ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 DECEMBER 2020
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯರು, ಅಧಿಕಾರಿಗಳಿಗೆ ಮೂಕರ್ಜಿ ಸಂಕಷ್ಟ ಶುರುವಾಗಿದೆ. ಸಚಿವರು, ಹಿರಿಯ ಅಧಿಕಾರಿಗಳ ತನಕ ಮೂಕರ್ಜಿಗಳು ತಲುಪಿವೆ.
ಇದನ್ನೂ ಓದಿ | ಕರೋನ ರೂಪಾಂತರ, ಶಿವಮೊಗ್ಗದಲ್ಲಿ 23 ಮಂದಿಗೆ ಸ್ವ್ಯಾಬ್ ಪರೀಕ್ಷೆ, ಬೆಂಗಳೂರಿಗೆ ಮಾದರಿ ರವಾನೆ
ಸಚಿವರಿಗೆ ತಲುಪಿತ್ತು ಮೂಕರ್ಜಿ
ಮೆಗ್ಗಾನ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮೂಕರ್ಜಿ ಕಳುಹಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇವತ್ತು ಆರೋಗ್ಯ ಇಲಾಖೆ, ಮೆಗ್ಗಾನ್ ಆಸ್ಪತ್ರೆ ಆಡಳಿತ ಮಂಡಳಿ ಸಭೆಯಲ್ಲಿ ಸಚಿವ ಈಶ್ವರಪ್ಪ ಅವರು ಈ ವಿಚಾರ ಪ್ರಸ್ತಾಪಿಸಿದರು. ಅಲ್ಲದೆ ತಮ್ಮ ಕೈ ಸೇರಿದ್ದ ಮೂಕರ್ಜಿಯನ್ನು ಓದಿ, ಮೆಗ್ಗಾನ್ ಆಸ್ಪತ್ರೆ ಆಡಳಿತ ಮಂಡಳಿಯಿಂದ ಸ್ಪಷ್ಟನೆ ಕೇಳಿದರು.

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ವಿಡಿಯೋ ವರದಿ ಇಲ್ಲಿದೆ
ಇನ್ಸ್‍ಪೆಕ್ಟರ್ ವಿರುದ್ಧ ಮೂಕರ್ಜಿ
ಮತ್ತೊಂದೆಡೆ ದೊಡ್ಡಪೇಟೆ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ವಸಂತಕುಮಾರ್ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಕಳುಹಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಯ ಎಂಎಸ್ ಡಾ.ಶ್ರೀಧರ್ ಅವರ ಸಹಿಯನ್ನು ನಕಲು ಮಾಡಿ, ಈ ಪತ್ರ ಕಳುಹಿಸಲಾಗಿದೆ. ಹಾಗಾಗಿ ಇದರ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲೂ ರೂಪಾಂತರ ಕರೋನ ಭೀತಿ, ಅಧಿಕಾರಿಗಳ ಜೊತೆ ಮಿನಿಸ್ಟರ್ ಮೀಟಿಂಗ್
ಒಬ್ಬರ ವಿರುದ್ಧ ಮತ್ತೊಬ್ಬರಿಗೆ ಪತ್ರ
ಕೆಲ ಸಮಯದಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂಕರ್ಜಿ ಸಂಕಷ್ಟ ಆರಂಭವಾಗಿದೆ. ಹಿರಿಯ ವೈದ್ಯರ ಹೆಸರಿನಲ್ಲಿ ಸರ್ಕಾರಕ್ಕೆ, ಇಲಾಖೆಯ ಅಧಿಕಾರಿಗಳಿಗೆ ಪತ್ರ ಕಳುಹಿಸಲಾಗುತ್ತಿದೆ. ಇದು ಮೆಗ್ಗಾನ್ ಆಸ್ಪತ್ರೆಯ ಆಡಳಿತ ಮಂಡಳಿ ಮೇಲೆ ಪರಿಣಾಮ ಬೀರುತ್ತಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

LATEST NEWS
- ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

- ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

- ಮಾರ್ಚ್ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

- ಸಹ್ಯಾದ್ರಿ ಕಾಲೇಜಿನಲ್ಲಿ ಸಹ್ಯಾದ್ರಿ ಸಿರಿ, ಹೇಗಿತ್ತು ವಿದ್ಯಾರ್ಥಿಗಳ ಸಂಭ್ರಮ?

- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು
















