ಶಿವಮೊಗ್ಗ ಜಿಲ್ಲೆಯ 271 ಗ್ರಾ.ಪಂಗಳ ಪೈಕಿ 244ರಲ್ಲಿ ಚುನಾವಣೆ, ಯಾವ್ಯಾವ ತಾಲೂಕಲ್ಲಿ ಎಷ್ಟು ಗ್ರಾ.ಪಂಗೆ ಎಲೆಕ್ಷನ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 1 DECEMBER 2020

ಶಿವಮೊಗ್ಗದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲೆಯ 271 ಗ್ರಾಮ ಪಂಚಾಯಿತಿಗಳ ಪೈಕಿ 244 ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಅಧಿಸೂಚನೆ ಪ್ರಕಟ

ಮೊದಲ ಹಂತದ ಚುನಾವಣೆಗೆ ಡಿಸೆಂಬರ್ 7ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ. ಎರಡನೇ ಹಂತದ ಚುನಾವಣೆಗೆ ಡಿಸೆಂಬರ್ 11ರಂದು ಅಧಿಸೂಚನೆ ಪ್ರಕಟಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

128981020 1279234479104636 5525728990584616652 n.jpg? nc cat=110&ccb=2& nc sid=730e14& nc ohc=xEm3tDao94kAX ebTX & nc ht=scontent.fblr11 1

ಯಾವ್ಯಾವ ತಾಲೂಕಲ್ಲಿ ಯಾವಾಗ ಎಲೆಕ್ಷನ್?

  • ಮೊದಲ ಹಂತ | ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ತಾಲೂಕು
  • ಎರಡನೇ ಹಂತ | ಸಾಗರ, ಶಿಕಾರಿಪುರ, ಸೊರಬ, ಹೊಸನಗರ

ಸ್ಥಾನಗಳೆಷ್ಟು? ಮತಗಟ್ಟೆಗಳೆಷ್ಟು?

ಶಿವಮೊಗ್ಗ ಜಿಲ್ಲೆಯ 244 ಗ್ರಾಮ ಪಂಚಾಯಿತಿಯ 2609 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 1415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

128804020 1279234399104644 343027079043780593 n.jpg? nc cat=100&ccb=2& nc sid=730e14& nc ohc=YTL6 i4 PYgAX 0X1kQ& nc ht=scontent.fblr11 1

271ರ ಪೈಕಿ 244 ಗ್ರಾ.ಪಂಗಷ್ಟೇ ಚುನಾವಣೆ

ಜಿಲ್ಲೆಯಲ್ಲಿ 271 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ 244 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಐದು ವರ್ಷ ಪೂರ್ಣಗೊಳ್ಳದ ಏಳು ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವುದಿಲ್ಲ. ನಗರ ಸ್ಥಳೀಯ ಸಂಸ್ಥೆಗಳಾಗಿ ಪೂರ್ಣ ಮತ್ತು ಭಾಗಶಃ ಪರಿವರ್ತನೆ ಆಗಿರುವ 20 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಇರುವುದಿಲ್ಲ.

128872658 1279234472437970 5180443364536711738 n.jpg? nc cat=108&ccb=2& nc sid=730e14& nc ohc=WwbFhjpcq10AX9mqI1Q& nc ht=scontent.fblr11 1

ಯಾವೆಲ್ಲ ಗ್ರಾ.ಪಂನಲ್ಲಿ ಎಲೆಕ್ಷನ್ ಇಲ್ಲ?

  • ಐದು ವರ್ಷ ಪೂರ್ಣಗೊಳ್ಳದ ಶಿವಮೊಗ್ಗ ತಾಲೂಕಿನ ಕುಂಸಿ, ಪುರದಾಳು, ಭದ್ರಾವತಿಯ ಕೋಮಾರನಹಳ್ಳಿ, ವೀರಾಪುರ, ಶಿಕಾರಿಪುರದ ಹಾರೋಗೊಪ್ಪ, ತರಲಘಟ್ಟ, ಚುರ್ಚಿಗುಂಡಿಯಲ್ಲಿ ಚುನಾವಣೆ ನಡೆಯುವುದಿಲ್ಲ.
  • ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆ ಆಗಿರುವ ಭದ್ರಾವತಿ ತಾಲೂಕು ಹೊಳೆಹೊನ್ನೂರು, ಸಿದ್ಲೀಪುರ, ಹನುಮಂತಾಪುರ, ಎಮ್ಮೇಹಟ್ಟಿ ಗ್ರಾಮ ಪಂಚಾಯಿತಿಗಳು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಿದೆ.
  • ಶಿಕಾರಿಪುರ ತಾಲೂಕಿನ ತಡಗಣಿ, ಉಡುಗಣಿ ಗ್ರಾಮ ಪಂಚಾಯಿತಿಗಳು ಶಿರಾಳಕೊಪ್ಪ ಪುರಸಭೆಯಾಗಿ ಪರಿವರ್ತನೆಯಾಗಿದೆ.
  • ಸೊರಬ ತಾಲೂಕಿನ ಹಳೇ ಸೊರಬ, ಕೊಡಕಣಿ, ತವನಂದಿ, ಹೆಚ್ಚೆ, ಮುಟುಗುಪ್ಪೆ ಗ್ರಾಮ ಪಂಚಾಯಿತಿಗಳು ಸೊರಬ ಪುರಸಭೆಯಾಗಿ ಪರಿವರ್ತನೆಯಾಗಿದೆ.
  • ಸೊರಬ ತಾಲೂಕಿನ ಆನವಟ್ಟಿ, ಕುಬಟೂರು, ಸಮನವಳ್ಳಿ, ತಲ್ಲೂರು, ಕಾತುವಳ್ಳಿ, ಅಗಸನಹಳ್ಳಿ, ಎಣ್ಣೆಕೊಪ್ಪ, ತತ್ತೂರು, ಗೆಂಡ್ಲ ಗ್ರಾಮ ಪಂಚಾಯಿತಿಗಳು ಆನವಟ್ಟಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಿದೆ. ಹಾಗಾಗಿ ಇಲ್ಲಿ ಚುನಾವಣೆ ನಡೆಯುವುದಿಲ್ಲ.

ಎಷ್ಟು ಮತದಾರರಿದ್ದಾರೆ?

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈ ಬಾರಿ 8,12,126 ಮತದಾರರು ಹಕ್ಕು ಚಲಾಯಿಸಲಿದ್ದಾರೆ. 4,06,446 ಪುರುಷ ಮತದಾರರು, 4,05,680 ಮಹಿಳಾ ಮತದಾರರು ಇದ್ದಾರೆ.

128879491 1279234485771302 6886500787380422711 n.jpg? nc cat=101&ccb=2& nc sid=730e14& nc ohc=hx1zKWDwRk0AX8XwSR & nc ht=scontent.fblr11 1

ಚುನಾವಣಾ ಕರ್ತವ್ಯಕ್ಕಾಗಿ 244 ಚುನಾವಣಾಧಿಕಾರಿಗಳು, 244 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 1557 ಅಧ್ಯಕ್ಷಾಧಿಕಾರಿ, 4671 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಈಗಾಗಲೆ ಒಂದು ಹಂತದ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಅನುರಾಧ ಸುದ್ದಿಗೋಷ್ಠಿಯಲ್ಲಿದ್ದರು.

126615369 1008713619608548 6168072243270294966 n.jpg? nc cat=105&ccb=2& nc sid=730e14& nc ohc=MosDq1Hs8ugAX8HmiN1& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 1, 2020

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment