SHIVAMOGGA LIVE NEWS | 23 JULY 2024
ಶಿವಮೊಗ್ಗ
ನ್ಯಾಯಾಲಯದ ಕಲಾಪದಿಂದ ದೂರ ಉಳಿದ ವಕೀಲರು
ಶಿವಮೊಗ್ಗ ಲೈವ್.ಕಾಂ : ಬಾದಾಮಿ ನ್ಯಾಯಾಲಯದ ವಕೀಲರೊಬ್ಬರನ್ನು ಬಂಧಿಸುವ ಆದೇಶ ಖಂಡಿಸಿ ಶಿವಮೊಗ್ಗದಲ್ಲಿ ಇವತ್ತು ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ್ದರು. ಶಿವಮೊಗ್ಗದ ಕೋರ್ಟುಗಳಲ್ಲಿ ವಕೀಲರು ಕಲಾಪಕ್ಕೆ ಹಾಜರಾಗಲಿಲ್ಲ. ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ನ್ಯಾಯವಾದಿಗಳು ಕಲಾಪದಿಂದ ದೂರ ಉಳಿದರು. ಹಾಗಾಗಿ ಇವತ್ತು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದ ಕೇಸುಗಳಿಗೆ ಮುಂದಿನ ದಿನಾಂಕ ನೀಡಲಾಗಿದೆ.
ಶಿವಮೊಗ್ಗ ಲೈವ್.ಕಾಂ
![]() |
ಜಿಲ್ಲಾಧಿಕಾರಿ ಕಚೇರಿ
ಬೆಳೆ ಹಾನಿ, ರೈತರಿಗೆ ಪರಿಹಾರಕ್ಕೆ ಒತ್ತಾಯ
ಶಿವಮೊಗ್ಗ ಲೈವ್.ಕಾಂ : ಬೆಳೆ ಹಾನಿ ಉಂಟಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೆಡಿಎಸ್ ರೈತ ಘಟಕದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನೆಡಸಲಾಯಿತು. ಐಪಿ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ, ಕೃಷಿ ಉಪಕರಣಗಳ ಸಬ್ಸಿಡಿ ಬಿಡುಗಡೆ, ಪಹಣಿಯಲ್ಲಿ ಬೆಳೆ ನಮೂದು ಮಾಡಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರೈತ ಘಟಕದ ಜಿಲ್ಲಾಧ್ಯಕ್ಷ ಎಂ.ದಾನೇಶ್, ಜೆಡಿಎಸ್ ಕಾರ್ಯಾಧ್ಯಕ್ಷ ದಾದಾಪೀರ್, ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜಾ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂ
ಪತ್ರಿಕಾ ಭವನ
ವಿದ್ಯಾದಾನದ ಭೂಮಿಯನ್ನು ರೈತರಿಗೆ ಗುತ್ತಿಗೆ ನೀಡಿ
ಶಿವಮೊಗ್ಗ ಲೈವ್.ಕಾಂ : ಕೆಂಗಲ್ ಹನುಮಂತಯ್ಯ ಅವರು ಸಿಎಂ ಆಗಿದ್ದಾಗ ವಿವಿಧ ಶಾಲೆಗಳಿಗೆ ದಾನಿಗಳಿಂದ ಭೂ ದಾನ ಕೊಡಿಸಿದ್ದರು. ಆ ಜಮೀನು ಈಗಲು ಮೈಸೂರು ಮಹಾರಾಜರ ಹೆಸರಿನಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದ್ದು ಅದನ್ನು ಸರ್ಕಾರದ ಹೆಸರಿಗೆ ಮಾಡಬೇಕು ಎಂದು ಭೂ ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿಯ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ. ಈ ಭೂಮಿಯನ್ನು ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮನಸೋಯಿಚ್ಛೆ ಗುತ್ತಿಗೆಗೆ ನೀಡಿ, ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಸರ್ಕಾರ ಕೂಡಲೆ ಗಮನ ಹರಿಸಿ ಈಗ ಸಾಗುವಳಿ ಮಾಡುತ್ತಿರುವ ರೈತರಿಗೆ 30 ವರ್ಷ ಗುತ್ತಿಗೆಗೆ ನೀಡಿದರೆ ಅನುಕೂಲ ಎಂದು ತಿಳಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ
ಅಬಕಾರಿ ಇಲಾಖೆ ಸಿಬ್ಬಂದಿಗೆ ಕಾರ್ಯಾಗಾರ
ಶಿವಮೊಗ್ಗ ಲೈವ್.ಕಾಂ : ಹೊಸ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಮತ್ತು ಅಬಕಾರಿ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆಗಳ ಕುರಿತು ಅಬಕಾರಿ ಇಲಾಖೆ ಸಿಬ್ಬಂದಿಗೆ ಅರಿವು ಕಾರ್ಯಾಗಾರ ನಡೆಸಲಾಯಿತು. ಈ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸುವ, ತನಿಖಾ ಮತ್ತು ದೋಷಾರೋಪಣೆ ಪಟ್ಟಿ ಸಲ್ಲಿಸುವಾಗ ತನಿಖಾಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಅರಿವು ಮೂಡಿಸಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಅಬಕಾರಿ ಇಲಾಖೆ ಇವರ ಸಹಯೋಗದೊಂದಿಗೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ
ಸೊಪ್ಪು ಚಂದ್ರುಗೆ ಕೆಚ್ಚೆದೆಯ ಕನ್ನಡಿಗ ಪ್ರಶಸ್ತಿ
ಶಿವಮೊಗ್ಗ ಲೈವ್.ಕಾಂ : ಚೈತನ್ಯ ಅಂತಾರಾಷ್ಟ್ರೀಯ ಆರ್ಟ್ಸ್ ಅಕಾಡೆಮಿ ವತಿಯಿಂದ ವಿವಿಧ ಸಾಧನೆ ಮಾಡಿದವರಿಗೆ ಕೆಚ್ಚೆದೆಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಮೊಗ್ಗದ ಸಮಾಜ ಸೇವಕರು, ಉದ್ಯಮಿ ಡಿ.ಎಸ್.ಚಂದ್ರು (ಸೊಪ್ಪು ಚಂದ್ರು) ಅವರಿಗೆ ಪ್ರಶಸ್ತಿ ನೀಡಲಾಗಿದೆ. ಗೆಳೆಯರ ಬಳಗದ ಪ್ರಶಾಂತ್, ಭೀಮಣ್ಣ, ನಾಗರಾಜ್, ಸಂದೀಪ್, ಅಣ್ಣಪ್ಪ ಸೇರಿದಂತ ಹಲವರು ಇದ್ದರು.
ಇದನ್ನೂ ಓದಿ ⇓
ಚಿನ್ನಿಕಟ್ಟೆ ಬಳಿ ಅಪಘಾತ, ಕಾರು ನಜ್ಜುಗುಜ್ಜು, ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200