ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು?| 23 ಜುಲೈ 2025 |ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿಗಳು – FATAFAT NEWS

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ಜಿಲ್ಲೆಯ ಸಮಗ್ರ ಸುದ್ದಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಜುಲೈ 22ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಎಲ್ಲ ಪ್ರಮುಖ ಸುದ್ದಿಗಳು ಇಲ್ಲಿವೆ. (Fatafat News)

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Speed News 1ಸೊರಬ: ಕುಬಟೂರು ಗ್ರಾಮದ ಶ್ರೀ ಚಿಂತಾಮಣಿ ನರಸಿಂಹಸ್ವಾಮಿ ದೇವರ ವಿಗ್ರಹ ಭಗ್ನ. ಕೆಲವೇ ಹೊತ್ತಿನಲ್ಲಿ ಆರೋಪಿ ಅರೆಸ್ಟ್‌. ಹಾನಗಲ್‌ ತಾಲೂಕು ಗೋಂದಿ ಗ್ರಾಮದ ಕೋಟೇಶ್ವರ (32) ಅರೆಸ್ಟ್‌.

Speed News 2ಶಿವಮೊಗ್ಗ: ಬೇಡರ ಹೊಸಹಳ್ಳಿ ಕ್ರಾಸ್‌ನಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಮೆಡಿಕಲ್‌ ರೆಪ್‌ ಸಚಿನ್‌ (25) ಸ್ಥಳದಲ್ಲೇ ಸಾವು. ರಾತ್ರಿ ಕೆಲಸ ಮುಗಿಸಿ ಕ್ಯಾತಿನಕೊಪ್ಪದ ಮನೆಗೆ ಮರಳುವಾಗ ಘಟನೆ. ಪೂರ್ತಿ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ » ಶಿವಮೊಗ್ಗದಲ್ಲಿ ರಾತ್ರಿ ಹಿಟ್‌ ಅಂಡ್‌ ರನ್‌ ಅಪಘಾತ, ಮೆಡಿಕಲ್‌ ರೆಪ್‌ ಸ್ಥಳದಲ್ಲೆ ದುರ್ಮರಣ

FATAFAT-NEWS-BAND.webp

Speed News 3ಶಿವಮೊಗ್ಗ: ಕಾಚಿನಕಟ್ಟೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಓಂಕಾರಪ್ಪ ಎಂಬವವರಿಗೆ ಸೇರಿದ ಬೈಕ್‌ ಭಾಗಶಃ ಸುಟ್ಟು ಹೋಗಿದೆ. ಪೂರ್ತಿ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ » ಕಾಚಿನಕಟ್ಟೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ನಡುರಾತ್ರಿ ಬೆಂಕಿ

Speed News 4ಹೊಸನಗರ: ನಿಟ್ಟೂರು ಸಮೀಪ ಸಂಪೇಕಟ್ಟೆ ಸರ್ಕಲ್‌ನಲ್ಲಿ ಮದ್ಯದ ವಿಚಾರಕ್ಕೆ ಲಕ್ಷ್ಮೀಶ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂರ್ತಿ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ » ಹೊಸನಗರದ ಸಂಪೆಕಟ್ಟೆಯಲ್ಲಿ ಮದ್ಯದ ವಿಚಾರಕ್ಕೆ ರಾಡ್‌ನಿಂದ ಹಲ್ಲೆ, CCTVಯಲ್ಲಿ ದೃಶ್ಯ ಸೆರೆ, ಏನಿದು ಘಟನೆ?

Speed News 5ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಅಪರಿಚಿತ ವ್ಯಕ್ತಿ ಹೇಳಿಕೆ ನೀಡಿದ ಬೆನ್ನಿಗೆ ಸರ್ಕಾರ ಎಸ್‌ಐಟಿ ರಚಿಸಿರುವುದು ಸಮಯೋಚಿತ. ನಿಷ್ಪಕ್ಷಪಾತ ತನಿಖೆಯಾಗಲಿ. ಸುದ್ದಿಗೋಷ್ಠಿಯಲ್ಲಿ ವಕೀಲ ಕೆ.ಪಿ.ಶ್ರೀಪಾಲ್‌ ಆಗ್ರಹ.

Speed News 6ಸೊರಬ: ಅಗಸನಹಳ್ಳಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಮನೆಯನ್ನು ತೆರವು ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

Speed News 7ರಿಪ್ಪನ್‌ಪೇಟೆ: ಕೆಂಚನಾಲ ಮಾರಿಕಾಂಬ ದೇವಿಯ ಮಳೆಗಾಲದ ಮಾರಿಜಾತ್ರೆಯು ವಿಜೃಂಭಣೆಯಿಂದ ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.  

June-2025-Report-Shivamogga-Live-New-New.

Speed News 8ಶಿವಮೊಗ್ಗ: ತುರ್ತು ಪರಿಸ್ಥಿತಿಗೆ 50 ವರ್ಷವಾದ ಹಿನ್ನೆಲೆ ಶ್ರೀಗಂಧ ಸಂಸ್ಥೆಯಿಂದ ಜು.25ರಂದು ಸಂಜೆ 5.30ಕ್ಕೆ ಶುಭ ಮಂಗಳ ಸಮುದಾಯ ಭವನದಲ್ಲಿ ಕರಾಳ ಅಧ್ಯಾಯ 50 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Speed News 9ಸೊರಬ: ಮಳೆಗೆ ಆನವಟ್ಟಿಯ ಹಿರೇಮಾಗಡಿಯ ರುಕ್ಮಿಣಿ ಬಾಯಿ, ಚಂದ್ರಗುತ್ತಿಯ ಬೆನ್ನೂರು ಗ್ರಾಮದ ಶಾರದಮ್ಮ ಅವರ ಮನೆಗಳ ಗೋಡೆ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Speed News 10ಶಿವಮೊಗ್ಗ: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದಿಂದ ಆ.1 ಮತ್ತು 2ರಂದು ಆಳ್ವಾಸ್‌ ಪ್ರಗತಿ 2025 ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಅಳ್ವಾಸ್‌ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Speed News 11ಶಿವಮೊಗ್ಗ: ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಹೆಚ್‌.ಎಸ್‌.ರುದ್ರಪ್ಪ ನೆನಪಿನಲ್ಲಿ ಆ.19ರಂದು ಡಾ.ಅಂಬೇಡ್ಕರ್‌ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

Speed News 12ಭದ್ರಾವತಿ: ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರಕ್ಕೆ ಜುಲೈ 27ರಿಂದ ನೀರು ಹರಿಸಲಾಗುತ್ತದೆ. ಮುಂದಿನ ನಾಲ್ಕು ತಿಂಗಳವರೆಗೆ 4.25 ಟಿಎಂಸಿ ಅಡಿ ನೀರು ಹರಿಯಲಿದೆ.

Prashanth-Loan-Advertisement.

Speed News 13ಹೊಸನಗರ: ಮಾರ್ಗ ಮಧ್ಯೆ ಡಿಸೇಲ್‌ ಖಾಲಿಯಾಗಿ ನಿಂತ ಕೆಎಸ್‌ಆರ್‌ಟಿಸಿ ಬಸ್‌. ಹುಲಿಕಲ್‌ ಘಾಟಿ ತಿರುವಿನಿಂದ ಕೊಂಚ ದೂರದಲ್ಲಿ ಬಸ್‌ ನಿಂತಿದ್ದರಿಂದ ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ಶಿವಮೊಗ್ಗ ಹೊಸನಗರ ಮಾರ್ಗವಾಗಿ ಬಸ್ಸು ಉಡುಪಿಗೆ ತೆರಳುತಿತ್ತು. ಪೂರ್ತಿ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ » ಹುಲಿಕಲ್‌ ಘಾಟಿಯಲ್ಲಿ ಡಿಸೇಲ್‌ ಖಾಲಿಯಾಗಿ ನಿಂತ KSRTC ಬಸ್‌, ಕೆಲಕಾಲ ಸಂಚಾರ ಅಸ್ತವ್ಯಸ್ತ

Speed News 14ಶಿವಮೊಗ್ಗ: ರೈಲ್ವೆ ನಿಲ್ದಾಣದ ಮುಂದೆ ಆಟೋಗಳನ್ನು ನಿಷೇಧಿಸಲಾಗಿದೆ. ನಿಲ್ದಾಣದ ಮೂರು ದಾರಿಯಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಚಾಲಕರಿಂದ ಪ್ರಯಾಣಿಕರಿಗೆ ಕಿರಿಕಿರಿ ತಪ್ಪಿಸಲು ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪೂರ್ತಿ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ » ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಆಟೋಗಳಿಗೆ ನಿಷೇಧ, ಕಾರಣವೇನು? ಈಗ ಹೇಗಿದೆ ವ್ಯವಸ್ಥೆ?

Speed News 15ಸಾಗರ: ಜೀವನ್ಮುಖಿ ಸಂಸ್ಥೆಯು ಎಸ್.ಎನ್. ನಗರ ಬಡಾವಣೆಯ ಭೂಮಿ ರಂಗಮನೆಯಲ್ಲಿ ಜುಲೈ 25ರಿಂದ 27ರವರೆಗೆ ನೆಲದ ದನಿ ಜನಪದ ಗಾಯನ ಕಲಿಕಾ ಶಿಬಿರ ಆಯೋಜಿಸಿದೆ.

shivamogga live news whatsappa number

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment