ಶಿವಮೊಗ್ಗ ಜಿಲ್ಲೆಯ 71 ಸಾವಿರ ರೈತರ ಖಾತೆಗೆ ವಿಮೆ ಪರಿಹಾರ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 1 DECEMBER 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ : ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ 2023-24ನೇ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾದ ಬೆಳೆ ನಷ್ಟಕ್ಕೆ 156.14 ಲಕ್ಷ ರೂ. ಬೆಳೆ ವಿಮೆ (Insurance) ಪರಿಹಾರ ಬಿಡುಗಡೆಯಾಗಿದೆ. ಡಿ.2ರಂದು ರೈತರ ಖಾತೆಗಳಿಗೆ ವಿಮೆ ಹಣ ಜಮಾ ಆಗಲಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡಿಕೆ, ಮಾವು, ಮೆಣಸು ಮತ್ತು ಶುಂಠಿ ಬೆಳೆಗಳಿಗೆ ಜಿಲ್ಲೆಯ 73,271 ರೈತರು ವಿಮೆ ಪಾವತಿಸಿದ್ದರು. ಅದರಲ್ಲಿ 71,177 ರೈತರಿಗೆ ವಿಮೆ ಪರಿಹಾರ ಬಂದಿದೆ. ಅಡಿಕೆ ವಿಮೆ ಮಾಡಿಸಿದ 68,951 ರೈತರಿಗೆ ಸೋಮವಾರದಿಂದ ಅವರ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆಯಾಗುತ್ತದೆ. ಮಾವು, ಮೆಣಸು ಮತ್ತು ಶುಂಠಿ ಬೆಳೆದ 2226 ರೈತರ ಖಾತೆಗೆ ಈಗಾಗಲೇ ಬೆಳೆ ವಿಮೆ ಪರಿಹಾರ ಜಮೆ ಆಗಿದೆ. ಹಿಂದಿನ 2 ವರ್ಷಗಳಿಗಿಂತ ಈ ವರ್ಷ ಅಧಿಕವಾಗಿ ಬೆಳೆ ವಿಮೆ ಮೊತ್ತವು ರೈತರ ಖಾತೆಗೆ ಜಮೆ ಆಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

Agriculture-News-Farmer

ತಾಲೂಕುವಾರು ವಿಮೆ ಹಣದ ವಿವರ

ಭದ್ರಾವತಿಯಲ್ಲಿ 3110 ರೈತರಿಗೆ ವಿಮೆ ಮೊತ್ತ ಬಿಡುಗಡೆಯಾಗಿದೆ. ಈ ಪೈಕಿ 3108 ಅಡಿಕೆ ಬೆಳೆಗಾರರು, 2 ಮೆಣಸು ಬೆಳೆಗಾರರಿದ್ದಾರೆ.

ಹೊಸನಗರದಲ್ಲಿ ಒಟ್ಟು 7305 ರೈತರಿಗೆ ವಿಮೆ ಹಣ ಬರಲಿದೆ. ಈ ಪೈಕಿ 6878 ಅಡಿಕೆ ಬೆಳೆಗಾರರು, 397 ಮೆಣಸು, 30 ಶುಂಠಿ ಬೆಳೆಗಾರಿದ್ದಾರೆ.

ಸಾಗರದಲ್ಲಿ 7662 ರೈತರಿಗೆ ವಿಮೆ ಮೊತ್ತ ದೊರೆಯಲಿದೆ. ಈ ಪೈಕಿ 7524 ಅಡಿಕೆ ಬೆಳೆಗಾರರು, 104 ಮೆಣಸು, 34 ಶುಂಠಿ ಬೆಳೆಗಾರರಿದ್ದಾರೆ.

BY-Raghavendra-Press-meet-in-Shimoga-city

ಶಿಕಾರಿಪುರದಲ್ಲಿ 15,386 ಬೆಳೆಗಾರರಿಗೆ ವಿಮೆ ಹಣ ಬಿಡುಗಡೆಯಾಗಲಿದೆ. 15,063 ಅಡಿಕೆ ಬೆಳೆಗಾರರು, 5 ಮೆಣಸು, 106  ಶುಂಠಿ, 212 ಮಾವು ಬೆಳೆಗಾರರು ಇದ್ದಾರೆ.

ಶಿವಮೊಗ್ಗದಲ್ಲಿ 7398 ಬೆಳೆಗಾರರಿಗೆ ವಿಮೆ ಹಣ ಸಿಗಲಿದೆ. ಈ ಪೈಕಿ 7292 ಅಡಿಕೆ ಬೆಳೆಗಾರರು, 7 ಮೆಣಸು, 75 ಶುಂಠಿ, 24 ಮಾವು ಬೆಳೆಗಾರರಿದ್ದಾರೆ.

ಸೊರಬದಲ್ಲಿ 18,627 ರೈತರಿಗೆ ವಿಮೆ ಹಣ ಜಮೆ ಆಗಲಿದೆ. 17,807 ಅಡಿಕೆ ಬೆಳೆಗಾರರು, 23 ಮೆಣಸು, 139 ಶುಂಠಿ ಬೆಳೆಗಾರರು, 658 ಮಾವು ಬೆಳೆಗಾರರಿಗೆ ವಿಮೆ ಹಣ ಬಿಡುಗಡೆಯಾಗಲಿದೆ.

ತೀರ್ಥಹಳ್ಳಿ ತಾಲೂಕಿನಲ್ಲಿ 11,689 ರೈತರಿಗೆ ವಿಮೆ ಪರಿಹಾರ ದೊರೆಯಲಿದೆ. ಈ ಪೈಕಿ 11,279 ಅಡಿಕೆ ಬೆಳೆಗಾರರು, 410 ಮೆಣಸು ಬೆಳೆಗಾರರಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಿಂದ ಚನ್ನಗಿರಿಗೆ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಗೆ ಕಾದಿತ್ತು ಶಾಕ್

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment