ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 DECEMBER 2020
ವಿದೇಶದಿಂದ ಶಿವಮೊಗ್ಗಕ್ಕೆ ಹಿಂತಿರುಗಿರುವ ನಾಲ್ಕು ಮಂದಿಯಲ್ಲಿ ರೂಪಾಂತರಿ ಕರೋನ ವೈರಸ್ ಪತ್ತೆಯಾಗಿದೆ. ಇನ್ನು, ಇವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಮೂವರಲ್ಲೂ ಸೋಂಕು ಕಾಣಿಸಿಕೊಂಡಿದೆ.
ನಾಲ್ಕು ಮಂದಿಗೆ ಸೋಂಕು ದೃಢ
- ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಶಿವಮೊಗ್ಗದ ನಾಲ್ಕು ಮಂದಿಯಲ್ಲಿ ರೂಪಾಂತರ ಕರೋನ ವೈರಸ್ ಪತ್ತೆಯಾಗಿದೆ ಎಂದರು.
- ಇವರೊಂದಿಗೆ ಏಳು ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಅವರಿಗೂ ಕರೋನ ಪರೀಕ್ಷೆ ನಡೆಸಲಾಗಿದೆ.
- ಏಳು ಮಂದಿಯ ಪೈಕಿ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ ಇದು ರೂಪಾಂತರಿ ವೈರಸ್ ಹೌದೋ ಅಲ್ಲವೋ ಅನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
- ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ.
ಕೇಂದ್ರಕ್ಕೂ ಕಳಿಸಲಾಗಿತ್ತು ಸ್ಯಾಂಪಲ್
ರೂಪಾಂತರಿ ವೈರಸ್ ಪತ್ತೆಗೆ ಬೆಂಗಳೂರಿನಲ್ಲಿ ಪರಿಶೀಲನೆ ನಡೆಸಲಾಗಿತ್ತು. ಆ ಬಳಿಕ ಸ್ಯಾಂಪಲ್‍ಗಳನ್ನು ಕೇಂದ್ರಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ನಾಲ್ಕು ಮಂದಿಗೆ ರೂಪಾಂತರಿ ಕರೋನ ವೈರಸ್ ತಗುಲಿದೆ ಎಂದು ದೃಢಪಟ್ಟಿದೆ ಅಂತಾ ಸಚಿವ ಡಾ.ಸುಧಾಕರ್ ತಿಳಿಸಿದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

- ಮಾರ್ಚ್ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

- ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು
















