ಗಾಳಿ, ಮಳೆಗೆ ಹಲವೆಡೆ ಹಾನಿ, ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ನ್ಯೂಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಜೋರು ಮಳೆಯಾಗುತ್ತಿದೆ. ಭಾನುವಾರ ಮಳೆ ಪ್ರಮಾಣ ತಗ್ಗಿದೆ. ಆದರೆ ಮೇಲ್ಮೈ ಗಾಳಿ ರಭಸ ಜೋರಾಗಿದೆ. ಇದರಿಂದ ಹಲವೆಡೆ ಹಾನಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌ (Shimoga Rain).

ರೈಲ್ವೆ ಹಳಿ ಮೇಲೆ ಬಿದ್ದ ಮರ

NEWS-1-jpg.webpಶಿವಮೊಗ್ಗ: ಶಿವಮೊಗ್ಗ – ಭದ್ರಾವತಿ ಮಧ್ಯೆ ಕೊಪ್ಪದಾಳು ಬಳಿ ಭಾರಿ ಗಾಳಿಗೆ ಮರ ಉರುಳಿ ರೈಲ್ವೆ ಮಾರ್ಗದ ಮೇಲೆ ಬಿದ್ದಿತ್ತು. ಇದರಿಂದ ಶಿವಮೊಗ್ಗದಿಂದ ಯಶವಂತಪುರಕ್ಕೆ ತೆರಳುವ ರೈಲು 2 ಗಂಟೆ ವಿಳಂಬವಾಗಿತ್ತು. ಯಶವಂತಪುರದಿಂದ ಶಿವಮೊಗ್ಗಕ್ಕೆ ಅಗಮಿಸುವ ರೈಲು 1.20 ಗಂಟೆ ವಿಳಂಬವಾಗಿತ್ತು. ಮರ ಬಿದ್ದಿದ್ದರಿಂದ ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿತ್ತು. ರೈಲ್ವೆ ಇಲಾಖೆ ಸಿಬ್ಬಂದಿ ಅದನ್ನು ಸರಿಪಡಿಸಿ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗ ಸೇರಿ 7 ಜಿಲ್ಲೆಗಳಿಗೆ ಇವತ್ತು ಅಲರ್ಟ್‌, ಹೇಗಿರುತ್ತೆ ಇವತ್ತು ಮಳೆ? ಎಷ್ಟಿರುತ್ತೆ ತಾಪಮಾನ?

[su_divider top=”no” style=”dotted” divider_color=”#b8b8b8″ link_color=”#000000″ margin=”10″]

ಬಾಳೆಬರೆ ಘಾಟಿಯಲ್ಲಿ ಧರೆ ಕುಸಿತ

NEWS-2-jpg.webp ಹೊಸನಗರ: ಬಾಳೆಬರೆ ಘಾಟಿಯಲ್ಲಿ ಧರೆ ಕುಸಿದಿತ್ತು. ರಸ್ತೆ ಮೇಲೆ ಮಣ್ಣ ಬಿದ್ದಿದ್ದರಿಂದ ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು. ಘಾಟಿಯಲ್ಲಿ ಮತ್ತಷ್ಟು ಧರೆ ಕುಸಿಯುವ ಆತಂಕವಿದೆ. ಸದ್ಯ ಮಣ್ಣು ತೆರವು ಮಾಡಲಾಗಿದ್ದು, ವಾಹನ ಸಂಚಾರ ಪುನಾರಂಭವಾಗಿದೆ.

[su_divider top=”no” style=”dotted” divider_color=”#b8b8b8″ link_color=”#000000″ margin=”10″]

ಮರ ಬಿದ್ದು ವಿದ್ಯುತ್‌ ಕಡಿತ

NEWS-3-jpg.webp ಶಿವಮೊಗ್ಗ: ಗೋಪಾಲಗೌಡ ಬಡಾವಣೆ ಬಿ ಬ್ಲಾಕ್‌ನಲ್ಲಿ ಮರ ಧರೆಗುರುಳಿದೆ. ವಿದ್ಯುತ್‌ ತಂತಿಗಳ ಮೇಲೆ ಬಿದ್ದಿದ್ದರಿಂದ ಮೂರಕ್ಕೂ ಹೆಚ್ಚು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಯುವತಿ ಇದ್ದ ಆಂಬುಲೆನ್ಸ್‌ಗೆ ಜೀರೋ ಟ್ರಾಫಿಕ್‌, ವಿಮಾನ ನಿಲ್ದಾಣದಿಂದ ಮುಂಬೈಗೆ ಶಿಫ್ಟ್‌

[su_divider top=”no” style=”dotted” divider_color=”#b8b8b8″ link_color=”#000000″ margin=”10″]

ಯಡೇಹಳ್ಳಿಯಲ್ಲಿ ಮನೆ ಗೋಡೆ ಕುಸಿತ

NEWS-4-jpg.webp ಹೊಳೆಹೊನ್ನೂರು: ಯಡೇಹಳ್ಳಿ ಗ್ರಾಮದಲ್ಲಿನ ನಿವೃತ್ತ ಶಿಕ್ಷಕ ಅಲಗಾಚಾರ್‌ ಅವರ ಮನೆ ಗೋಡೆ ಕುಸಿದಿದೆ. ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. (Shimoga Rain)

[su_divider top=”no” style=”dotted” divider_color=”#b8b8b8″ link_color=”#000000″ margin=”10″]

ಮರ ಉರುಳಿ ಹಾನಿ, ಧರೆ ಕುಸಿತ

NEWS-5-jpg.webp ಹೊಸನಗರ: ನಗರ ಹೋಬಳಿಯ ಮೂಡುಗೊಪ್ಪದಲ್ಲಿ ಮರ ಧರೆಗುರುಳಿದ್ದು, ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ವಿನಾಯಕ ಎಂಬುವವರ ಅಡಿಕೆ ತೋಟಕ್ಕು ಹಾನಿಯಾಗಿದೆ. ನಿಟ್ಟೂರು ಬಳಿ ಜಾಲ ಗ್ರಾಮದಲ್ಲಿ ಮರ ಉರುಳಿ ಶಾರದಮ್ಮ ಎಂಬುವವರ ಮನೆಗೆ ಹಾನಿಯಾಗಿದೆ. ನಗರ ಸಮೀಪದ ಬಸವನಬ್ಯಾಣ ಗ್ರಾಮದಲ್ಲಿ ಧರೆ ಕುಸಿತುಅಡಿಕೆ ತೋಟಕ್ಕೆ ಹಾನಿಯಾಗಿದೆ.

[su_divider top=”no” style=”dotted” divider_color=”#b8b8b8″ link_color=”#000000″ margin=”10″]

ಕಂಬಗಳಿಗೆ ಹಾನಿ, ವಿದ್ಯುತ್‌ ಕಡಿತ

NEWS-6-jpg.webp ಹೊಸನಗರ: ಹೊಸನಗರ ತಾಲೂಕಿನಾದ್ಯಂತ 118ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಇದರಿಂದ ಹಲವೆಡೆ ಕಳೆದ ಎರಡು ದಿನದಿಂದ ವಿದ್ಯುತ್‌ ವ್ಯತ್ಯಯವಾಗಿದೆ. ವಿದ್ಯುತ್‌ ಸಂಪರ್ಕವಿಲ್ಲದೆ ಸ್ಥಳಿಯರು ಸಂಕಷ್ಟಕ್ಕೀಡಾಗಿದ್ದಾರೆ. (Shimoga Rain)

[su_divider top=”no” style=”dotted” divider_color=”#b8b8b8″ link_color=”#000000″ margin=”10″]

ಭದ್ರಾವತಿಯಲ್ಲಿ ಸೇತುವೆ ಮುಳುಗಡೆ

NEWS-7-jpg.webp ಭದ್ರಾವತಿ: ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದರಿಂದ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪಕ್ಕದ ಹೊಸ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಒಂದು ಅಡಿಯಷ್ಟು ನೀರು ಹರಿಯುತ್ತಿದ್ದರಿಂದ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸೇತುವೆಯ ಎರಡು ಬದಿಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಭದ್ರಾ ನದಿಯ ಎರಡು ಬದಿಯಲ್ಲಿ ತಡೆಗೋಡೆ ಇಲ್ಲದ್ದರಿಂದ ನೆರೆ ಭೀತಿ ಎದುರಾಗಿದೆ.

June-2025-Report-Shivamogga-Live-New-New.

[su_divider top=”no” style=”dotted” divider_color=”#b8b8b8″ link_color=”#000000″ margin=”10″]

ಕೆರೆ ಕೋಡಿಗೆ ಬಿದ್ದು ಹೋರಿ ಸಾವು

NEWS-8-jpg.webp ಸೊರಬ: ಗಾಳಿ, ಮಳೆಗೆ ಕ್ಯಾಸನೂರು ಗ್ರಾಮದಲ್ಲಿ ಮರ ಬಿದ್ದು ವಾಸಪ್ಪ ಎಂಬುವವರ ಮನೆಗೆ ಹಾನಿಯಾಗಿದೆ. ಹೊಳೆಜೋಳದಗುಡ್ಡದಲ್ಲಿ ಮಹಾದೇವಪ್ಪ ಅವರಿಗೆ ಸೇರಿದ ಕೊಟ್ಟಿಗೆಯ ಗೋಡೆ ಕುಸಿದಿದೆ. ಮೂಗೂರು ಗ್ರಾಮದ ಬೆನಕಪ್ಪ ಅವರ ಮನೆ, ಕಾತುವಳ್ಳಿಯ ನಾಗಪ್ಪ ಅವರ ಕೊಟ್ಟಿಗೆ ಕುಸಿದಿದೆ. ಚಂದ್ರಗುತ್ತಿ ಹೋಬಳಿಯ ಕಮರೂರು ಗ್ರಾಮದಲ್ಲಿ ಹೋರಿಯೊಂದು ಕೆರೆ ಕೋಡಿಗೆ ಬಿದ್ದು ಸಾವನ್ನಪ್ಪಿದೆ.

Shimoga Rain Report

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 28, 2025

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment