ಶಿವಮೊಗ್ಗ: ಜಿಲ್ಲೆಯಾದ್ಯಂತ ಪುಷ್ಯ ಮಳೆ ಬಿರುಸಾಗಿದೆ. ವಿವಿಧೆಡೆ ಸಾಧಾರಣದಿಂದ ಭಾರಿ ಮಳೆಯಾಗುತ್ತಿದೆ (Rainfall). ಇನ್ನೊಂದೆಡೆ ಇವತ್ತು ಜಿಲ್ಲೆಯಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹಾವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ ಜಿಲ್ಲೆಗೆ ಇವತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪಕ್ಕದ ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲು ಆರೆಂಜ್ ಅಲರ್ಟ್ ಇದೆ. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಇದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಬೆಳಗ್ಗೆಯಿಂದ ನಿರಂತರ ಮಳೆ

ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕಿನ ಹಲವೆಡೆ ಬೆಳಗ್ಗೆಯಿಂದಲೆ ಮಳೆ ಅಬ್ಬರಿಸುತ್ತಿದೆ. ತೀರ್ಥಹಳ್ಳಿಯ ಅರೇಹಳ್ಳಿ, ಮೇಗರವಳ್ಳಿ, ಹೊಸಹಳ್ಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹೊನ್ನೇತಾಳು, ತೀರ್ಥಮತ್ತೂರು, ಸಾಲ್ಗಡಿ, ನೆರಟೂರು, ಆರಗ, ತೂದೂರು, ಬೆಜ್ಜವಳ್ಳಿ, ಬಾಂಡ್ಯ ಕುಕ್ಕೆ, ತ್ರಿಯಂಬಕಪುರ, ಹಾದಿಗಲ್ಲು ಸುತ್ತಮುತ್ತಲು ಮಳೆ ಬಿರುಸಾಗಿದೆ.
ಇದನ್ನೂ ಓದಿ » ಶಿವಮೊಗ್ಗದ ಮನೆಯಲ್ಲಿ ಸಿಲಿಂಡರ್ ಸ್ಪೋಟ, ಹಾರಿ ಹೋದ ಛಾವಣಿ
ಹೊಸನಗರ ತಾಲೂಕಿನ ಅಮೃತ, ಸೋನಲೆ, ಮೇಲಿನಬೆಸಿಗೆ, ಹೊಸನಗರ, ಮುಂಬಾರು, ಕೋಡೂರು, ಚಿಕ್ಕಜೇನಿ, ಮಾರುತಿಪುರ ಸುತ್ತಮುತ್ತ ಜೋರು ಮಳೆಯಾಗುತ್ತಿದೆ. ಸಾಗರದ ಹೊಸೂರು, ಕೋಳೂರು, ಭೀಮನಕೋಣೆ, ಕಲ್ಮನೆ, ಕಾಂಡಿಕ, ಭೀಮನೇರಿ, ಮಾಲ್ವೆ, ಕೆಳದಿ, ಹಿರೆನಲ್ಲೂರು, ತ್ಯಾಗರ್ತಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ.

ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ ಮತ್ತು ಸೊರಬ ತಾಲೂಕಿನ ಹಲವಡೆ ಸಾಧಾರಣ ಮಳೆಯಾಗುತ್ತಿದೆ.
ಜಿಲ್ಲೆಯಲ್ಲಿ ತಗ್ಗಿದ ತಾಪಮಾನ
ಮೋಡ ಕವಿದ ವಾತಾವರಣ ಮತ್ತು ನಿರಂತರ ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ತಾಪಮಾನ ತಗ್ಗಿದೆ. ಇವತ್ತು ಜಿಲ್ಲೆಯಾದ್ಯಂತ ತಂಪು ವಾತಾವರಣ ಇರಲಿದೆ.
- ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
- ತೀರ್ಥಹಳ್ಳಿ ತಾಲೂಕಿನಲ್ಲಿ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
- ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು





