗಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿದೇವಿ ಭಕ್ತ ಮಂಡಳಿ ಆಗ್ರಹಿಸಿದೆ.
ಇದನ್ನೂ ಓದಿ » ಹುಲಿಕಲ್ ಘಾಟಿಯಲ್ಲಿ ಡಿಸೇಲ್ ಖಾಲಿಯಾಗಿ ನಿಂತ KSRTC ಬಸ್, ಕೆಲಕಾಲ ಸಂಚಾರ ಅಸ್ತವ್ಯಸ್ತ
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಅವರನ್ನು ಭೇಟಿಯಾದ ಭಕ್ತ ಮಂಡಳಿ ಸದಸ್ಯರು ದೂರು ಸಲ್ಲಿಸಿದರು.
ದೂರಿನಲ್ಲಿರುವ ಪ್ರಮುಖಾಂಶಗಳೇನು?
ಸಚಿವರ ಹೇಳಿಕೆ ತಿರುಚುವಿಕೆ: ಜುಲೈ 21ರಂದು ಸಚಿವ ಮಧು ಬಂಗಾರಪ್ಪ ಅವರು, “ಸಿಗಂಧೂರು ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆ” ಎಂದಿದ್ದರು. ಆದರೆ ಈ ಹೇಳಿಕೆಯನ್ನು ಅರ್ಧಕ್ಕೆ ಕತ್ತರಿಸಿ, “ಸಿಗಂದೂರು ದೇವಸ್ಥಾನವನ್ನು ಹೇಗೆ ಹಾಳು ಮಾಡಬೇಕೆಂದು ಒಂದು ತಿಂಗಳೊಳಗೆ ನಿಮಗೆ ಡಿಟೈಲ್ ಹೇಳುವೆ” ಎಂಬ 19 ಸೆಕೆಂಡ್ ವಿಡಿಯೋವನ್ನು ವೈರಲ್ ಮಾಡಿದ್ದಾರೆ.

ಧಾರ್ಮಿಕ ಭಾವನೆ ಕೆರಳಿಸುವ ಯತ್ನ: ತಿರುಚಿದ ವಿಡಿಯೋದ ಕೆಳಗೆ, “ಅಜ್ಞಾನಿ ವಿದ್ಯಾ ಮಂತ್ರಿಗಳೇ ಸಿಗಂದೂರು ಚೌಡೇಶ್ವರಿ ಮಾತೆಯ ಮಂದಿರ ಹಾಳು ಮಾಡ್ತೀವಿ ಎಂದ ನಾಲಿಗೆಗೆ ತಾಯಿ ಬರೆ ಹಾಕುವುದು ನಿಶ್ಚಿತ,” ಎಂದು ಬರೆದು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಸಚಿವರ ವಿರುದ್ಧ ದ್ವೇಷ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಹಿಂದಿನ ಹೋರಾಟದ ನಂಟು: ಹಿಂದಿನ ಸರ್ಕಾರ ಸಿಗಂದೂರ ದೇವಸ್ಥಾನವನ್ನು ಮುಜರಾಯಿಗೆ ವಹಿಸುವ ಪ್ರಯತ್ನವನ್ನು “ಶ್ರೀ ಸಿಗಂಧೂರು ಕ್ಷೇತ್ರ ಹೋರಾಟ ಸಮಿತಿ” ಮೂಲಕ ಮಧು ಬಂಗಾರಪ್ಪ ಅವರು ವಿರೋಧಿಸಿದ್ದರು. ಇದು ಈಡಿಗ ಸಮಾಜದ ಅಸ್ಮಿತೆ ಎಂದು ಹೇಳಿ, “ಜೇನುಗೂಡಿಗೆ ಕೈ ಹಾಕಿದಂತೆ” ಎಂದು ಎಚ್ಚರಿಕೆ ನೀಡಿದ್ದರು.
ರಾಜಕೀಯ ದುರುದ್ದೇಶದ ಆರೋಪ: ಈ ನಕಲಿ ವಿಡಿಯೋ ಸೃಷ್ಟಿಯು ಶ್ರೀ ಕ್ಷೇತ್ರದ ವಿಷಯದಲ್ಲಿ ಸುಳ್ಳು ಸುದ್ದಿ ಹರಡುವ ರಾಜಕೀಯ ಕುತಂತ್ರದ ಭಾಗವಾಗಿದೆ. ಇದು ಸಾರ್ವಜನಿಕರನ್ನು ಪ್ರಚೋದಿಸಿ, ಸಚಿವರ ಬಗ್ಗೆ ತಪ್ಪು ಭಾವನೆ ಮೂಡಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಲಾಗಿದೆ.

ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಪ್ರಮುಖರಾದ ಜಿ.ಡಿ.ಮಂಜುನಾಥ್, ವಿನೋದ್.ಕೆ, ಮಂಜು ಪುರಲೆ, ಕೆ.ಸಿ.ನಾಗರಾಜ್, ಲೋಕೇಶ್ ಸೇರಿ ಹಲವರು ಇದ್ದರು.
LATEST NEWS
- ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

- ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

- ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

- ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

- ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

About The Editor
ನಿತಿನ್ ಆರ್.ಕೈದೊಟ್ಲು













