ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ (Government) ಅಧಿಕಾರಕ್ಕೆ ಬಂದಾಗಲೆಲ್ಲ ದೇಶ ವಿರೋಧಿಗಳಿಗೆ ಶಕ್ತಿ ಬರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಪತ್ರಿಕಾ ಭವನದ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ದೇಶ ವಿರೋಧಿ ಚಿಂತನೆ ಮತ್ತು ಶಕ್ತಿಗಳು ಹೆಚ್ಚುತ್ತವೆ. ಇದಕ್ಕೆ ಭದ್ರಾವತಿ, ಶೃಂಗೇರಿ, ಸಾಗರ, ಮದ್ದೂರಿನಲ್ಲಿ ನಡೆದಿರುವ ಘಟನೆಗಳೆ ಸಾಕ್ಷಿ. ಈ ಬಗ್ಗೆ ಕ್ರಮ ಕೈಗೊಳ್ಳದೆ ಸುಮ್ಮನಾಗಿರುವುದು ಖಂಡನೀಯ ಎಂದರು.
ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಹಾಗೂ ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ. ಆದರೆ ಹಿಂದುಗಳ ರಕ್ಷಣೆಗೆ ನಿಂತ, ಅವರ ಪರವಾಗಿ ಮಾತನಾಡಿದ ಸಿ.ಟಿ.ರವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ದುಷ್ಟಕೂಟಗಳ ವಿರುದ್ಧ ನಾವು ನಿಲ್ಲಬೇಕಿದೆ ಎಂದರು.

ಬಾನು ಮುಸ್ತಾಕ್ ಬಗ್ಗೆ ಗೌರವವಿದೆ. ಭುವನೇಶ್ವರಿ ಮತ್ತು ಅರಿಶಿನ, ಕುಂಕುಮದ ಬಗ್ಗೆ ಬೆಲೆ ಇಲ್ಲದೆ ಮಾತನಾಡುವ ಅವರು ಯೋಚನೆ ಮಾಡಬೇಕಿತ್ತು. ತಾಯಿ ಭುವನೇಶ್ವರಿ ಬಗ್ಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿರುವ ಅವರು ದಸರಾ ಉದ್ಘಾಟಿಸುವುದು ಎಷ್ಟು ಸರಿ.
- ಬಿ.ವೈ.ರಾಘವೇಂದ್ರ, ಸಂಸದ
![]()

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮುಗಿಬಿದ್ದು ಫೈನ್ ಕಟ್ಟಿದ ಜನ, ಕೊನೆ ದಿನ ಸಂಗ್ರಹವಾಯ್ತು ₹50 ಲಕ್ಷ ದಂಡ, ಒಟ್ಟು ಎಷ್ಟಾಗಿದೆ?

anti social elements during congress Government
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು





