ಶಿವಮೊಗ್ಗದಲ್ಲಿ ಬಲೆ ಹಾಕಿ ಬೀದಿ ನಾಯಿ ಹಿಡಿದು ಕ್ರೂರವಾಗಿ ಹತ್ಯೆ, ಸಿಸಿಟಿವಿ ದೃಶ್ಯ ವೈರಲ್‌

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಬೀದಿ ನಾಯಿಗೆ ಬಲೆ ಹಾಕಿ ಹಿಡಿದು ಕ್ರೂರವಾಗಿ ಹೊಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯ ಸೂರಜ್.ಎಸ್ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎಲ್ಲಿ ಆಗಿದ್ದು? ಹೇಗಾಯ್ತು ಘಟನೆ?

ಹಂದಿ ಹಿಡಿಯುವ ಗುಂಪೊಂದು ಬೀದಿ ನಾಯಿಯೊಂದನ್ನು ಬಲೆಯಲ್ಲಿ ಸೆರೆಹಿಡಿದು ದೊಣ್ಣೆಯಿಂದ ಹೊಡೆದು ಸಾಯಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನವೆಂಬರ್ 28ರ ಬೆಳಗ್ಗೆ 8.16ಕ್ಕೆ ಶಿವಮೊಗ್ಗದ ಗೋಪಾಳ ಪೊಲೀಸ್ ಲೇಔಟ್‌ನ ವೃದ್ಧಾಶ್ರಮದ ಎದುರು ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

Attack-on-Street-dog-at-gopala-in-Shimoga

ಇದನ್ನೂ ಓದಿ » ಕೋಣಂದೂರು ಬಳಿ ಡೆತ್‌ ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ನಾಯಿ ಹಿಡಿದು ಕ್ರೂರವಾಗಿ ಹತ್ಯೆ

ಘಟನೆ ನಡೆದ ಸ್ಥಳದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಬೀದಿ ನಾಯಿ ಹಿಡಿದು ಕ್ರೂರವಾಗಿ ಹತ್ಯೆ ಮಾಡಿರುವ ದೃಶ್ಯ ಕಂಡುಬಂದಿದೆ. ಸೂರಜ್ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆ-1960ರ ಕಲಂ11 (1) ಮತ್ತು ಭಾರತೀಯ ನ್ಯಾಯ ಸಂಹಿತೆ ಕಲಂ 325ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment