BREAKING NEWS | ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ದಿನ 250ಕ್ಕೂ ಹೆಚ್ಚು ಮಂದಿಗೆ ಕರೋನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 12 ಜನವರಿ 2022

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ದಾಖಲೆ ಪ್ರಮಾಣದ ಮಂದಿಗೆ ಕರೋನ ಸೋಂಕು ತಗುಲಿದೆ. ಇವತ್ತು 251 ಮಂದಿಗೆ ಪಾಸಿಟಿವ್ ಬಂದಿದೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು 251 ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಈ ಪೈಕಿ 141 ಮಂದಿಗೆ ಶಿವಮೊಗ್ಗ ತಾಲೂಕಿಗೆ ಸೇರಿದ್ದಾರೆ. ಭದ್ರಾವತಿಯ 43, ತೀರ್ಥಹಳ್ಳಿಯ 1, ಶಿಕಾರಿಪುರದ 10, ಸಾಗರದ 19, ಹೊಸನಗರದ 23, ಸೊರಬದ 2, ಇತರೆ ಜಿಲ್ಲೆಯಿಂದ ಬಂದ 12 ಮಂದಿಗೆ ಸೋಂಕು ತಗುಲಿದೆ.

750ರ ಸಮೀಪಕ್ಕೆ ಸಕ್ರಿಯ ಪ್ರಕರಣ

ಇವತ್ತು 251 ಮಂದಿಗೆ ಸೋಂಕು ತಗುಲಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 747ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 101 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 64 ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸಿಹೆಚ್’ಸಿಯಲ್ಲಿ 82, ಹೋಮ್ ಐಸೊಲೇಷನ್’ನಲ್ಲಿ 480, ಟ್ರಯೇಜ್’ನಲ್ಲಿ 20 ಮಂದಿ ಚಿಕಿತ್ಸೆಯಲ್ಲಿದ್ದಾರೆ.

ಇನ್ನು, ಇವತ್ತು ಜಿಲ್ಲೆಯಲ್ಲಿ 52 ಮಂದಿ ಕರೋನದಿಂದ ಗುಣವಾಗಿದ್ದಾರೆ. ಇದು ತುಸು ನೆಮ್ಮದಿ ಮೂಡಿಸಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment